UK Suddi
The news is by your side.

ರಾಜ್ಯ ಮಟ್ಟದ ಕವನ ಸಂಕಲನಕ್ಕೆ ಕವನಗಳ ಆಹ್ವಾನ

ಬೆಳಗಾವಿ:ತ್ರಿವಿಧ ದಾಸೋಹಿಗಳು ಬಸವತತ್ವ ಆರಾಧಕರು 21ನೆಯ ಶತಮಾನದ ನಡೆದಾಡುವ ದೇವರು ಎಂದು ಖ್ಯಾತಿ ಹೊಂದಿದ್ದ ತುಮಕೂರು ಶ್ರೀ ಸಿದ್ಧಗಂಗಾ ಮಠದ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಮತ್ತು ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಗೌರವಾರ್ಥ ವಿಶ್ವ ವಿಕಾಸ ಫೌಂಡೇಷನ್ ರಾಜ್ಯ ಮಟ್ಟದ ಪ್ರಾತಿನಿಧಿಕ ಕವನ ಸಂಕಲನ ಹೊರತರಲು ಆಯೋಜಿಸಿದೆ.

ಆಸಕ್ತ ಕವಿಗಳು ಶ್ರೀಗಳ ಜೀವನ, ಸಾಧನೆ, ನಾಡು-ನುಡಿಗೆ ಸಲ್ಲಿಸಿದ ಸೇವೆ, ಅನ್ನದಾಸೋಹ, ಜ್ಞಾನದಾಸೋಹ, ಕೃಷಿ, ವಿಜ್ಞಾನ, ಮಾಹಿತಿ ತಂತ್ರಜ್ಞಾನ ಮುಂತಾದ ವಿಷಯಗಳ ಜತೆಗೆ ಪರಿಸರ ಕಾಳಜಿ ರಾಷ್ಟ್ರಾಭಿಮಾನ ಇತ್ಯಾದಿ ಪ್ರಚಲಿತ ವಿದ್ಯಮಾನ ಅವಲೋಕಿಸಿ 21 ಸಾಲುಗಳು ಮೀರದಂತೆ ಕಾಗದದ ಒಂದೇ ಮಗ್ಗುಲಲ್ಲಿ ಕವನ ಬರೆದು ಅಥವಾ ಡಿ.ಟಿ.ಪಿ ಮಾಡಿಸಿ ಸ್ವ ವಿಳಾಸ , ಕಿರುಪರಿಚಯ, ಭಾವಚಿತ್ರ, ವಾಟ್ಸಪ್ ನಂಬರ್ ಹಾಗೂ ಮೊಬೈಲ್ ನಂಬರ್‍ನೊಂದಿಗೆ ಫೆಬ್ರುವರಿ 28ರೊಳಗೆ ಮೋಹನ ಬಸವನಗೌಡ ಪಾಟೀಲ, ಮಾಜಿ ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು “ಬಸವ ನಿವಾಸ” ಚನ್ನಮ್ಮ ನಗರ 1ನೆಯ ಅಡ್ಡ ರಸ್ತೆ, ಬೈಲಹೊಂಗಲ-591102, ಬೆಳಗಾವಿ ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ 9448920888 ಗೆ ಸಂಪರ್ಕಿಸಬೇಕೆಂದು ಕವನ ಸಂಕಲನದ ಸಂಪಾದಕರಾದ ಸ. ರಾ. ಸುಳಕೂಡೆ ತಿಳಿಸಿದ್ದಾರೆ.

Comments