ಮಿಶ್ರತಜ್ಞ ರೋಹನ್ ಮಟಮಾರಿಗೆ ಅಮೆರಿಕನ್ ವಿಸ್ಕಿ ಲೆಗೆಸಿ ಕಾಕ್ಟೈಲ್ ಚಾಲೆಂಜ್ ಪ್ರಶಸ್ತಿ
ಬೆಂಗಳೂರು:“ಲಿಲ್ಲಿಯನೇರ್” ಮತ್ತು ಅಝಟೆಕ್ ಮುಳೆ ಕಾಕ್ಟೈಲ್ಗಳ ಹೊಸ ರುಚಿ ಮೂಲಕ ತೀರ್ಪುಗಾರರ ಮತ್ತು ಪ್ರೇಕ್ಷಕರ ಹೃದಯ ಗೆದ್ದರು 25 ವರ್ಷದ ಬಾರ್ ಶೆಫ್ ರೋಹನ್.
ದೆಹಲಿ, ಚಂಡೀಗಢ, ಗುರುಗಾಂವ್, ಪುಣೆ, ಮುಂಬೈ, ಗೋವಾ, ಚೆನ್ನೈ ಮತ್ತು ಬೆಂಗಳೂರಿನಿಂದ ಆಗಮಿಸಿದ್ದ 300ಕ್ಕೂ ಹೆಚ್ಚು ಮಿಶ್ರತಜ್ಞರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೂರು ತಿಂಗಳ ಕಠಿಣ ಎಲಿಮಿನೇಷನ್ ಪ್ರಕ್ರಿಯೆ ಬಳಿಕ 17 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.
ದೇಶದ ಎಲ್ಲೆಡೆಗಳ ಮಿಶ್ರತಜ್ಞರಿಗೆ ಅಮೆರಿಕನ್ ವಿಸ್ಕಿಗಳಾದ ಜಾಕ್ ಡೆನಿಯಲ್ಸ್ನ ಓಲ್ಡ್ ನಂ.7, ವುಡ್ಫೋರ್ಡ್ ರಿಸರ್ವ್, ಜೆಂಟಲ್ಮನ್ ಜಾಕ್ ಮತ್ತು ಡೇನಿಯಲ್ಸ್ನ ಸಿಂಗಲ್ ಬ್ಯಾರಲ್ ಬಳಸಿಕೊಂಡು ತಮ್ಮ ವಿಶಿಷ್ಟ ಕಾಕ್ಟೈಲ್ ರಿಸೆಪ್ ಸಿದ್ಧಪಡಿಸಲು ಸೂಚಿಸಲಾಗಿತ್ತು.
ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಬೈಜಿ ಬ್ರೆವಿಸ್ಕಿ ಬ್ರೆವಿಂಗ್ ಕಂಪನಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಮತ್ತು ಮಿಶ್ರತಜ್ಞ ರೋಹನ್, ತಮ್ಮ ಅತ್ಯಂತ ವಿಶಿಷ್ಟ ಎನಿಸಿದ ಕಾಕ್ಟೈಲ್ಗಳ ಮೂಲಕ ಪಾನಪ್ರಿಯರ ಹೃದಯ ಗೆದ್ದಿದ್ದಾರೆ.