UK Suddi
The news is by your side.

ಇತರರ ಮಾತಿಗಿಂತ ನಮ್ಮ ಸ್ವಯಂ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ

ಅದೊಂದು ದೊಡ್ಡದಾದ ಅಭಯಾರಣ್ಯ ಬೆಸಿಗೆಯ ಬಿರುಬಿಸಲಿನಿಂದ ಬಸವಳಿದಿದ್ದ ನಾಲ್ಕು ಕಪ್ಪೆಗಳು ಅಲ್ಲಿಂದ ಕೊಂಚ ದೂರದಲ್ಲಿದ್ದ ಇನ್ನೊಂದು ಸರೋವರಕ್ಕೆ ಹೋಗಿ ಕೆಲಕಾಲ ಆರಾಮವಾಗಿ ಇದ್ದು ಬರಬೇಕೆಂದು ನಿರ್ಧರಿಸಿ ಗುಳೆ ಹೊರಟವು ದಾರಿಯುದ್ದಕ್ಕೂ ಬಿಸಿಲಿನ ಜಳ ಅವುಗಳ ಮೈ ಎಷ್ಟೆ ದಪ್ಪಗಿದ್ದರೂ ಸುಡುವಂತಿದ್ದ ಬಿಸಲಿಗೆ ನಿಶಕ್ತವಾಗಿದ್ದವೂ ಇನ್ನೆನೂ ಸರೋವರ ಸಮಿಪಿಸುತ್ತಿದೆ ಎನ್ನುವಷ್ಟರಲ್ಲಿ ಒಂದು ದೊಡ್ಡದಾದ ನೀರಿಲ್ಲದ ತೆಗ್ಗಿಗೆ ನಾಲ್ಕು ಕಪ್ಪೆಗಳು ದಪ್ಪನೆ ಬಿದ್ದು ಬಿಟ್ಟವು ಏನಾಗಿದೆ ಎಂಬುದು ತಿಳಿಯುವಷ್ಟರಲ್ಲಿಯೇ ಅವುಗಳು ಪೂರ್ಣ ಕೇಳಗೆ ಬಿದ್ದೆ ಬಿಟ್ಟವು ಮೋದ ಮೊದಲು ಅಲ್ಲಿಂದ ಪಾರಾಗಲೂ ಎಲ್ಲಾ ಕಪ್ಪೆಗಳು ಜೀಗಿಯುತ್ತಿದ್ದವು ಏಷ್ಟೆ ಜೀಗಿದರು ಅವುಗಳಿಗೆ ಮೇಲೆಲಳು ಸಾಧ್ಯವಾಗಲಿಲ್ಲ ಅದರಲ್ಲರಿವೂ ಕಪ್ಪೆಗಳು ಒಂದೊಕ್ಕೊಂದು ಮುಖ ನೋಡಿಕೊಳ್ಳುತ್ತಾ ಇನ್ನೆನೂ ನಾವು ಸತ್ತೆ ಬಿಟ್ಟೆವು ಇನ್ನೂ ಜೀಗಿದು ಯಾವುದೇ ಪ್ರಯೋಜನವಿಲ್ಲ ಇರುವಷ್ಟು ಹೊತ್ತು ಇಲ್ಲೆ ಇದ್ದು ಸತ್ತು ಬಿಡೋಣ ಎಂದು ಗೋಗರಿಯಲು ಶುರು ಮಾಡಿದವು ಅದರಲ್ಲಿರುವ ಒಂದು ಕಪ್ಪೆ ಮಾತ್ರ ಮೇಲೆ ಜೀಗಿಯಲೂ ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇತ್ತು ಇತರ ಕಪ್ಪೆಗಳು ಏ ಜೀಗಿಯಬೇಡ ಅದು ನಮ್ಮಿಂದ ಆಗುವದಿಲ್ಲ ಸುಮ್ಮನೇ ಯಾಕೇ ಶಕ್ತಿ ಹಾಳು ಮಾಡಿಕೊಳ್ಳುವುದು ನಿನ್ನಿಂದಲೂ ಇದು ಆಗುವದಿಲ್ಲ ಅಂತ ಆ ಕಪ್ಪೆಗೆ ಆ ಉಳಿದ ಕಪ್ಪೆಗಳು ಹೇಳಿತ್ತಲೇ ಇದ್ದವು ಆದರೂ ಆ ಕಪ್ಪೆ ಮಾತ್ರ ಜೀಗಿಯುತ್ತಲೇ ಕೊನೆಗೊಮ್ಮೆ ತನ್ನ ಶಕ್ತಿಯನ್ನ ಒಟ್ಟಾರೆ ಹಾಕಿ ಜೋರಾಗಿ ಜೀಗಿದು ಕೊನೆಗೆ ಮೇಲೆ ಬಂದೆ ಬಿಟ್ಟಿತು ಒಂದ ಸಮಯ ಆ ಕಪ್ಪೆಗಳು ಗಾಬರಿಯಿಂದ ನೋಡಲಾರಂಭಿಸಿದವು ಮೇಲೆ ಬಂದ ಕಪ್ಪೆಗೆ ಅವುಗಳು ಗೋಗರಿಯುತ್ತಿರುವುದು ಮತ್ತು ಆಗುವದಿಲ್ಲ ಎಂಬ ಮಾತುಗಳು ಕೇಳುತ್ತಲೇ ಇರಲಿಲ್ಲ ಯಾಕೆಂದರೆ ಈ ಕಪ್ಪೆಗೆ ಕಿವಿ ಕೇಳುತ್ತರಲಿಲ್ಲ ವಾಸ್ತವವಾಗಿ ಈ ಕಪ್ಪೆ ಕಿವುಡ ಕಪ್ಪೆಯಾಗಿತ್ತು ಕೆಳಗೆ ಹೊಂಡಕ್ಕೆ ಬಿದ್ದಾಗ ಈ ಕಪ್ಪೆಗೆ ಅವುಗಳು ಚಿರಿದ್ದೆಲ್ಲ ನಿನ್ನಿಂದ ಇದು ಸಾಧ್ಯ ಜೋರಾಗಿ ಜೀಗೆ ಖಂಡಿತ ನಾವು ಮೇಲೆ ಹೊಗಬಹುದು ಎಂದು ತಿಳಿದುಕೊಳ್ಳುತ್ತಿತ್ತು ಅವುಗಳು ನನ್ನನ್ನು ಪ್ರೋತ್ಸಾಹಿಸುತ್ತಿವೆ ಉತ್ತೇಜುಸುತ್ತಿವೆ ಎಂದು ತಿಳಿದು ಕೊಂಡು ಸಂತಸಗೊಂಡು ಮತ್ತಷ್ಟು ಜೋರಟಗಿ ಜೀಗಿದು ಕೋನೆಗೆ ತನ್ನ ಸಾಮರ್ಥ್ಯವನ್ನ ತೋರಿಸಿಯೇ ಬಿಟ್ಟಿತ್ತು , ಜೀವನದಲ್ಲಿಯೂ ಸಹಾ ಇದೇ ರೀತಿ ಅನೇಕ ಬಾರಿ ನಮ್ಮ ಜೀವನದಲ್ಲಿ ಆಗುತ್ತಿರುತ್ತದೆ ಆಗಾಗ ನಾವು ಜೀವನದಲ್ಲಿ ನನ್ನಿಂದ ಏನು ಸಾಧ್ಯವಿಲ್ಲವೆಂದು ತಿಳಿದು ಜಿಗುಪ್ಸೆಗೆ ಒಳಗಾಗಿ ನಮ್ಮ ಪ್ರಯತ್ನಗಳನ್ನೆಲ್ಲಾ ಬಿಟ್ಟು ಕೈ ಚೆಲ್ಲಿ ಕುಳಿತುಬಿಡುತ್ತೆವೆ ಇದರಿಂದ ನಮ್ಮ ಸಾಮರ್ಥ್ಯದ ಮೇಲಿನ ನಂಬಿಕೆಯನ್ನೆ ಕಳೆದುಕೊಂಡು ಬಿಡುತ್ತೆವೆ ಹೀಗಾಗಿ ನಮ್ಮ ಬಳಿಯೇ ಅಪಾರ ಶಕ್ತಿ ಅಡಗಿರುತ್ತದೆ ಯಾವುದೋ ಒಂದು ಕೆಟ್ಟ ಗಳೊಗೆಗೆ ಅಥವಾ ಇನ್ನೊಬ್ಬರ ಕೊಂಕುಮಾತಿಗೆ ಬೆಲೆಕೊಟ್ಟು ಸಾಧಿಸುವದನ್ನ ಬಿಡಬಾರದು ಖಂಡಿತಾ ನಿಮ್ಮಲ್ಲಿರುವ ಸಾಮರ್ಥ್ಯ ನಿಮ್ಮನ್ನ ಮೇಲಕ್ಕೆ ತಂದೆ ತರುತ್ತದೆ .

-ಅಮಿತಕುಮಾರ ಬಿರಾದಾರ
ಉಪನ್ಯಾಸಕರು ಹಾಗೂ ಹವ್ಯಾಸಿ ಬರಹಗಾರರು ವಿಜಯಪೂರ
9741171017

Comments