UK Suddi
The news is by your side.

ರಾಷ್ಟ್ರೀಯ ಕಲಾ ಮೇಳದಲ್ಲಿ ಸಾಕಿ ಗಜಲ್ ಬಿಡುಗಡೆ.

ಕೊಪ್ಪಳ: ಕನ್ನಡದ ಅಭಿನವ ಗಾಲಿಬ್ ಎಂದು ಹೆಸರು ಗಳಿಸಿರುವ ಜಿಲ್ಲೆಯ ಕನಕಗಿರಿಯ ಅಲ್ಲಾಗಿರಿರಾಜ್ ಅವರ ಮೂರನೇಯ ಗಜಲ್ ಪುಸ್ತಕ ಸಾಕಿ,

ಗಜಲ್ ಕಾಸಿ ಎಂದೇ ಪ್ರಸಿದ್ಧಿ ಪಡೆದಿರುವ ದೆಹಲಿಯಲ್ಲಿ ಬಿಡುಗಡೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ.

ಸಾಕಿ ಗಜಲ್ ಬಿಡುಗಡೆ ಮಾಡಿದ್ದು ನನಗೆ ಅತ್ಯಂತ ಸಂತಸ ತಂದಿದೆ, ಕನ್ನಡ ಗಜಲ್ ಪರಂಪರೆಗೆ ಅನೇಕರ ಕೊಡುಗೆ ಇದೆ ಆದರೆ ಅಲ್ಲಾಗಿರಿರಾಜರ ಗಜಲ್ ಸಂಚಾರ ತುಂಬ ಅದ್ಭುತವಾಗಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅವರು ದೆಹಲಿ ರಾಷ್ಟ್ರೀಯ ಕಲಾ ಮೇಳದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಒಬ್ಬ ಕವಿ ಪುಸ್ತಕ ಬಿಡುಗಡೆ ಮಾಡಿದರೆ ಆ ಪುಸ್ತಕವನ್ನು ನಾಡಿನ ಓದುಗರು ಕೊಂಡು ಓದಿದಾಗ ಮಾತ್ರ ಆ ಕವಿ ಕಾವ್ಯ ಕತೆ ಜನರ ಜನಸಾಮಾನ್ಯರ ಸಾಹಿತ್ಯವಾಗಲು ಸಾಧ್ಯ ಎಂದು ಕುಂವೀ ತಿಳಿಸಿದರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವೆಂಕಟಾಚಲ ಹೆಗಡೆ. ಕೆಪಿಸಿಸಿ ಸಮಿತಿ ಸದಸ್ಯರಾದ ಇನಾಮದಾರ. ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ. ಮತ್ತಿತರರು ಉಪಸ್ಥಿತರಿದ್ದರು.

Comments