UK Suddi
The news is by your side.

ಅದು ಬಿ.ಎಸ್.ವೈ ಧ್ವನಿ ಎಂದು ನಾನು ಹೇಳಿಯೇ ಇಲ್ಲ: ಸಿಎಂ ಕುಮಾರಸ್ವಾಮಿ.

ಮಂಗಳೂರು: ನಿನ್ನೆ ಆಡಿಯೋ ಬಿಡುಗಡೆ ಮಾಡಿ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟುಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಇದೀಗ ಆಡಿಯೋದಲ್ಲಿರುವ ಧ್ವನಿ ಬಿಎಸ್ ವೈ ದ್ದು ಅಂತ ತಾವು ಹೇಳಿಯೇ ಇಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಆಡಿಯೋದಲ್ಲಿರುವ ಧ್ವನಿ ಯಾರದೆಂದು ಪತ್ತೆ ಹಚ್ಚಲು ತನಿಖೆಯಾಗಬೇಕು. ತನಿಖೆಗೆ ಮೋದಿ ಸಹಕಾರ ನೀಡಬೇಕು. ಮೋದಿ ನೇತೃತ್ವದಲ್ಲಿಯೇ ತನಿಖೆಗೆ ಆದೇಶ ನೀಡುವುದಾಗಿ ಅವರು ಮಂಗಳೂರಿನಲ್ಲಿ ಹೇಳಿದ್ದಾರೆ.

ತನಿಖೆಯ ನಂತರವೇ ಸತ್ಯಾಸತ್ಯತೆ ಹೊರಬೀಳಲಿದೆ ಎಂದೂ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.

Comments