UK Suddi
The news is by your side.

ಮೈಸೂರಿನಲ್ಲಿ ಜಾವಾ ಮೋಟರ್ ಸೈಕಲ್ ಶೋರೂಂ ಆರಂಭ.

ಮೈಸೂರು: ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಹೆಜ್ಜೆಗುರುತು ಕರ್ನಾಟಕದಲ್ಲಿ ವಿಸ್ತರಣೆ ಮಾಡುತ್ತಾ ನೂತನ ಜಾವಾ ಮೋಟರ್‍ಸೈಕಲ್ ಡೀಲರ್‍ಶಿಪ್ ಅನ್ನು ಮೈಸೂರಿನಲ್ಲಿ ಆರಂಭಿಸಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಇರುವ ಜಾವಾ ಡೀಲರ್‍ಶಿಪ್‍ಗೆ ಹೆಚ್ಚುವರಿಯಾಗಿ ಮಂಗಳೂರು, ಹಾಸನ ಮತ್ತು ದಾವಣಗೆರೆ ಕಡೆಗಳಲ್ಲಿ ಶೀಘ್ರವೇ ಆರಂಭಿಸುತ್ತಿದೆ.

ಮೈಸೂರು ಶ್ರೀ ಕಾಂತರಾಜ್ ಅರಸು ರಸ್ತೆಯಲ್ಲಿ ಶ್ರೀ ಜೈನ್ ಮೊಬಿಕೆಸ್ ಎಂಬ ನೂತನ ಜಾವಾ ಮೋಟರ್‍ಸೈಕಲ್ ಶೋರೂಂ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಆಶೀಶ್ ಜೋಶಿಯವರು ಇಂದು ಉದ್ಘಾಟಿಸಿದರು.

ಜಾವಾ ಬ್ರ್ಯಾಂಡ್ 100ಕ್ಕೂ ಹೆಚ್ಚು ಡೀಲರ್‍ಶಿಪ್‍ಗಳನ್ನು ಆರಂಭಿಸುವ ತನ್ನ ಗುರಿಯ ನಿಟ್ಟಿನಲ್ಲಿ ರಭಸದಿಂದ ಮುನ್ನುಗ್ಗುತ್ತಿದ್ದು, ಮೈಸೂರಿನಲ್ಲಿ ಹೊಸ ಮಳಿಗೆ ಆರಂಭಿಸುವ ಮೂಲಕ ಒಟ್ಟು 78 ಹೊಸ ಡೀಲರ್‍ಶಿಪ್‍ಗಳನ್ನು ದೇಶಾದ್ಯಂತ ಸ್ಥಾಪಿಸಿದಂತಾಗಿದೆ.

ಉದ್ಘಾಟನೆ ಬಗ್ಗೆ ಮಾತನಾಡಿದ ಶ್ರೀ ಆಶೀಶ್ ಜೋಶಿಯವರು ರಾಜ್ಯದ 5ನೇ ಡೀಲರ್‍ಶಿಪ್ ಅನ್ನು ದೇಶದ 3ನೇ ಸ್ವಚ್ಛ ನಗರಿ ಎಂಬ ಹಿರಿಮೆ ಪಡೆದಿರುವ ಮೈಸೂರಿನಲ್ಲಿ ಆರಂಭಿಸಲು ಅತೀವ ಹೆಮ್ಮೆ ಎನಿಸುತ್ತಿದೆ. ಕಳೆದ ನವೆಂಬರ್‍ನಲ್ಲಿ ಜಾವಾ ಮೋಟರ್ ಸೈಕಲ್ ಆರಂಭಿಸಿದ ಆನ್‍ಲೈನ್ ಬುಕ್ಕಿಂಗ್‍ನಿಂದ ಜಾವಾಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ಸೃಷ್ಟಿಯಾಗಿದೆ ಇದರಿಂದ ನಾವು ಮೈಸೂರಿನ ಮೋಟರ್‍ಸೈಕಲ್ ಪ್ರಿಯರಿಗೆ ಆಧುನಿಕ ಕ್ಲಾಸಿಕ್‍ಗಳನ್ನು ವಿತರಿಸಲು ನಾವು ಉತ್ಸುಕರಾಗಿದ್ದೇವೆ.

