UK Suddi
The news is by your side.

ಹೊಳೆಆಲೂರಲ್ಲಿ ಸ್ವಚ್ಚತಾ ಕಾರ್ಯಕ್ರಮ.

ಹೊಳೆಆಲೂರ(ಗದಗ):ಇಲ್ಲಿನ ಶ್ರೀ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಕಲಾ, ವಿಜ್ಞಾನ,ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್ ಎಸ್ ಎಸ್ ಘಟಕ 1 ಮತ್ತು 2 ಹಾಗೂ ಪ್ರಾಚ್ಯವಸ್ತು, ಸಂಗ್ರಹಾಲಯಗಳು & ಪರಂಪರೆ ಇಲಾಖೆ ಮೈಸೂರ ಇವರ
ಸಹಯೋಗದಲ್ಲಿ ಶಿವ ಪಾರ್ವತಿ ದೇವಾಲಯದ ಆವರಣದ ಸುತ್ತಮುತ್ತ ಸ್ವಚ್ಚತಾ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಇತಿಹಾಸ ಪ್ರಾಧ್ಯಾಪಕ ಡಾ.ಎಂ.ಎನ್.ಕಡಪಟ್ಟಿ ಮಾತನಾಡಿ ಪರಿಸರದ ಸ್ವಚ್ಚತೆಯ ಅರಿವು ನಮಗೆ ಇಂದು ಅಗತ್ಯವಾಗಿದೆ. ಅದರಲ್ಲೂ ದೇವಸ್ಥಾನಗಳಿಗೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಇಂಥ ಸ್ಥಳಗಳು ಸ್ವಚ್ಚತೆಯಿಂದ ಕೂಡಿರಬೇಕು. ನಮ್ಮ ಪ್ರಾಚೀನ ಪರಂಪರೆಯ ದೇಗುಲಗಳು, ಶಿಲ್ಪಗಳನ್ನು ಹಾಳಾಗದಂತೆ ರಕ್ಷಿಸುವ ಜವಾಬ್ದಾರಿ ಕೂಡ ವಿದ್ಯಾರ್ಥಿಗಳು ಮಾಡಬೇಕು. ಹಿಂದಿನ ಪರಂಪರೆ ಮುಂದಿನ ಪೀಳಿಗೆವರೆಗೆ ಮುಟ್ಟಿಸುವ ಹೊಣೆ ನಿಮ್ಮದಾಗಬೇಕು ಎಂದು ಸ್ಮಾರಕಗಳು, ಶಾಸನಗಳ ಮಹತ್ವ ಕುರಿತು ವಿವರಿಸಿದರು.
ನೇತೃತ್ವವನ್ನು ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ವಹಿಸಿದ್ದರು. ಈ ಸಂದರ್ಭದಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಡಾ.ಎಸ್.ಬಿ.ಸಜ್ಜನರ , ಪರಂಪರಾ ಕೂಟದ ಕಾರ್ಯದರ್ಶಿ ಹಾಗೂ ಎನ್ ಎಸ್ ಎಸ್ ಯೋಜನಾಧಿಕಾರಿ ಡಾ.ಪ್ರಭು ಗಂಜಿಹಾಳ , ಪ್ರೊ.ಗಂಗಾಧರ ಬೀಳಗಿ ಎನ್ ಎಸ್ ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವರದಿ:ಡಾ.ಪ್ರಭು ಗಂಜಿಹಾಳ
ಮೊ:9448775346

Comments