UK Suddi
The news is by your side.

ತರಿಕೇರಿ ದೇವಾಂಗ ಸಮಾವೇಶಕ್ಕೆ ರಾಮದುರ್ಗದ ವಿಶೇಷ ರೂಪಕ.

ರಾಮದುರ್ಗ(ಬೆಳಗಾವಿ): ಇದೇ ಫೆ. 25 ಮತ್ತು 26 ರಂದು ಮಲೆನಾಡಿನ ಹೆಬ್ಬಾಗಿಲು ಚಿಕ್ಕಮಗಳೂರಿನ ತರಿಕೇರಿಯಲ್ಲಿ ಜರುಗುವ ರಾಜ್ಯ ಮಟ್ಟದ ದೇವಾಂಗ (ನೇಕಾರ) ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಮದುರ್ಗ ಪಟ್ಟಣದ ಯುವಕರ ತಂಡ ಇಂದು ತರಿಕೇರಿಗೆ ಪ್ರಯಾಣ ಬೆಳೆಸಿದರು.

ದೇವಾಂಗ ಸಮಾವೇಶದಲ್ಲಿ ರಾಮದುರ್ಗ ಪಟ್ಟಣದ ಯುವಕರು ತೆರೆದ ವಾಹನದಲ್ಲಿ ನೇಕಾರರ ಬದುಕಿನ ಹಾಸುಹೊಕ್ಕಾದ ಮಗ್ಗಗಳ ಪ್ರದರ್ಶನ ಸಾರುವ ವಿಶೇಷ ರೂಪಕವನ್ನು ಸಿದ್ಧಪಡಿಸಿದ್ದಾರೆ.

ಇದಕ್ಕಾಗಿ ಕಳೆದ ಒಂದು ತಿಂಗಳಿನಿಂದ ಶ್ರಮಿಸುತ್ತಿರುವ ನೇಕಾರ ಪೇಟೆಯ ನಾಗೇಶ ಕೊಣ್ಣೂರ, ವಿಠ್ಠಲ ಕಲ್ಲೂರ, ಹಣಮಂತ ಸೊರಿ, ರಾಜು ಸೂಳಿಭಾಂವಿ, ನಾರಾಯಣ ಮುಗಳಿ, ರಾಮಣ್ಣ ಮುಗಳಿ, ಶಿವು ಕೊಪ್ಪಳ ಮತ್ತು ಶಂಕರ ಜವಳಿ ತಂಡವು ವಿದ್ಯುತ್ ಮಗ್ಗದ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಜನಕರಾಜ ಇಟ್ನಾಳ, ಈರಪ್ಪ ಇಟ್ನಾಳ, ನಾರಾಯಣ ಕೊಳ್ಳಿ ಮತ್ತು ಬುದವಂತ ಮುಗಳಿ ಅವರ ತಂಡ ಕೈಮಗ್ಗ ಪ್ರದರ್ಶನದ ರೂಪಕವನ್ನು ತಯಾರಿಸಿದ್ದಾರೆ.

ಸೀರೆ ತಯಾರಿಸುವ ವಿದ್ಯುತ್ ಮಗ್ಗದ ಹಾಗೂ ಕೈಮಗ್ಗ ನೇಕಾರಿಕೆ ಪ್ರತಿಬಿಂಬಿಸುವ ಎರಡು ರೂಪಕಗಳನ್ನು ಹೊತ್ತ ವಾಹಣ ಇಂದು ಚಿಕ್ಕಮಗಳೂರು ಜಿಲ್ಲೆಗೆ ಪ್ರಯಾಣ ಬೆಳೆಸಿತು. ಈ ಸಂದರ್ಭದಲ್ಲಿ ಬನಶಂಕರಿ ದೇವಾಂಗ ಸಮಾಜದ ನೂತನ ಅಧ್ಯಕ್ಷ ವಿಠ್ಠಲ ಮುರುಡಿ, ಶಂಕ್ರಣ್ಣ ಮುರುಡಿ, ಏಕನಾಥ ಕೊಣ್ಣೂರ, ಎನ್. ಎನ್. ಸೊರಿ,ಪ್ರಕಾಶ ಸೂಳಿಬಾಂವಿ, ವಿನಾಯಕ ಸೂಳಿಭಾಂವಿ, ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Comments