UK Suddi
The news is by your side.

ಫೆ.23ಕ್ಕೆ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಹಳೆ ವಿದ್ಯಾರ್ಥಿಗಳ ಸಮಾವೇಶ.

ಹುನಗುಂದ(ಬೆಳಗಾವಿ): ಪಟ್ಟಣದ ಪ್ರತಿಷ್ಠಿತ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘಕ್ಕೆ ನೂರು ವರ್ಷದ ಇತಿಹಾಸವನ್ನು ಹೊಂದಿದೆ. ಸಂಘದ ಅಂಗಸಂಸ್ಥೆಯಾದ ವಿಜಯ ಮಹಾಂತೇಶ ಕೃಪಾಪೋಷಿತ ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿಜಯ ಶಂಕರಪ್ಪ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆದು ಇಂದು ತಮ್ಮ ಪ್ರತಿಭೆಗೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ. ದೇಶ ವಿದೇಶಗಳಲ್ಲಿ ನೆಲಸಿ ಹೆಸರು ಗಳಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಮಹಾವಿದ್ಯಾಲಯದಲ್ಲಿ ಭೋದನೆ ಮಾಡಿದ ಪ್ರಾಧ್ಯಾಪಕರನ್ನು ಮುಖಾಮುಖಿಗೊಳಿಸುವ ಸದುದ್ದೇಶದಿಂದ ನಮ್ಮ ಮಹಾವಿದ್ಯಾಲಯವು ಪೆ.23-02-2019 ರಂದು ಶನಿವಾರ ಬೆಳಿಗ್ಗೆ 10-30 ಗಂಟೆಗೆ ಹಳೆಯ ವಿದ್ಯಾರ್ಥಿಗಳ ಸಮಾವೇಶವನ್ನು ಏರ್ಪಡಿಸಿದೆ. ಈ ಸಮಾವೇಶಕ್ಕೆ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ ಎಲ್ಲ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕೇತರ ಸಿಬ್ಬಂದಿಯವರನ್ನು ಸಹ ಆಹ್ವಾನಿಸಲಾಗಿದೆ. ಗುರುಶಿಷ್ಯರ ಸಮ್ಮಿಲನದ ಈ ಅಪರೂಪದ ಸಮಾವೇಶಕ್ಕೆ ಮಹಾವಿದ್ಯಾಲಯದ ಹಿಂದಿನ ವಿದ್ಯಾರ್ಥಿಗಳಾದ ತಾವು ತಪ್ಪದೇ ಆಗಮಿಸಿ ತಮ್ಮ ಸಹಪಾಠಿ ಹಾಗೂ ಪ್ರಾದ್ಯಾಪಕರೊಡಗೂಡಿ ವಿದ್ಯಾರ್ಥಿ ಜೀವನದ ಮಧುರ ಕ್ಷಣಗಳನ್ನು ಹಂಚಿಕೊಳ್ಳುವುದರ ಜೊತೆಗೆ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಮಹಾವಿದ್ಯಾಲಯದ ಪ್ರಗತಿಗಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಮಹಾವಿದ್ಯಾಲಯದ ಪ್ರಗತಿಗಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ಪ್ರಾಚಾರ್ಯರಾದ ಶ್ರೀಮತಿ ಶಶಿಕಲಾ ಕೆ. ಮಠ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಬಿ.ವ್ಹಿ. ಪಾಟೀಲ ಕಾರ್ಯದರ್ಶಿ ಪ್ರೋ. ಎಲ್.ಎನ್. ಕುಲಕರ್ಣೀ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮನೋಹರ ವಾಲ್ಮೀಕಿ, ಮಹಾಂತೇಶ ಹಳ್ಳೂರ, ಖಜಾಂಚಿ ಪ್ರೊ. ಬಿ.ಎ. ಕಂಠಿ ಇವರು ಉಪಸ್ಥಿತರಿದ್ದರು.

Comments