UK Suddi
The news is by your side.

ಮಾಜಿ ಶಾಸಕರಿಂದ ಉಚಿತವಾಗಿ ‘ಉರಿ’ ಚಿತ್ರ ಪ್ರದರ್ಶನ

ಬೆಂಗಳೂರು: ‘ಉರಿ ದಿ ಸರ್ಜಿಕಲ್​ ಸ್ಟ್ರೈಕ್​’ ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯೊಬ್ಬರು ಉರಿ ಚಿತ್ರದ ಉಚಿತ ಶೋ ಅನ್ನು ಏರ್ಪಡಿಸುವ ಮೂಲಕ ಗಮನ ಸೆಳೆದಿದ್ದಾರೆ, ಉಗ್ರರ ವಿರುದ್ಧ ಭಾರತೀಯ ಯೋಧರು ಮಾಡಿದ ಸರ್ಜಿಕಲ್​ ದಾಳಿ ಆಧರಿತ, ದೇಶಪ್ರೇಮ ಸಾರುವ ಚಿತ್ರ ಇದಾಗಿದೆ.

ಮಾಜಿ ಶಾಸಕ ನಂದೀಶ್ ರೆಡ್ಡಿ ಅವರು ಬೆಂಗಳೂರು ಉತ್ತರದ ಮೇಲೆ ಕಣ್ಣಿಟ್ಟಿದ್ದು, ಸಾರ್ವಜನಿಕರಿಗೆ ‘ಉರಿ’ ಚಿತ್ರದ ಉಚಿತ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಬೆಂಗಳೂರಿನ ಮಾರತ್ತಹಳ್ಳಿಯ ರಿಂಗ್ ರಸ್ತೆಯ ಅರೇನಾ ಮಾಲ್​​ನಲ್ಲಿ ಉಚಿತ ಪ್ರದರ್ಶನ ಇಂದು ಬೆಳಗ್ಗೆ 9 ಗಂಟೆಯಿಂದ ಆರಂಭವಾಗಿದ್ದು, 8 ದಿನಗಳ ಕಾಲ ಸಾರ್ವಜನಿಕರು ಉಚಿತವಾಗಿ ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಉರಿ ಚಿತ್ರದಲ್ಲಿ ಭಾರತೀಯ ಯೋಧರ ಶಕ್ತಿ ಸಾಮರ್ಥ್ಯವನ್ನು ನಿರ್ದೇಶಕ ಆದಿತ್ಯಾ ಧಾರ್​ ತೆರೆಯ ಮೇಲೆ ತೋರಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್​ ಅವರು ಉರಿ ಚಿತ್ರದ ವೀಕ್ಷಣೆಗಾಗಿ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದಾರೆ.

Comments