UK Suddi
The news is by your side.

ಸಮತೋಲನದ ಬಜೆಟ್:ಜೆಡಿಎಸ್ ಮುಖಂಡ ಮಹಮ್ಮದ್ ಇಕ್ಬಾಲ್

2019ರ ರಾಜ್ಯ ಬಜೆಟ್ ಬಗ್ಗೆ ಬಳ್ಳಾರಿ ನಗರದ ಜೆಡಿಎಸ್ ಮುಖಂಡರಾದ ಹೊತ್ತೂರ್ ಮಹಮ್ಮದ್ ಇಕ್ಬಾಲ್ ಅಭಿಪ್ರಾಯ.
ಬಳ್ಳಾರಿ: ಕಳೆದ 6 ತಿಂಗಳಿಂದ ಬಿಜೆಪಿಯು ಕಾಂಗ್ರೇಸ್ ಜೆಡಿಎಸ್ ಸಂಮ್ಮಿಶ್ರ ಸರ್ಕಾರವನ್ನು ಅಭದ್ರಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳಿಂದ ರಾಜಕೀಯ ಸಂದಿಗ್ಧತೆಯ ವಾತವಾರಣದ ನಡುವೆ ಧೃತಿಗೆಡದೆ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸಲು ರಾಜ್ಯದ ಎಲ್ಲಾ ಸಮುದಾಯ ಮತ್ತು ಪ್ರಾಂತ್ಯಗಳಿಗೆ ನ್ಯಾಯ ಒದಗಿಸುವ ಸಮತೋಲನ ಬಜೆಟ್ ಮಂಡಿಸಿದ್ದಾರೆ ಎಂದು ಜೆಡಿಎಸ್ ಮುಖಂಡರಾದ ಹೊತ್ತೂರ್ ಮಹಮ್ಮದ್ ಇಕ್ಬಾಲ್ ತಿಳಿಸಿದರು.

ಸಿಎಂ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಕಳೆದ 10 ವರ್ಷಗಳಲ್ಲಿಯೇ ಅತ್ಯುತ್ತಮವಾದ ಬಜೆಟ್ ಇದಾಗಿದೆ. ರಾಷ್ಟ್ರದ ಬೆನ್ನಲುಬು ರೈತರು ಸೇರಿದಂತೆ ನೀರಾವರಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಇಸ್ರೇಲ್ ಮಾದರಿಯ ಕೃಷಿ ಯೋಜನೆಗೆ 145ಕೋಟಿ ನೀಡಿರುವುದು ಸ್ವಾಗತಾರ್ಹವಾಗಿದೆ.ಮುಖ್ಯವಾಗಿ ರೈತರ ಸಾಲಮನ್ನ. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡುತ್ತೇನೆಂದು ಹೇಳಿದ್ದರು.ಪ್ರಸ್ತುತ ಹೇಳಿದಂತೆಯೇ ಈಗಾಗಲೆ ಸಾಲಮನ್ನಾ ಕೆಲಸ ನಡೆಯುತ್ತಿದೆ.

ಬಿಜೆಪಿಯು ಜನಸಾಮಾನ್ಯರ ಸಮಸ್ಯೆಗಳತ್ತ ಗಮನಹರಿಸುವುದು ಬಿಟ್ಟು ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದಲೂ ಆಪರೇಷನ್ ಕಮಲ ನಡೆಸುತ್ತಿದ್ದಾರೆ.ಬಿಜೆಪಿ ಪಕ್ಷಕ್ಕೆ ತಾವು ಅಧಿಕಾರಕ್ಕೇರುವುದರಲ್ಲಿರುವ ಆಸಕ್ತಿ ಜನಸಾಮಾನ್ಯರ ಮೇಲಿಲ್ಲ.ಆದ್ದರಿಂದ ಇನ್ನಿಲ್ಲದ ಆರೋಪಗಳನ್ನು ಮಾಡುತ್ತಾ ಸಭಾತ್ಯಾಗ ಮಾಡಿದ್ದಾರೆ. ಇವರ ಆಸಕ್ತಿ ಅಭಿವೃದ್ಧಿಯ ಮೇಲಿಲ್ಲ. ಪ್ರತಿಪಕ್ಷ ಸ್ಥಾನದ ಕೆಲಸವನ್ನು ಬಿಜೆಪಿ ಸಂಪೂರ್ಣವಾಗಿ ಮರೆತಿದೆ. ರೈತರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ಶಾಸಕರನ್ನು 30, 40 ಕೋಟಿ ರೂಪಾಯಿಗಳಿಗೆ ಕೇವಲ ಅಧಿಕಾರಕ್ಕಾಗಿ ಡೀಲ್ ಮಾಡುತ್ತಿದ್ದಾರೆ. ಬಿಜೆಪಿಯ ಈ ಎಲ್ಲಾ ಚಟುವಟಿಕೆಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರದ ಮೇಲೆ ನಕಾರಾತ್ಮಕ ಪ್ರಭಾವ ಬೀರುವುದು.

