UK Suddi
The news is by your side.

ಅನುಮಾನಾಸ್ಪದವಾಗಿ ಸಾವನ್ನಪ್ಪಿದ 93 ಮಂಗಗಳು:ಆತಂಕದಲ್ಲಿ ಜಿಲ್ಲೆಯ ಜನತೆ.

ಕಾರವಾರ:ಶಿವಮೊಗ್ಗ ಜಿಲ್ಲೆಯಲ್ಲಿ 10 ಜನರನ್ನು ಬಲಿ ತೆಗೆದುಕೊಂಡ ಮಹಾಮಾರಿ ಮಂಗನ ಖಾಯಿಲೆಯು ನೆರೆಯ ಉತ್ತರ ಕನ್ನಡ ಜಿಲ್ಲೆಗೂ ಆವರಿಸಿದೆ.

ಕೆಲವು ದಿನಗಳ ಹಿಂದಷ್ಟೇ ಸಿದ್ದಾಪುರದಲ್ಲಿ ಕಾಣಿಸಿಕೊಂಡ ಮಂಗನಕಾಯಿಲೆ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು.

ಮಂಗನ ಖಾಯಿಲೆ ಪರಿಣಾಮ ಶಿರಸಿ,ಯಲ್ಲಾಪುರ, ಹಳಿಯಾಳ,ಹೊನ್ನಾವರ,ಕುಮಟಾ ಈಗ ಅಂಕೋಲಾಕ್ಕೂ ಹರಡಿದೆ.ಮಹಾ ಮಾರಿ ಮಂಗನ ಖಾಯಿಲೆಗೆ ಜಿಲ್ಲೆಯಲ್ಲಿ 93 ಮಂಗಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು,ಐದು ಮಂಗಗಳಲ್ಲಿ ವೈರಾಣು ಪತ್ತೆಯಾಗಿ,4ಜನರಲ್ಲಿ ಮಂಗನ ಖಾಯಿಲೆ ವೈರಾಣು ಪತ್ತೆಯಾಗಿದ್ದು ಅದರಲ್ಲಿ ಇಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ.

ಕಾರವಾರ ತಾಲೂಕಿನ ಅಂಕೋಲಾದ ಅವರ್ಸಾ ಗ್ರಾಮದಲ್ಲಿ ಎರಡು ಮಂಗಗಳು ಸಾವನ್ನಪ್ಪಿರುವ ಸುದ್ದಿ ಕೇಳಿ ಜಿಲ್ಲೆಯ ತುಂಬಾ ಮಂಗನ ಖಾಯಿಲೆಯ ಆತಂಕ ಸೃಷ್ಟಿಸಿದೆ.

Comments