UK Suddi
The news is by your side.

ಇಳೆಯ ಕಳೆ ಮಹಿಳೆ

ಇಳೆಯ ಕಳೆ ಮಹಿಳೆ
ಯತ್ರನಾರ್ಯಸ್ತು ಪೂಜ್ಯಂತೆ ರಮಂತೆ ಪುಣ್ಯ ಪಡೆದ ಕುಲತಾರಿಣಿಯೆ
ಧರೆಯ ಅಭಿದಾನ ಧರಿಸಿ
ಕ್ಷಮಯಾಧರಿತ್ರಿ ಕುಲನಾರಿಯೆ
ನವಮಾಸಗಳ ಬಸಿರು ಹೊತ್ತು
ಸಂತ ತ್ಯಾಗಿ ಯೋಗಿ ಮಹಾತ್ಮರನು ಜಗಕೆ ನೀಡಿದವಳೆ
ನಿಜ ಮಹಿಮಳೆ ಮಾನ್ಯಳೆ
ಕುಲೋದ್ಧಾರಕ ಮಂಗಳೆ
ಮನೆ ಮನ ಬೆಳಗಿ ಬೆಳಕನಿತ್ತವಳೆ
ಮಕ್ಕಳ ಬದುಕ ಬೇರಿಗೆ
ಬೆವರು ಹರಿಸಿ ಬೆನ್ನೆಲುಬಾದವಳೆ
ಸೃಷ್ಟಿಗೆ ಭೂಷಣಪ್ರಾಯ ಮಗಳೆ
ಧರೆಯ ಸಿರಿಯ ಹಸಿರಿಗೆ ವಂದ್ಯಳೆ
ಕರುನಾಡ ಕನ್ನಡಿಗರ ಕಣ್ಮಣಿ
ಕನ್ನಡತಿಯಾಗಿ ಮೆರೆವ ಕುಲತಿಲಕಳೆ
ಕವಿಕಲ್ಪನೆಯ ಕಾವ್ಯಕನ್ಯಿಕೆಯವಳೆ
ಇಳೆಗೆ ಕಳೆ ನೀಡಿ ಕಂಗೊಳಿಸುವವಳೆ
ಪ್ರತಿ ಮನೆಯ ಆರಾಧ್ಯದೈವ ಧನ್ಯಳೆ
ಪುರುಷನ ಹೆಗಲೇಣಿಯಾಗಿ ನಡೆಯುವವಳೆ
ಕುಲವಧು ಕುಂಕುಮಶೋಭಿತೆ ಸಿಂಧೂರಳೆ
ಮೌನವೇ ಆಭರಣ ಮಂದಸ್ಮಿತಳೆ
ಮಾತಿನಲಿ ಸೋತು ಗೆಲ್ಲುವವಳೆ
ಮತಿಯಲಿ ಶ್ರೀಮತಿ ಎನಿಸಿದವಳೆ
ತವರು ಕೀರುತಿಗೆ ಮೆರುಗು ತಂದವಳೆ
ಅವಕಾಶ ಸಿಕ್ಕರೆ ಆಕಾಶಕ್ಕೇರುವವಳೆ
ಪ್ರತಿ ಕ್ಷೇತ್ರದಲ್ಲೂ ಹೆಜ್ಜೆ ಗುರುತಿನ ವಳೆ
ಹೆಣ್ಣಿನ ವಿವಿಧ ಅವತಾರಗಳಲಿ
ಈ ಜಗವ ಪೊರೆಯುವವಳೆ
ದಣಿವರಿಯದವಳೆ ಧನ್ಯಾತ್ಮಳೆ
ಧರಣಿಯಲಿ ನಿನ್ನದೆ ಯಶೋಗಾಥೆ
ಮಣ್ಣ ಕಣಕಣದಲಿ ಭೂಮಾತೆ
ಹರಿಯುವ ನೀರಿನಲಿ ನದಿದೇವತೆ
ವಿದ್ಯೆಯೇ ನೀನಾಗಿ ಸರಸತಿಯೆ
ಕಾಂಚಾಣಕೆ ಲಕುಮಿಯಾದವಳೆ
ಈ ಅವನಿಯೆ ನೀನಾಗಿ ನಲಿವವಳೆ
ನಿನಗೇಕೆ ಹೆಸರ ಬಯಕೆ
ಅದೂ ಒಂದೆ ದಿನದ ಓಲೈಕೆ
ಅನುಗಾಲವೂ ನಿನ್ನದೆ ಸಂತೈಕೆ
ನೀನಿಲ್ಲದೆ ಈ ಜಗವು ಬಿಕ್ಕುವದು ಜಾಣೆ
ಹೆಣ್ಣೇ ನೀನೆ ಈ ಜಗದ ಕಣ್ಣು
ನಿನಗೆ ಬೇಕೆ ಮಹಿಳಾ ದಿನಾಚರಣೆ

ಜಯಶ್ರೀ ಭ.ಭಂಡಾರಿ.

ವಿದ್ಯಾನಗರ ೪ ನೇ ಕ್ರಾಸ್.
ಬಾದಾಮಿ.
7022762780

Comments