UK Suddi
The news is by your side.

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಜಾತಾ.

ವಿಜಯಪೂರ:ನಗರದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ನಡೆದ ಜಾತಾದಲ್ಲಿ ಬಿ ಎಲ್ ಡಿ ನರ್ಸಿಂಗ ಕಾಲೇಜಿನ ವಿಧ್ಯಾರ್ಥಿಗಳು ಪಾಲ್ಗೊಂಡು ಜನರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದರು.

ನಗರದ ಸಿದ್ದೆಶ್ವರ ದೇವಾಲಯದಿಂದ ಆರಂಭವಾದ ಈ ಜಾತಾದಲ್ಲಿ ಕಾಲ್ನಡಿಗೆಯ ಮೂಲಕ ಸಾಗಿ ಗಾಂಧಿ ಚೌಕ್ ಶಿವಾಜಿ ಚೌಕ್ ಮೂಲಕ ಡಿ ಎಚ್ ಓ ಕಾರ್ಯಾಲಯದವರೆಗೂ ಸಾಗಿ ಸಮಾಪ್ತಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿ ಎಲ್ ಡಿ ನರ್ಸಿಂಗ ಕಾಲೆಜಿನ ಪ್ರಾಧ್ಯಾಪಕರಾಂದಂತಹ ಮಂಜುನಾಥ ಪಾಟಿಲ ದಿನೆ ದಿನೆ ಹೆಚ್ಚುತ್ತಿರುವ ಮಹಾಮಾರಿ ಕ್ಯಾನ್ಸರ್ ವಿರುದ್ದ ಹೋರಾಡುವುದು ಕೇವಲ ರೋಗಿ ಮಾತ್ರವಲ್ಲದೆ ಅವರ ಮನೆಯವರು ಸಹಾ ಕಷ್ಟ ಅನುಭವಿಸುತ್ತಾರೆ ಆದ್ದರಿಂದ ಇಂತಹ ಮಹಾಮಾರಿಯಿಂದ ದೂರವಿರಲು ಗುಣಮಟ್ಟದ ಜೀವನ ಶೈಲಿ ನಡೆಸುವದರ ಜೋತೆಗೆ ವ್ಯಸನ ಮುಕ್ತರಾಗ ಬೇಕು ಎಂದು ಹೇಳಿದರು.
ಜನರಲ್ಲಿ ಇದರ ಬಗ್ಗೆ ಹೆಚ್ಚಿನ ಜ್ಞಾನ ಅವಶ್ಯಕತೆಯಿದ್ದು ಅವರನ್ನ ತಲುಪಿ‌ ಇದರ ಬಗ್ಗೆ ಅರಿವು ಮೂಡಿಸುವುದು ಸಹಾ ಅಷ್ಟೆ ಮುಲಕ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳು ಹಾಗೂ ಹಿರಿಯರು ಅಧಿಕಾರಿಗಳಿ ಉಪಸ್ಥಿತರಿದ್ದರು

Comments