UK Suddi
The news is by your side.

ಕಣ್ಮನ ಸೆಳೆದ ಸರಕಾರಿ ಯೋಜನೆಗಳ ವಸ್ತು ಪ್ರದರ್ಶನ.

ಧಾರವಾಡ:ಮುರುಘಾಮಠದ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಸರಕಾರದ ಯೋಜನೆಗಳ ಕುರಿತು ಸಾರ್ವಜನಿಕರ ಮಾಹಿತಿಗಾಗಿ ಶುಕ್ರವಾರದಿಂದ ಪ್ರಾರಂಭವಾದ ವಸ್ತುಪ್ರದರ್ಶನ ಸಾರ್ವಜನಿಕರ ಗಮನ ಸೇಳೆಯುತ್ತಿದೆ.

ವಸ್ತುಪ್ರದರ್ಶನದಲ್ಲಿ ಮಾತೃಶ್ರಿ, ಬಡವರ ಬಂಧು ಅಮೃತ ಯೋಜನೆ, ಹಸಿರು ಕರ್ನಾಟಕ, ಜನತಾ ದರ್ಶನ, ಋಣ ಮುಕ್ತ ಪರಿಹಾರ ಕಾಯ್ದೆ, ಕಾಯಕ ಯೋಜನೆಗಳು ಜನರ ಮತ್ತು ವಿದ್ಯಾರ್ಥಿಗಳ ಗಮನ ಸೆಳೆಯುತ್ತಿವೆ.
ಹಲವು ಯೋಜನೆಗಳ ಮಾಹಿತಿ: ಮುಖ್ಯಮಂತ್ರಿ ಕುಮಾರಸ್ವಾಮಿ ಜಾರಿಗೆ ತಂದಿರುವ ಬೆಳೆ ಸಮೀಕ್ಷೆ, ಶಾಲಾ ಕಾಲೇಜುಗಳಿಗೆ ಸೌಕರ್ಯ, ದಿಶಾ, ಬಡ್ಡಿ ರಹಿತಿ ಸಾಲ ನೀಡುವ ಕಾಯಕ ಯೋಜನೆ, ಅವಕಾಶ ವಂಚಿತರ ಅಭ್ಯುದಯಕ್ಕೆ ಮಹಾಹೆಜ್ಜೆ ಕೈಗಾರಿಕಾ ಕ್ಲಸ್ಟರ್ ಯೋಜನೆ, ಮಾತೃಶ್ರಿ ಯೋಜನೆ, ನಿರುದ್ಯೊಗಿ ನಿವಾರಣೆಗೆ ನಿಶ್ಚಯ ಯೋಜನೆ, ಆಧುನಿಕ ಕೃಷಿ ಯೋಜನೆ, ಆಯುಷ್ಮಾನ್ ಭಾರತ, ಕರ್ನಾಟಕ ರೈತ ಬಂಧು ಸೇರಿದಂತೆ ವಿವಿಧ ಯೋಜನೆಗಳ ಚಿತ್ರಣಗಳ ವಸ್ತು ಪ್ರದರ್ಶನವನ್ನು ಸಾರ್ವಜನಿಕರು, ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ. ಮುರುಘಾಮಠದ ಆವರಣದಲ್ಲಿರುವ ಮೃತ್ಯುಂಜಯ ಪ್ರೌಢ ಶಾಲೆ ಮೈದಾನದ ಪಕ್ಕದಲ್ಲಿ ವಸ್ತು ಪ್ರದರ್ಶನವನ್ನು ಆಯೋಜಿಸಿದ್ದರಿಂದ ವಿವಿಧ ಗ್ರಾಮ, ಜಿಲ್ಲೆಗಳಿಂದ ಆಗಮಿಸುವ ಶ್ರಿ ಮುರುಘಾಮಠದ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ.
ವಸ್ತು ಪ್ರದರ್ಶನ ಶುಕ್ರವಾರದಿಂದ ಶ್ರಿ ಮಠದ ಜಾತ್ರೆ ಮುಕ್ತಾಯವಾಗುವವರೆಗೆ ನಡೆಯಲಿದೆ.

-Dharawad VB

Comments