UK Suddi
The news is by your side.

ಹುನಗುಂದ ವಸ್ತ್ರದ ಕಾಲೇಜಿನ NCC ಘಟಕಕ್ಕೆ ರೋಲಿಂಗ್ ಟ್ರೋಪಿ.

ಹುನಗುಂದ(ಬಾಗಲಕೋಟ):ಇಲ್ಲಿಯ ವಿ.ಎಂ.ಎಸ್.ಆರ್. ವಸ್ತ್ರದ ಹಾಗೂ ವಿ.ಎಸ್. ಬೆಳ್ಳಿಹಾಳ ಪದವಿ ಕಾಲೇಜಿನ ಎನ್ ಸಿಸಿ ಘಟಕವು ಕರ್ನಾಟಕ ಹಾಗೂ ಗೋವಾ ಎನ್.ಸಿ.ನಿರ್ದೇಶನಾಲಯವು 2018-19ನೇ ಸಾಲಿನ ಸಿನಿಯರ್ ವಿಭಾಗದಲ್ಲಿ ಮೂರನೇ ಅತ್ಯುತ್ತಮ ಘಟಕ ಪ್ರಶಸ್ತಿಗೆ ಆಯ್ಕೆಯಾಗಿ ರೋಲಿಂಗ್ ಟ್ರೋಫಿ ಗಳಿಸಿದೆ.
ಈಚೆಗೆ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಹಾಗೂ ಗೋವಾ ಎನ್ಸಿಸಿ ನಿರ್ದೇಶನಾಲಯದ ಡೆಪ್ಯುಟಿ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ಡಿ.ಎಂ. ಪೂರ್ವಿಮಠ ಅವರು ವಿ.ಎಂ.ಎಸ್.ಆರ್. ವಸ್ತ್ರದ ಹಾಗೂ ವಿ.ಎಸ್. ಬೆಳ್ಳಿಹಾಳ ಪದವಿ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಪ್ಟಿನೆಂಟ್ ಎಸ್.ಬಿ. ಚಳಗೇರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ್ಯ ಪ್ರೊ.ಎಸ್.ಆರ್. ನಾಗಣ್ಣವರ ಭಾಗವಹಿಸಿದ್ದರು.

‘ನಮ್ಮ ಕಾಲೇಜಿನ ಎನ್.ಸಿ.ಸಿ ಘಟಕ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಎನ್.ಸಿ.ಸಿ ಘಟಕಗಳಲ್ಲಿ 3ನೇ ಅತ್ಯುತ್ತಮ ಘಟಕ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಕಾಲೇಜಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಶಸ್ತಿಗೆ ಭಾಜನವಾಗಿದೆ’ ಎಂದು ಪ್ರಾಚಾಯರ್ಯ ಪ್ರೊ.ಶಶಿಕಲಾ ಕೆ. ಮಠ ತಿಳಿಸಿದ್ದಾರೆ.
ಎನ್.ಸಿ.ಸಿ ವಿಭಾಗದ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆಯಾಗಲು ಶ್ರಮಿಸಿದ ನಮ್ಮ ಕಾಲೇಜಿನ ಎನ್ಸಿಸಿ ಅಧಿಕಾರಿ ಲೆಪ್ಟಿನೆಂಟ್ ಎಸ್.ಬಿ. ಚಳಗೇರಿ ಹಾಗೂ ಎನ್.ಸಿ.ಸಿ ಕೆಡೆಟ್ ಗಳಿಗೆ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಹೊಕ್ರಾಣಿ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಪ್ರೊ.ಶಶಿಕಲಾ ಮಠ, ಕಾಲೇಜು ಒಕ್ಕೂಟದ ಕಾಯರ್ಾಧ್ಯಕ್ಷ ಡಾ.ಎಸ್.ಆರ್. ಗೋಲಗೊಂಡ, ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಎಂ. ಚಲವಾದಿ, ಪ್ರಾಧ್ಯಾಪಕರು, ಸಿಬ್ಭಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ತಿಳಿಸಿದ್ದಾರೆ.

Comments