UK Suddi
The news is by your side.

ನವಿಲು ತೀರ್ಥದಿಂದ ಮಲಪ್ರಭಾ ನದಿಗೆ ನೀರು ಹರಿಸಲು ಒತ್ತಾಯ.

ಹುನಗುಂದ(ಬಾಗಲಕೋಟ):ನವಿಲುತೀರ್ಥ ಜಲಾಶಯದಿಂದ ಮಲಪ್ರಭೆ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ತಾಲೂಕ ರೈತ ಸಂಘ ತಹಶೀಲ್ದಾರ ಕಛೇರಿ ಮುಂದೆ ಪ್ರತಿಭಟನೆ ನಡಿಸಿ ಗ್ರೇಡ್-2 ತಹಶೀಲ್ದಾರಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನಿರತ ರೈತ ಮುಖಂಡ ಮಲ್ಲಣ್ಣ ಬಿಸರಡ್ಡಿ ಮಾತನಾಡಿ ಈ ಬಾರಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದರಿಂದ ಜನವರಿ ತಿಂಗಳಲ್ಲಿಯೇ ಮಲಪ್ರಭೆ ನದಿಯ ನೀರು ಸಂಪೂರ್ಣ ಬತ್ತಿ ಹೋಗಿ ನದಿಯ ಅಕ್ಕ ಪಕ್ಕದ ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು.ಬೇಸಿಗೆ ಮುನ್ನವೇ ಕುಡಿಯುವ ನೀರಗಾಗಿ ಹಾಹಾಕಾರ ಆರಂಭವಾಗಿದೆ.ಕಳೆದ ವಾರ ನವಿಲು ತೀರ್ಥ ಜಲಾಶಯದಿಂದ ಮಲಪ್ರಭೆ ನದಿಗೆ ನೀರು ಹರಿಸಿದರೂ ಕೂಡಾ ಬದಾಮಿ ತಾಲೂಕಿನ ಹತ್ತಾರು ಬ್ಯಾರೇಜ್‍ಗಳು ಭರ್ತಿಯಾಗಿ ಆ ನೀರು ಕಮತಗಿ ಬ್ಯಾರಜ್‍ಗೆ ಬಂದು ಸ್ಥಗಿತವಾಗಿದ್ದು.ಇದರಿಂದ ತಾಲೂಕಿನ ಇಂಗಳಗಿ,ಚಿಕ್ಕಮಾಗಿ,ಖೈರವಾಡಗಿ ಹಾಗೂ ಹಡಗಲಿ ಬ್ಯಾರೇಜ್‍ಗಳು ಖಾಲಿ ಖಾಲಿಯಾಗಿವೆ.ನವಿಲುತೀರ್ಥ ಜಲಾಶಯದಿಂದ ಹರಿಬಿಟ್ಟ ನೀರು ಬ್ಯಾರೇಜ್‍ಗಳಲ್ಲಿ ತಡೆ ಹಿಡಿದಿದ್ದರಿಂದಲೇ ಕಮತಗಿ ಕಳೆಭಾಗದಲ್ಲಿ ಬರುವ ಇಂಗಳಗಿ,ಕಡಿವಾಲ,ಸರಳ್ಳಿಕಲ್ಲ,ಮೂಗನೂರ,ಬಸವನಾಳ,ಚಿಕ್ಕಮಾಗಿ,ಖೈರವಾಡಗಿ,ಪಾಪಥನಾಳ,ಚಿತ್ತರಗಿ,ಹಿರೇಮಳಗಾವಿ,ಗಂಗೂರ,ಗಂಜೀಹಾಳ,ಹಡಗಲಿ,ನಂದನೂರ,ಹೂವನೂರ,ಇದ್ದಲಗಿ ಸೇರಿದಂತೆ ಇನ್ನು ಹಲವಾರು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು.ಕೂಡಲೇ ಮಲಪ್ರಭೆ ನದಿಯ ನೀರು ಕೂಡಲಸಂಗಮದವರಗೆ ತಲುಪುವಂತೆ ಶಿಘ್ರವೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಮಹಾಂತೇಶ ಬೇವೂರ ಮಾತನಾಡಿ ಸತತ ಬರಗಾಲದಿಂದ ತತ್ತರಿಸುತ್ತಿರುವ ಹುನಗುಂದ ತಾಲೂಕ ರೈತರು ಮಳೆಯಿಲ್ಲದೇ ಬೆಳೆಯನ್ನು ಕಾಣದೇ ಕಂಗಾಲಾಗಿದ್ದು.ಕೃಷ್ಣೆ ಮಲಪ್ರಭೆ ನದಿಗಳು ಬೇಸಿಗೆ ಮುಂಚೆ ಬತ್ತಿ ಹೋಗಿ ಕುಡಿಯುವ ನೀರಿಗಾಗಿ ಜನರು ಪರಿತಪಿಸುತ್ತಿದ್ದರೂ ಜಿಂದಾಲ್ ಕಂಪನಿಗೆ ಮಾತ್ರ ನಿತ್ಯ ನೀರು ಹರಿಸುವುದು ನಿಂತಿಲ್ಲ.ತೀವ್ರ ಕುಡಿಯುವ ನೀರಿನ ಸಮಸ್ಯೆ ತಾಲೂಕಿನಾಧ್ಯಂತ ಮತ್ತು ನದಿ ಪಾತ್ರದಲ್ಲಿರುವ ಜನರಿಗೆ ಆಗುತ್ತಿದೆ ಎಂದು ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕ ಮತ್ತು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದರೂ ಕೂಡಾ ಯಾವ ಪ್ರಯೋಜನವಾಗಿಲ್ಲ.ತಕ್ಷಣವೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು.ಬದಾಮಿ ತಾಲೂಕಿನ ಎಲ್ಲ ಬ್ಯಾರೇಜ್ ಭರ್ತಿಯಾದಂತೆ ನಮ್ಮ ತಾಲೂಕಿನ ಎಲ್ಲ ಬ್ಯಾರೇಜ್ ಭರ್ತಿಯಾಗಲು ಸಂಭಂಧಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತರ ಗಮನಕ್ಕೆ ತಂದು ನೀರು ಹರಿಸಬೇಕು ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕದ ಕಾರ್ಯಕರ್ತರು ಕೂಡಾ ರೈತ ಸಂಘದ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಶಿವಲಿಂಗಪ್ಪ ನಾಲತವಾಡ,ರೈತ ಮುಖಂಡರಾದ ಬಸವರಾಜ ದಾದ್ಮಿ,ಕೃಷ್ಣಾ ಜಾಲಿಹಾಳ,ಪಾಪಣ್ಣ ಬಾಲರಡ್ಡಿ,ಸಂಗಣ್ಣ ನಾಲತವಾಡ,ಮಹಾಂತಪ್ಪ ವಾಲೀಕಾರ,ಭಾರತಿ ಶೆಟ್ಟರ,ಶಾಂತಾ ಹಿರೇಗೌಡ್ರ,ಮಹಾಂತೇಶ ಐಹೋಳೆ,ಸಂಗಪ್ಪ ಕುರಿ,ಪರಶುರಾಮ ಕುರಿ,ಕರವೇ ನಗರ ಘಟಕದ ಅಧ್ಯಕ್ಷ ಎಸ್.ಎ.ಗಾಣಿಗೇರ,ಗುರು ರೇವಡಿ ಸೇರಿದಂತೆ ಇನ್ನು ಅನೇಕರು ಭಾಗವಹಿಸಿದ್ದರು.

Comments