UK Suddi
The news is by your side.

ವರ್ಷಗಳ ನಂತರ ಒಂದೆಡೆ ಸೇರಿದ ಮಾಜಿ ಸಿಎಂಗಳು-ಸಮ್ಮಿಶ್ರ ಸರ್ಕಾರದ ಏನು ಭವಿಷ್ಯ ಏನು ಹೇಳಲಿ ಅಂದ್ರು ಕೃಷ್ಣ.

ಕೋಲಾರ:ಕಳೆದ ಹಲವು ವರ್ಷಗಳಿಂದ ರಾಜಕೀಯ ಚಟುವಟಿಕೆಗಳಿಂದ ದೂರವಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ,ಬಿಜೆಪಿ ಮುಖಂಡ ಭಾನುವಾರ ಕೋಲಾರದಲ್ಲಿ ಮಾಜಿ ಸಚಿವ, ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯ ನಾನು ರಾಜಕೀಯ ಕ್ಷೇತ್ರದಿಂದ ದೂರ ಇದ್ದೇನೆ.ನನ್ನ ಭವಿಷ್ಯವೇ ನನಗೆ ಗೊತ್ತಿಲ್ಲ. ಸಮ್ಮಿಶ್ರ ಸರಕಾರದ ಭವಿಷ್ಯದ ಬಗ್ಗೆ ಏನು ಹೇಳಲಿ? ಹಾಗಾಗಿ ಸಮ್ಮಿಶ್ರ ಸರಕಾರದ ಭವಿಷ್ಯವನ್ನು ಹೇಳುವ ಸ್ಥಿಯಲ್ಲಿಲ್ಲ ಎಂದು ಹೇಳಿದರು.

ಮಂಡ್ಯ ಲೋಕಸಭಾ ಚುನಾವಣ ಸಂಬಂಧಿಸಿದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಸ್ಪರ್ಧೆ ಆಯಾ ಪಕ್ಷಕ್ಕೆ ಸೇರಿದ ವಿಚಾರ ಎಂದು ಹೇಳಿದರು.

ಇದಕ್ಕೂ ಮೊದಲು ಎಸ್ ಎಂ ಕೃಷ್ಣ ಅವರು ಕೋಲಾರ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರು. ಇಬ್ಬರೂ ಉಭಯ ಕುಶಲೋಪರಿ ಹಂಚಿಕೊಂಡು ಚಹಾ ಸೇವಿಸಿದರು.

Comments