UK Suddi
The news is by your side.

ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ವೆಬ್ಸೈಟ್ ಲಾಂಚ್.

ಹಾವೇರಿ:ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ಈಗಾಗಲೇ ಎಲ್ಲರಿಗೂ ತಿಳಿದಂತೆ ಅಪ್ಪಟ ,ಅಪ್ರತಿಮ ಸಾಧಕರನ್ನು ಗುರುತಿಸಿ ಅವರ ಸಾಧನೆಯನ್ನು ತಿಳಿದು ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆ ಮಾಡುವ ಕಾರ್ಯ ಮಾಡುತ್ತಲಿದ್ದು ಈ ಸಂಸ್ಥೆಯ ವೆಬ್ಸೈಟ್ ನ್ನು ಹಾಗೂ ಆಫೀಸಿಯಲ್ ಫೇಸ್ಬುಕ್ ಪೇಜ್ ನ್ನು ಸಂಸ್ಥಾಪಕ ಅಧ್ಯಕ್ಷರಾದ ಡಾ.ಅಂಬಿಕಾ ಹಂಚಾಟೆಯವರು ಅಧಿಕೃತವಾಗಿ ಬುಧವಾರದಂದು ಹಾವೇರಿ ತಾಲೂಕು, ಹಾವೇರಿ ಜಿಲ್ಲೆಯ ಅಂಗನವಾಡಿ ಕೇಂದ್ರ -214 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಉಮಾ ಕೆ ಹಾಗೂ ಶಿಶು ಅಭಿವೃದ್ಧಿ ಮೇಲ್ವಿಚಾರಕರಾದ ಶ್ರೀಮತಿ ತೇಜಸ್ವಿನಿಯವರು ಲಾಂಚ್ ಮಾಡಿದರು.

ಇದೆ ಸಂದರ್ಭದಲ್ಲಿ ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ನ ಕ್ಯಾಲೆಂಡರ್ ಸಹ ಬಿಡುಗಡೆ ಮಾಡಲಾಗಿದ್ದು,ಹಾವೇರಿ ಜಿಲ್ಲೆ ಅಗಡಿ ತಾಲೂಕಿನ ಅಕ್ಕಿಮಠದ ಶ್ರೀಗಳಾದ ಶ್ರೀ ಶ್ರೀ ಗುರುಲಿಂಗಸ್ವಾಮಿ ಹಿರೇಮಠ ಸ್ವಾಮಿಜಿಯವರನ್ನು ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೇಕರ್ಡ್ನ ನ ಅಂಬಾಸಡರ್ (ರಾಯಭಾರಿ)ನ್ನಾಗಿ ಸಂಸ್ಥೆಯು ಆಯ್ಕೆಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ್ಯೆ ಡಾ.ಅಂಬಿಕಾ ಹಂಚಾಟೆಯವರು ತಿಳಿಸಿದ್ದಾರೆ.

ಜೊತೆಗೆ ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೇಕಾರ್ಡ್ನಲ್ಲಿ ಹೊಸ ದಾಖಲೆ ಬರೆದ ಶ್ರೀ ಮಂಜುನಾಥ ಬಾರ್ಗೆರ್ (ಮೈಕ್ರೋ ಆರ್ಟ್ ಇನ್ ಸೇವ್ ಚೈಲ್ಡ್ ),ಶ್ರೀ ದಾವಲ್ ಮಲಿಕ್ (15 ಪದಕಗಳ ವಿಜೇತ ಸ್ಕೌಟ್ ಅಂಡ್ ಗೈಡ್ಸ್ ,ರಾಷ್ಟ್ರಪತಿ ಪದಕ), ಶ್ರೀಮತಿ ಸರೋಜಿನಿ ಭದ್ರಾಪುರ್ (ಸೀನಿಯರ್ ಸಿಟಿಜನ್ ವಿಭಾಗದಲ್ಲಿ ಇನ್ಸ್ಪಿರೇಷನ್ ಲೇಡಿ ಅಟ್ 74), ವೈದೃತಿನಾಗ್ ಕೋರಿಶೆಟ್ಟರ್ (7 ವರುಷದ ಬಾಲಕಿ ಗೂಗಲ್ ಗರ್ಲ್), ಶಿವಕುಮಾರ್ ಹಡಪದ್ (ಏಕಕಾಲಕ್ಕೆ ಸ್ವ ರಚಿತ 8 ಪುಸ್ತಕಗಳ ಬಿಡುಗಡೆ )ಈ ಸಾಧಕರನ್ನು ಕೆ.ಡಿ.ಪಿ ಮೆ0ಬರ್ರ್ ,ಹಾವೇರಿ. ಜಿಲ್ಲೆಯ ಕಾಂಗ್ರೆಸ್ ಸ್ಪೋಕ್ ಪರ್ಸನ್ ಆದ ಶ್ರೀಮತಿ ಜಯಶ್ರೀ ಶಿವಪುರ್ ರವರು ಸನ್ಮಾನಿಸಿದರು.ಹಾಗೂ ಇದೆ ಸಂಧರ್ಭದಲ್ಲಿ ಅಂಗನವಾಡಿ ಕೇಂದ್ರದ ಶಿಕ್ಷಕಿಯರಾದ ಶ್ರೀಮತಿ ವಿಜಯಲಕ್ಷ್ಮಿ ಇವರನ್ನು ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೇಕರ್ಡ್ ನ ವತಿಯಿಂದ ನೆನಪಿನ ಕಾಣಿಕೆಯೊಂದಿಗೆ ಸರ್ವ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ನ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ಈ ಕೆಳಗಿನ ವೆಬಸೈಟ್ ಅಲ್ಲಿ ನೋಡಬಹುದಾಗಿದೆ ಎಂದು ತಿಳಿಸಲಾಗಿದೆ .

https://www.karnatakaachieversbookofrecords.com

Comments