UK Suddi
The news is by your side.

ಸಚಿವ ಸಿಎಸ್ ಶಿವಳ್ಳಿ ಆರೋಗ್ಯದಲ್ಲಿ ಏರುಪೇರು-ಕಿಮ್ಸ್ ಗೆ ದಾಖಲು.

ಹುಬ್ಬಳ್ಳಿ: ಕುಂದಗೋಳ ಮತಕ್ಷೇತ್ರದ ಶಾಸಕ,ಪೌರಾಡಳಿತ ಸಚಿವ ಚನ್ನಬಸಪ್ಪ ಎಸ್ ಶಿವಳ್ಳಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು,ನಿನ್ನೆ ರಾತ್ರಿ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಭಾನುವಾರ ಕುಂದಗೋಳ ಕ್ರಾಸ್ ಸಮೀಪದ ಕರಡಿಕೊಪ್ಪ ಗ್ರಾಮದ ಕಾಯಕ್ರಮ ಮುಗಿಸಿ ವಾಪಸ್ ಬರುವಾಗ ಸಚಿವ ಶಿವಳ್ಳಿ ವಾಂತಿ ಮಾಡಿಕೊಂಡಿದ್ದು ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.

ಕಾರ್ಯಕ್ರಮದ ನಂತರ ಉಪ್ಪಿಟ್ಟು ಸೇವಿಸಿದ್ದರಿಂದಲೇ ವಾಂತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಸಚಿವರ ಗನ್ ಮ್ಯಾನ್ ಹಾಗೂ ಆಪ್ತಕಾರ್ಯದರ್ಶಿ ಸೇರಿದಂತೆ ನಾಲ್ಕು ಜನರಿಗೂ ಸಹ ವಾಂತಿಯಾಗಿದೆ.

ಈ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Comments