UK Suddi
The news is by your side.

SRS-NEKSRTC ಬಸ್ ಡಿಕ್ಕಿ-ಸ್ಥಳದಲ್ಲೇ ಸಾವನ್ನಪ್ಪಿದ ಚಾಲಕ.

ಬಳ್ಳಾರಿ: ಸ್ಲೀಪರ್ ಕೋಚ್ ಬಸ್ ಗಳು ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ,18 ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯ ಮೊರಬ ಕ್ರಾಸ್ ಬಳಿ SRS ಸ್ಲೀಪರ್ ಮತ್ತು NEKSRTC ಕರೋನ ಸ್ಲೀಪರ್ ಕೋಚ್ ಬಸ್ ಮುಖಾಮುಖಿ ಡಿಕ್ಕಿಯಾಗಿವೆ.

ಅಪಘಾತದಲ್ಲಿ NEKSRTC ಕರೋನ ಸ್ಲೀಪರ್ ಬಸ್ ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ 18 ಮಂದಿಯನ್ನು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೂಡ್ಲಿಗಿ ಪೋಲಿಸರು ಸ್ಥಳಕ್ಕೆ‌ ಭೇಟಿ ನೀಡಿದ್ದು,ಪರಿಶೀಲನೆ ನಡೆಸುತ್ತಿದ್ದಾರೆ.

Comments