UK Suddi
The news is by your side.

ಕೊಪ್ಪಳ ನಗರದಲ್ಲಿ ನಾಡೋಜ ಡಾ. ಪಾಟೀಲ್ ಪುಟ್ಟಪ್ಪನವರ ಜನ್ಮಶತಮಾನೋತ್ಸವ.

ಕೊಪ್ಪಳ:ಕನ್ನಡದ ಕೆಚ್ಚೆದೆಯ ಗಂಡುಗಲಿ, ಅತ್ಯಂತ ನೇರ ನಡೆಯವರು ಎಂದು ಖ್ಯಾತರಾದವರು ಕನ್ನಡದ ಹಿರಿಯ ಪತ್ರಕರ್ತ ನಾಡೋಜ ಡಾ. ಪಾಟೀಲ್ ಪುಟ್ಟಪ್ಪನವರು. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬ ಕವಿ ವಾಣಿಗೆ ಅನ್ವರ್ಥವಾದವರು. ಪುಟ್ಟಪ್ಪ ಕನ್ನಡದ ವಿಷಯ ಬಂದಾಗ ಒಂಟಿ ಸಲಗ ಎಂದರೆ ತಪ್ಪಾಗಲಾರದು. ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಪ್ರತಿಭಟಿಸುತ್ತಲೆ ಬಂದ ಪುಟ್ಟಪ್ಪ, ಅನೇಕ ಸಲ ಸರಕಾರದ ಕಿವಿ ಹಿಂಡಿ, ಬುದ್ದಿ ಹೇಳಿ, ಸರಿದಾರಿಗೆ ತಂದ ಇತಿಹಾಸವಿದೆ. ಅವರು ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾಗ, ಮುಖ್ಯ ಮಂತ್ರಿಗಳ ಕೈ ಹಿಡಿದು ತಡೆದು ನಿಲ್ಲಿಸಿ, ಕನ್ನಡದ ಆಗು ಹೋಗುಗಳನ್ನು ಸರಕಾರಕ್ಕೆ ಮನದಟ್ಟು ಮಾಡಿದವರು.
ಅವರ ಪ್ರಪಂಚದ ಮೂಲಕ ಭೃಷ್ಠ ವ್ಯವಸ್ಥೆ ವಿರುದ್ಧ 6 ದಶಕಗಳ ಕಾಲ ಹೋರಾಡಿದವರು. ಸಾವಿರಾರು ಪತ್ರಕರ್ತರನ್ನು ಸೃಷ್ಠಿಸಿ, ಸನ್ಮಾರ್ಗದಲ್ಲಿ ಮುನ್ನೆಡೆಸಿ, ಪ್ರಾಮಾಣಿಕತೆಯ ಪರಂಪರೆ ¸ಷ್ಠಿಸಿದವರು. ಸ್ವತಹ ತರಂಗ ಸೇರಿದಂತೆ ಹಲವಾರು ಪತ್ರಿಕೆಗಳಗೆ ಕನ್ನಡ ನಾಡಿನ ಆಗು ಹೋಗುಗಳಿಗೆ ಸೀಮಾರೇಖೆ ಸೃಷ್ಠಿಸಿದವರು. ಇದೆ ಜನೆವರಿ 14 ಕ್ಕೆ ಅವರಿಗೆ 100 ರ ಸಂಭ್ರಮ. ಇಂತಹದೊಂದು ಸಂಭ್ರಮಕ್ಕೆ ಸುರ್ವೆ ಕಲ್ಚರಲ್ ಅಕಾಡೆಮಿ ಮುಂದಾಗಿದೆ. ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ 14 ಫೆಬ್ರುವರಿ 2019 ರ ಬೆಳಿಗ್ಗೆ ಅವರ ಜನ್ಮಶತಮಾನೋತ್ಸವ ಆಚರಣೆಗೆ ವ್ಯವಸ್ಥೆ ಮಾಡಿದೆ.
