UK Suddi
The news is by your side.

ಆಡಿಯೋದಲ್ಲಿ ನನ್ನ ಹೆಸರು ಉಲ್ಲೇಖ ಆಗಿರೋದು ನನ್ನ ದೌರ್ಭಾಗ್ಯ: ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು: ಆಡಿಯೋದಲ್ಲಿ ನನ್ನ ಹೆಸರು ಉಲ್ಲೇಖ ಆಗಿರೋದು ನನ್ನ ದೌರ್ಭಾಗ್ಯ. ಪ್ರಧಾನಿ ಹೆಸರನ್ನೂ ಎಳೆದು ತಂದಿರೋದು ದುರ್ದೈವ ಎಂದು ಸಭಾಧ್ಯಕ್ಷ ರಮೇಶ್‍ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಕಲಾಪ ಆರಂಭ ಆಗುತ್ತಿದ್ದಂತೆ ಆಡಿಯೋ ವಿಚಾರ ಪ್ರಸ್ತಾಪಿಸಿದ ಅವರು, ಸ್ಪೀಕರ್ ಆದವರು ಸದನದ ಮೌಲ್ಯಗಳ ಪ್ರತೀಕ ಆಗಿರ್ತಾರೆ. ಆದರೆ, ಆಡಿಯೋದಲ್ಲಿ ನನ್ನ ಹೆಸರು ಉಲ್ಲೇಖ ಆಗಿರೋದು ನನ್ನ ದೌರ್ಭಾಗ್ಯ ಎಂದರು.

ಮುಖ್ಯಮತ್ರಿಗಳು ಬರೆದಿರುವ ಪತ್ರದ ಸಾರಾಂಶ, ಆಡಿಯೋ ಸಾರಾಂಶದಲ್ಲಿ ಈ ಸದನದ ಸದಸ್ಯರೊಬ್ಬರ ಬಗ್ಗೆ ಬರೆಯಲಾಗಿದೆ. ಆಡಿಯೋದಲ್ಲಿ ನನಗೆ 50 ಕೋಟಿ ರೂ. ಕೊಡಲಾಗಿದೆ ಎಂದು ಹೇಳಲಾಗಿದೆ. ಇನ್ನೂ ದುಃಖದ ವಿಷಯ ಅಂದರೆ ದೇಶದ ಪ್ರಧಾನಿ ವಿಚಾರವೂ ಪ್ರಸ್ತಾಪ ಆಗಿದೆ. ಇದು ದೇಶಕ್ಕೆ ಮತ್ತು ಸಂಸತ್ತಿಗೆ ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಭಾಧ್ಯಕ್ಷರನ್ನಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದೀರಿ. ಅದಕ್ಕೆ ಅಪಚಾರವಾಗದಂತೆ ನಡೆದುಕೊಳ್ಳಲಾಗುವುದು ಎಂದು ತಿಳಿಸಿದ ಅವರು. ನನ್ನ ಚಾರಿತ್ರ್ಯವಧೆ ಮಾಡಿದ್ರೆ ಸಾವಿಗಿಂಥಾ ಹೆಚ್ಚು ಕ್ರೌರ್ಯ ಆಗುತ್ತೆ. ಈ ರೀತಿ ಆಪಾದನೆ ಬರುವಂತೆ ನಾನು ಎಂದು ನಡೆದುಕೊಂಡಿಲ್ಲ ಎಂದು ಇದೇ ವೇಳೆ ಸದನದಲ್ಲಿ ಭಾವುಕರಾದರು.

ನನಗೆ ಹಣ ನೀಡಿದ್ದಾಗಿ ಅವರು ಆಡಿಯೋದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅವರು ನನಗೆ ನೇರವಾಗಿ ಭೇಟಿಯಾಗಿದ್ರಾ ಅಥವಾ ನನ್ನ ಕುಟುಂಬ ಸದಸ್ಯರನ್ನ ಭೇಟಿಯಾಗಿದ್ರಾ? ಯಾವಾಗ ಕೊಟ್ರು? ಹೇಗೆ ಕೊಟ್ರು? ಯಾವ ಡಿನಾಮಿನೇಷನ್ನಲ್ಲಿ ಕೊಟ್ರು ಎಂದು ಪ್ರಶ್ನಿಸಿದರು

ನಾನು ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಅಕ್ಕಪಕ್ಕದವರಿಗೆ ತೊಂದರೆಯಾಗದಂತೆ ಬೋರ್ಡ್ ಕೂಡ ಹಾಕಿಲ್ಲ. ಅಂತಹದರಲ್ಲಿ ಇಷ್ಟು ದೊಡ್ಡ ಆರೋಪ ನನ್ನ ಮೇಲೆ ಮಾಡಲಾಗಿದೆ. ಅಷ್ಟು ಪ್ರಮಾಣದ ಹಣವನ್ನು ನಾನೆಲ್ಲಿ ಇಟ್ಟುಕೊಳ್ಳಲಿ ಎಂದರು.

ತಾವು ಎರಡು ದಿನಗಳಿಂದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದು, ಎರಡೂ ದಿನಗಳನ್ನು ನೋವಿನಿಂದ ಕಳೆಯಬೇಕಾಯಿತು. ಇದರ ಸತ್ಯಾಸತ್ಯತೆ ಸಾಬೀತಾಗಬೇಕು ಎಂದರು.

Comments