UK Suddi
The news is by your side.

20ದಿನ ಕಳೆದರು ಪೊಲೀಸರ ಕೈಗೆ ಸಿಗದ ಶಾಸಕ ಗಣೇಶ.

ಬೆಂಗಳೂರು: ಹೊಸಪೇಟೆಯ ವಿಜಯ ನಗರ ಶಾಸಕ ಆನಂದ ಸಿಂಗ್ ಮೇಲೆ ಹಲ್ಲೆ ನಡೆಸಿ ತೆಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶ ಗಲಾಟೆ ನಡೆದು ಇಪ್ಪತ್ತು ದಿನಗಳು ಕಳೆದರು ಪೊಲೀಸರ ಕೈಗೆ ಸಿಕ್ಕಿಲ್ಲ.

ಕೆಲ ದಿನಗಳ ಹಿಂದೆ ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಹೊಸಪೇಟೆ ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ನಡುವೆ ಗಲಾಟೆ ನಡೆದಿತ್ತು.ಆನಂತರ ಅಲ್ಲಿಂದ ಹೊರಬಂದ ಗಣೇಶ್ ಯಾರ ಕೈಗೂ ಸಿಗದೆ,ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಓಡಾಡಿಕೊಂಡಿದ್ದಾರೆ.

ರಾಮನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧೀಕಾರಿ ರಮೇಶ ಬಾಬು ಅವರು ಬಿಡದಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸೇರಿದಂತೆ ಹಲವು ಅಧಿಕಾರಿಗಳ ನಾಲ್ಕು ಪ್ರತ್ಯೇಕ ತಂಡ ರಚನೆ ಮಾಡಿದ್ದರೂ ಈವರೆಗೆ ಶಾಸಕ ಗಣೇಶ್ ಅವರನ್ನು ಹಿಡಿಯಲು ಸಾಧ್ಯವಾಗಿಲ್ಲ.

ಶಾಸಕ ಜೆ ಎನ್ ಗಣೇಶಗಾಗಿ ಶೋಧ ಕಾರ್ಯ ಮುಂದುವರೆದಿದೆ.

Comments