UK Suddi
The news is by your side.

ಪಿಎಸ್ಐ ಕುಮಾರ ದಾದಾಗಿರಿ ವಿರುದ್ಧ ಆಕ್ರೋಶ.

ಬೆಳಗಾವಿ: ಅತಿ ಉತ್ಸಾಹದಿಂದ ಕರ್ತವ್ಯ ಮಾಡುವ ಸಂಬಳದಾಳುಗಳು ‘ಪ್ರಭು’ಗಳ ಮೇಲೆ ಕೈ ಮಾಡುವ ಚಾಳಿ ಅಲ್ಲಲ್ಲಿ ವರದಿ ಆಗುತ್ತವೆ. ಯುನಿಫಾರ್ಮ್ ಸರ್ವೀಸ್ ಎಂದಾಕ್ಷಣ ಸಾರ್ವಜನಿಕರ ಮೇಲೆ ಹಲ್ಲೆ ಮಾಡಬಹುದು ಎಂಬ ತಪ್ಪಾಗಿ ಅರ್ಥೈಸಿಕೊಂಡು ಅವಿವೇಕ ಮೆರೆಯುವವರ ಸಾಲಿಗೆ ಈಗ ಹಾರೂಗೇರಿ ಪಿಎಸ್ಐ ಸೇರಿದ್ದಾರೆ. ವೈರಲ್ ವಿಡಿಯೊವೊಂದು ಇದನ್ನು ಸಾರಿ ಸಾರಿ ಹೇಳಿದೆ.

ರಾಯಭಾಗ ತಾಲೂಕು ಹಾರೂಗೇರಿ ಪುರಸಭೆ ಎದುರು ನಡೆದಿದ್ದ ಪ್ರತಿಭಟನೆ ವೇಳೆ ಪಿಎಸ್ ಐ ಕುಮಾರ ಹಿತ್ತಲಮನಿ ಎಂಬಾತ ಕಪಾಳಮೋಕ್ಷ ಮಾಡಿ, ಅವಾಚ್ಯ ಪದಬಳಕೆ ಮಾಡಿರುವ ಆರೋಪ ವ್ಯಕ್ತವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ದಾದಾಗಿರಿ ಅತಿಯಾಗಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಜನ ಆರೋಪಿಸಿದ್ದು, ಚೆಂಡು ಎಸ್ಪಿ ಸುಧೀರಕುಮಾರ ರೆಡ್ಡಿ ಅವರ ಅಂಗಳಕ್ಕೆ ಜಿಗಿದಿದೆ.