UK Suddi
The news is by your side.

ವಿಷದ ಬಾಟಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ ರೈತ.

ಬೆಳಗಾವಿ: ವಿಷದ ಬಾಟಲ್ ಹಿಡಿದು ಕಬ್ಬಿನ ಬಿಲ್ ಗೆ ಆಗ್ರಹಿಸಿದ ರೈತ ಜಾವೇದ ಮುಲ್ಲಾ ಅವರನ್ನು ಮಾರುಕಟ್ಟೆ ಪೊಲೀಸರು ವಶಕ್ಕೆ ಪಡೆದರು.

ರಮೇಶ ಜಾರಕಿಹೊಳಿ ಮಾಲಿಕತ್ವದ ಸೌಭಾಗ್ಯ ಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಕಬ್ಬಿನ ಬಾಕಿ ಬಿಲ್ ಬೇಡಿಕೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಆಗಮಿಸಿ ವಿಷದ ಬಾಟಲಿ ಪ್ರದರ್ಶಿಸಿ ಕುಡಿಯುವ ಬೆದರಿಕೆ ಹಾಕಿದ್ದರಿಂದ ಪೊಲೀಸರು ವಶಕ್ಕೆ ಪಡೆದರು.