UK Suddi
The news is by your side.

ಸತತ ಅಧ್ಯಯನ,ಪೋಷಕರ ಪ್ರೋತ್ಸಾಹ ಮಗುವಿನ ಸಾಧನೆಗೆ ಸಹಕಾರಿಯಾಗಿದೆ:ಡಾ.ಜೀ ವೆಂಕಟೇಶ್.

ಹುನಗುಂದ(ಬಾಗಲಕೋಟೆ):ವಿದ್ಯಾರ್ಥಿಗಳಲ್ಲಿ ಕಲಿಕೆಯ ಮನೋಭಾವನೆ ಮತ್ತು ಸತತ ಅಧ್ಯಯನಶೀಲತೆಯನ್ನು ರೂಢಿಸಲು ಶಿಕ್ಷಕರು ಮತ್ತು ಪೋಷಕರು ಉತ್ತಮವಾದ ವಾತಾವರಣವನ್ನು ಮಕ್ಕಳಿಗೆ ಸೃಷ್ಠಿಸುವುದು ಅವಶ್ಯ ಎಂದು ಬಾಡಗಂಡಿಯ ಬಾಪೂಜಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಜಿ.ವೆಂಕಟೇಶ ಹೇಳಿದರು.
ಅವರು ನಗರದ ವಿಜಯ ಮಹಾಂತೇಶ ಹೈಸ್ಕೊಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತ ಶಾಲಾ ಅವಧಿಯಲ್ಲಿ ಶಿಕ್ಷಕರು ಬೋಧಿಸಿದ ಪಾಠವನ್ನು ಮಕ್ಕಳು ಮನನ ಮಾಡಿಕೊಳ್ಳಲು ಮನೆಯಲ್ಲಿ ಪೋಷಕರು ಕೂಡ ಅಧ್ಯಯನಶೀಲ ಮನೋಭಾವವನ್ನು ಬೆಳೆಸಲು ಸದಾ ನಿಗಾವಹಿಸಬೇಕು.ಮಕ್ಕಳು ದಾರಿ ತಪಿ ದುಶ್ಚಟಗಳ ದಾಸರಾಗುವಾಗ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಸರಿ ಮಾರ್ಗದಲ್ಲಿ ನಡೆಸುವುದು ಅಷ್ಟೇ ಮುಖ್ಯವಾಗಿದೆ.ಸತತ ಅಧ್ಯಯನ ಮತ್ತು ಪೋಷಕರ ಪ್ರೋತ್ಸಾಹ ಮಗುವಿನ ಸಾಧನೆಗೆ ಸಹಕಾರಿಯಾಗಿದೆ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಎಂ.ಹೊಕ್ರಾಣಿ ಮಾತನಾಡಿ ಆಧುನಿಕ ಯುಗದಲ್ಲಿ ಪ್ರಭಾವದಿಂದ ಮಕ್ಕಳಲ್ಲಿ ಇರಬೇಕಾದ ಮಾನವೀಯ ಮೌಲ್ಯಗಳು ಮಾಯವಾಗುತ್ತಿದ್ದು. ಸಮಾಜದಲ್ಲಿ ಮಾದರಿಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೈತೀಕ ಶಿಕ್ಷಣ ನೀಡುವುದು ಅವಶ್ಯ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದರು.
ಸಂಸ್ಥೆಯ ನಿರ್ದೇಶಕರಾದ ಎಂ.ಎನ್,ತೆನ್ನಳ್ಳಿ,ವೀರಣ್ಣ ಚೆಟ್ಟೇರ,ಬಿ.ಎಸ್.ಕೆಂದೂರ,ಆಡಳಿತಾಧಿಕಾರಿ ಎ.ಓ.ಬಿರಾದರ,ಮುಖ್ಯೋಪಾದ್ಯಯ ಎಂ.ಐ.ರೋಣದ,ಆರ್.ಎ.ಕರಣಿ,ಎಸ್.ಎನ್.ಬಂಕದ,ಎನ್.ಜಿ.ಬಡಗೇರ ಸೇರಿದಂತೆ ಇನ್ನು ಅನೇಕರು ವೇದಿಕೆಯಲ್ಲಿದ್ದರು.

10 ಎಚ್,ಎನ್,ಡಿ, 2 ಪೋಟೋ ಹುನಗುಂದ ಪಟ್ಟಣದ ವಿ.ಮ.ಹೈಸ್ಕೂಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.

Comments