UK Suddi
The news is by your side.

ಅತ್ಯಾಧುನಿಕ ತಂತ್ರಜ್ಞಾನದ ಕೋಡ್ಕಣಿ ಆಸ್ಪತ್ರೆ ಶಾಖೆ ಇನ್ನೂ ಬೆಳಗಾವಿಯಲ್ಲಿ

ಬೆಳಗಾವಿ: ಕಣ್ಣಿನ ಆಸ್ಪತ್ರೆಗಳಲ್ಲಿ ಪ್ರಸಿದ್ಧಿ ಪಡೆದ ಡಾ. ಕೋಡ್ಕಣಿಯ ಕಣ್ಣಿನ ಆಸ್ಪತ್ರೆಯ ಮತ್ತೊಂದು ಶಾಖೆಯನ್ನು ಅಯೋದ್ಯಾ ನಗರದಲ್ಲಿ ಆರಂಭಿಸಿದ್ದು ಫೆಬ್ರವರಿ 10 ರಂದು ಉದ್ಘಾಟನೆ ಮಾಡಲಾಗುತ್ತದೆ ಎಂದು ಡಾ. ಶಿಲ್ಪಾ ಕೋಡ್ಕಣಿ ಹೇಳಿದರು.

ಇಂದು ಬೆಳಗಾವಿ ನಗರದಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಬೆಳಗಾವಿಯಲ್ಲಿ 2000ರಲ್ಲಿ ಪ್ರಾರಂಭವಾದ ಕೋಡ್ಕಣಿ ಆಸ್ಪತ್ರೆಯ ಮತ್ತೊಂದು ಶಾಖೆಯನ್ನು ಅಯೋದ್ಯಾ ನಗರದಲ್ಲಿ ಪ್ರಾರಂಭಿಸಲಾಗಿದ್ದು ಪೆಬ್ರುವರಿ 10ಕ್ಕೆ ಉದ್ಘಾಟನೆ ಮಾಡಲಾಗುತ್ತದೆ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಡಾ.ಎಂ.ಎಂ ಜೋಷಿ, ನಟ ಮೃನಾಲ ಕುಲಕರ್ಣಿ ಉದ್ಘಾಟನೆ ಮಾಡಲಿದ್ದಾರೆ ಎಂದರು.

ಬೆಳಗಾವಿಯಲ್ಲೆ ಪ್ರಥಮ ಬಾರಿಗೆ ಝೆಪ್ಟೋ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸೌಲಭ್ಯವನ್ನು ಕಲ್ಪಿಸಲಾಗಿದೆ ಮತ್ತು ಮಕ್ಕಳ ಕಣ್ಣಿನ ಧೋಷ ನಿವಾರಣೆಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ ಎಂದರು.

Comments