ಇಸ್ರೇಲ್ ಮಾದರಿ ಕೃಷಿ ಯೋಜನೆಗೆ 145ಕೋಟಿ ರೂ, ಮುಖ್ಯಮಂತ್ರಿ ಸೂಕ್ಷ್ಮ ನೀರಾವರಿ ಯೋಜನೆಗೆ 2019-20ನೇ ಸಾಲಿನಲ್ಲಿ 368ಕೋಟಿ ರೂ ಅನುದಾನ, ರೈತರಿಗಾಗಿ ರೈತ ಸಿರಿ ಯೋಜನೆ, ಸಿರಿ ಧಾನ್ಯಗಳ ವ್ಯವಸಾಯಕ್ಕಾಗಿ ರೈತರಿಗೆ 10ಸಾವಿರ ರೂಪಾಯಿ ನೇರವಾಗಿ ರೈತರ ಖಾತೆಗೆ ಹಣ ವರ್ಗಾವಣೆ 1ಎಕರೆಗೆ 10ಸಾವಿರ ರೂ ನೆರವು, ಬೀದಿಬದಿ ವ್ಯಾಪಾರಿಗಳಿಗೆ 7.5ಕೋಟಿ ರೂಪಾಯಿ ಸಾಲ ವಿತರಣೆ, ಎತ್ತಿನಹೊಳೆ ಯೋಜನೆ ಜಾರಿಗೆ ಕ್ರಮ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ, 176 ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ, ಆರೋಗ್ಯ ಕರ್ನಾಟಕ ಯೋಜನೆ ಆಯುಷ್ಮಾನ್ ಜೊತೆ ವಿಲೀನ, ಎಪಿಎಲ್ ಕುಟುಂಬಗಳಿಗೂ ಆರೋಗ್ಯ ಯೋಜನೆಯ ಲಾಭ, ಕರ್ನಾಟಕ ಬಯಲು ಶೌಚಮುಕ್ತ ರಾಜ್ಯ, ಗ್ರಾಮೀಣ ಉದ್ಯೋಗ ಖಾತರಿ ಅಡಿಯಲ್ಲಿ 1 ಕೋಟಿ ಉದ್ಯೋಗ ಸೃಷ್ಠಿ, ಕುಡಿಯುವ ನೀರಿನ ಯೋಜನೆಗೆ ಆದ್ಯತೆ, 415 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಒಳಚರಂಡಿ ವ್ಯವಸ್ಥೆ, 64ಕಿ.ಮೀ ಫೆರಿಫೆರಲ್ 100 ಕಿ.ಮೀ ದೂರದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ, ರಸ್ತೆಗೆ 10405 ಕೋಟಿ ರೂಪಾಯಿ ಅನುದಾನ, ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಕ್ರಮ, ವಸತಿ ಯೋಜನೆಗೆ ಅನುದಾನ, 1ನೇ ಹಂತದಲ್ಲಿ 48ಸಾವಿರ ಅರ್ಜಿಗಳ ಸ್ವೀಕಾರ, ಎಸ್ಸಿ-ಎಸ್ಟಿ ಅಭಿವೃದ್ಧಿಗೆ ಅನುದಾನ, ಸಂದ್ಯಾ ಸುರಕ್ಷಾ ಮಾಸಾಶನ 1ಸಾವಿರಕ್ಕೆ ಏರಿಕೆ, ರಾಜ್ಯದ ಜಿಡಿಪಿ ಶೇ 9.4 ರಷ್ಟು, ಕೈಗಾರಿಕ ಸೇವಾ ವಲಯದಲ್ಲಿ ಬೆಳವಣಿಗೆ, ಬಾಣಂತಿಯರಿಗೆ ಮಾಸಿಕ 1ಸಾವಿರ ರೂ, ಕೃಷಿ ಹೊಂಡಕ್ಕಾಗಿ 350ಕೋಟಿ ಮೀಸಲು, ಕೃಷಿ ವಿವಿಗಳಿಗೆ 40ಕೋಟಿಗಳ ಅನುದಾನ, ಸಾವಯವ ಕೃಷಿಗಾಗಿ 35ಕೋಟಿ ಅನುದಾನ, ರಾಜ್ಯದಲ್ಲಿ ಡೀಸೇಲ್ ಸೀಮೆಎಣ್ಣೆ ಪಾಸ್‍ಬುಕ್ ಪಡೆದಿರುವ ದೋಣಿಗಳಿಗೆ ಡೀಸೆಲ್ ಮತ್ತು ಸೀಮೆಎಣ್ಣೆ ಸಬ್ಸಿಡಿ ನೀಡಲು 148.5 ಕೋಟಿ ರೂ ಅನುದಾನ ಇತ್ಯಾದಿ ಯೋಜನೆಗಳನ್ನು ಜಾರಿಗೊಳಿಸಲಾವುದೆಂದು ತಿಳಿಸಿದ್ದಾರೆ.

Comments