UK Suddi
The news is by your side.

ಕುಸ್ತಿಗೆ ರಾಜ್ಯ ಮಟ್ಟದಲ್ಲಿ ಅವಕಾಶ ಕಲ್ಪಿಸುವ ಸರ್ಕಾರದ ಕ್ರಮ ಶ್ಲಾಘನೀಯ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ.

ಬೆಳಗಾವಿ: ಗ್ರಾಮೀಣ ಕ್ರೀಡೆ ಕುಸ್ತಿಗೆ ರಾಜ್ಯ ಮಟ್ಟದಲ್ಲಿ ಅವಕಾಶ ಕಲ್ಪಿಸುವ ಸರ್ಕಾರದ ಕ್ರಮ ಶ್ಲಾಘನೀಯವಾಗಿದೆ ಇದರಿಂದ ಕಣ್ಮರೆಯಾಗುತ್ತಿರು ಗ್ರಾಮೀಣ ಕ್ರೀಡೆಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಪ್ರೊಸ್ತಾಹ ನೀಡಿದಂತಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.

ನಗರದ‌ ಜಿಲ್ಲಾ ಕ್ರೀಡಾಂಗಣದಲ್ಲಿ ನಿನ್ನೆ ಜಿಲ್ಲಾ ಆಡಳಿತ, ಜಿ.ಪಂ, ಕ್ರೀಡಾ ಇಲಾಖೆ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಹಾಗೂ ಕರ್ನಾಟಕ ರಾಜ್ಯ ಭಾರತೀಯ ಶೈಲಿ ಕುಸ್ತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ “ಪ್ರಥಮ ಕರ್ನಾಟಕ ಕುಸ್ತಿ ಹಬ್ಬದ” ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕುಸ್ತಿ ಹಬ್ಬಕ್ಕೆ ನಡೆಸಲು ಕಳೆದ ಬಜೆಟ್‌ ನಲ್ಲಿ ಹಣ ನೀಡಲು ಸರಕಾರ ಘೋಷಣೆ ಮಾಡಿತ್ತು. ಇದೇ ಪ್ರಥಮ ಬಾರಿಗೆ ಬೆಳಗಾವಿ ನಗರದಲ್ಲಿ ಕುಸ್ತಿ ಹಬ್ಬ ನಡೆಸಲಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅಪ್ಪಟ ದೇಶಿ ಕ್ರೀಡೆಯಾದ ಕುಸ್ತಿ, ಬಲಾಡ್ಯ ಜಟ್ಟಿ ಕಾಳಗದ ಪೈನಲ್ ಹಣಾಹಣಿ ಕರ್ನಾಟಕ ಕೇಸರಿ, ಕರ್ನಾಟಕ ಕಿಶೋರ ಮತ್ತು ಬಾಲ ಕೇಸರಿ ಪಟ್ಟಗಳ ಜಂಗಿ ಕುಸ್ತಿ ನೋಡಲು ವಿವಿಧೆಡೆಯಿಂದ ಜನ ಬಂದಿದ್ದು, ಕೇಕೆ ಹಾಕಿ ಸಿಳ್ಳೆ ಚಪ್ಪಾಳೆ ತಟ್ಟಿ ಕುಸ್ತಿ ಪಟುಗಳಿಗೆ ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೋಳೆ ಹಾಗೂ ಡಿಸಿಪಿ ಸಿಮಾ ಲಾಟ್ಕರ್ ಸೇರಿದಂತೆ ನಾನಾ ಗಣ್ಯರು ಪಾಲ್ಗೊಂಡಿದ್ದರು.

Comments