ಕರ್ನಾಟಕ ಏಕಿಕರಣ ಹೋರಾಟದ ನಂತರ ಅಂತಹದೆ ಹೋರಾಟದ ಕೆಚ್ಚಿಗೆ ಕಾರಣವಾಗಿದ್ದು ಗೋಕಾಕ ವರದಿ. ಅದು ಕಾವೇರಿದ್ದು ಉತ್ತರ ಕರ್ನಾಟಕದಿಂದಲೇ ಎಂಬುದು ಸ್ವಾಗತಾರ್ಹ. ಈ ಎರಡು ಪ್ರಮುಖ ಹೋರಾಟದಲ್ಲಿ ಭಾಗವಹಿಸಿ, ಧೀಮಂತತೆ ಮೆರೆದ ನಾಡೋಜ ಪಾಟೀಲ್ ಪುಟ್ಟಪ್ಪನವರಿಗೆ ಗೌರವ ಸಲ್ಲಿಸುವ ಈ ಸಂದರ್ಭದಲ್ಲಿ, ದಿನಾಂಕ 14, 15, 16, 17, ಫೆಬ್ರುವರಿ 2019 ರಲ್ಲಿ ಕೊಪ್ಪಳದ ಸಾಹಿತ್ಯ ಭವನದಲ್ಲಿ, ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಕಲಾ ಪ್ರತಿಭೋತ್ಸವನ್ನು ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿ 4 ದಿನದ ಸಮ್ಮೇಳನ ರೂಪಿಸಿದೆ. ಕ.ಸಾ.ಪ.ಮಾಜಿ ಅಧ್ಯಕ್ಷ ಹಾಲಿ ಕಸಾಪ ಸಂಘ ಸಂಸ್ಥೆಗಳ ಪ್ರತಿನೀಧಿ ಡಾ. ಶೇಖರಗೌಡ ಮಾಲಿ ಪಾಟೀಲ್ ಸಮ್ಮೇಳನಾಧ್ಯಕ್ಷತೆಯಲ್ಲಿ ಜರುಗಲಿದೆ. ಈ ಸಮ್ಮೇಳನದ ಮೊದಲ ದಿನ ನಾಡೋಜ ಪಾಟೀಲ್ ಪುಟ್ಟಪ್ಪನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಡಾ. ಪಾಟೀಲ್ ಪುಟ್ಟಪ್ಪನವರಿಗೆ ಸಂಸ್ಥೆಯು ಗೌರವಿಸಲಿದೆ.
ಇದರ ರೂವಾರಿ ರಮೇಶ ಸುರ್ವೆ ಕೊಪ್ಪಳ ಜಿಲ್ಲೆ ಇಟಗಿ ಗ್ರಾಮದವರು, ನೆಲದ ಋಣದ ಜೊತೆಗೆ ಹಿರಿಯರಿಗೆ 100 ನೇ ಜನ್ಮ ಶತಮಾನೋತ್ಸವ ಹಾಗೂ ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಕಲಾ ಪ್ರತಿಭೋತ್ಸವಕ್ಕೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಕ್ಚಿಗಳಾಗಿ 14-2-2019 ಬೆಳಿಗ್ಗೆ, ಕೊಪ್ಪಳದ ಸಾಹಿತ್ಯ ಭವನಕ್ಕೆ ಬನ್ನಿ. ಬರುವಾಗ ಹಾರ ತುರಾಯಿ ತರಬೇಡಿ. ಅದರ ಬದಲು ಕನ್ನಡದ ಪುಸ್ತಕವೊಂದನ್ನು ಹಿಡಿದುಕೊಂಡು ಬನ್ನಿ. ಇದು ಹನಿ ಹನಿ ಸೇರಿ ಬೃಹತ ಗೃಂಥಾಲಯಕ್ಕೆ ದಾರಿಯಾಗಲಿ. ಪುಸ್ತಕದ ಮೊದಲ ಪುಟದಲ್ಲಿ ಪುಟ್ಟಪ್ಪನವರ ಶತಮಾನೊತ್ಸವಕ್ಕೆ ಶುಭ ಕೋರಿ ನಿಮ್ಮ ಕೈ ಬರಹದಲ್ಲಿ ನಿಮ್ಮ ಹೆಸರಿನ ಜೊತೆ ಆಟೊ ಗ್ರಾಫ್ ಹಾಗೂ ದೂರವಾಣಿ ಸಂಖ್ಯೆ ದಾಖಲಿಸಿ. ನೀವು ಡಾ. ಪಾಟೀಲ್ ಪುಟ್ಟಪ್ಪನವರ ಜನ್ಮ ಶತಮಾನೋತ್ಸವದಲ್ಲಿ ದಾಖಲಾಗಿ. ನೀವು ನೀಡಿದ ಪುಸ್ತಕ, ವಿಶ್ವೇಶ್ವರಯ್ಯ ಗ್ರಂಥಾಲಯಕ್ಕೆ ಬಳಸಲಾಗುವುದು.

Comments