ದೇಶದಲ್ಲಿ ಜಾವಾ ಮೋಟರ್ ಸೈಕಲ್‍ಗೆ ವ್ಯಕ್ತವಾದ ಅಪಾರ ಪ್ರೀತಿ ಮತ್ತು ಒಲವು ಹಿನ್ನೆಲೆಯಲ್ಲಿ ಪ್ರಿಮಿಯಮ್ ಮೋಟ್‍ಸೈಕಲ್ ಮಾರಾಟವನ್ನು ಮಾರ್ಚ್‍ನಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಜಾಲವನ್ನು ವಿಸ್ತರಿಸುವುದು ನಮ್ಮ ಕರ್ತವ್ಯವಾಗಿದೆ, ಉದ್ಯಮದಲ್ಲೇ ಮೊಟ್ಟಮೊದಲ ಬಾರಿಗೆ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಜತೆಗೆ ಗರಿಷ್ಠ ಸಂಖ್ಯೆಯ ಹಣಕಾಸು ಪಾಲುದಾರಿಕೆಗಳೂ ಆಗಿವೆ. ಪ್ರತಿಯೊಬ್ಬರೂ ಹೊಸ ಡೀಲರ್‍ಶಿಪ್‍ಗಳಿಗೆ ಹೋಗಿ, ಪರಿಪೂರ್ಣ ಜಾವಾ ಅನುಭವವನ್ನು ಸ್ವತಃ ಅನುಭವಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ” ಎಂದು ಹೇಳಿದರು.

ಕ್ಲಾಸಿಕ್ ವಿನ್ಯಾಸಗಳ ಆಧುನಿಕ ವಿಶ್ಲೇಷಣೆ, ಅತ್ಯಾಧುನಿಕ ಎಂಜಿನ್ ತಂತ್ರಜ್ಞಾನ ಮತ್ತು ಗುಣಲಕ್ಷಣಗಳೊಂದಿಗೆ ಹೆಚ್ಚು ಪ್ರಸ್ತುತವಾಗುತ್ತಿದೆ ಎನ್ನುವುದನ್ನೂ ಬಿಂಬಿಸುತ್ತದೆ. ಹಲವು ವೈವಿಧ್ಯಮಯ ಅಂಶಗಳನ್ನು ಪ್ರಸ್ತುತ ದಿನಮಾನದ ಕ್ಲಾಸಿಕ್ ಜಾವಾ ಮೋಟರ್‍ಸೈಕಲ್‍ಗಳಿಗೆ ಅಳವಡಿಸಲಾಗಿದ್ದು, ಇದರಲ್ಲಿ ದಂತಕಥೆಗಳ ದೃಶ್ಯವೈಭವದ ಬಣ್ಣನೆಗಳು ಮತ್ತು ಮೊನೊಕ್ರೋಮ್ ಜೀವನಶೈಲಿಯ ಚಿತ್ರಣಗಳು ಇರುತ್ತವೆ. ಮುಕ್ತ ಸಂವಾದಕ್ಕಾಗಿ ದೊಡ್ಡ ಸಮುದಾಯದ ಟೇಬಲ್ ವಿನ್ಯಾಸಗಳು, ಓದುಗರ ಕುತೂಹಲ ತಣಿಸುವ ಜಾಗರೂಕತೆಯಿಂದ ಸಜ್ಜುಗೊಳಿಸಿದ ಪುಸ್ತಕಶೆಲ್ಫ್ ಅಥವಾ ಹಿನ್ನೆಲೆಯಲ್ಲಿ ಸಂಗೀತ ಪ್ರೇಮಿಗಳಿಗಾಗಿ ಕ್ಲಾಸಿಕ್ ರಾಕ್‍ನಂಥ ಆಕರ್ಷಣೆಗಳೂ ಇರುತ್ತವೆ. ಒಟ್ಟಾರೆಯಾಗಿ ಈ ಪ್ರದೇಶ ಕಟ್ಟಾ ಮೋಟರ್ ಸೈಕಲ್ ಸವಾರರಿಗಾಗಲಿ, ಮೊಟರ್‍ಸೈಕ್ಲಿಂಗ್ ಜಗತ್ತಿಗೆ ಲಗ್ಗೆ ಇಡುವ ಸಹಸ್ರಮಾನದ ಯುವಕರಿಗಾಗಲೀ ಹೀಗೆ ಪ್ರತಿಯೊಬ್ಬರಿಗೂ ಆಪ್ಯಾಯಮಾನ ತಾಣವಾಗಲಿದೆ.

ಜಾವಾ ಮತ್ತು ಜಾವಾ ಫೋರ್ಟಿ ಟೂ ಬ್ರೇಕ್ ಕವರ್‍ಗಳು ಬ್ರಾಂಡ್‍ನ ಹೊಸ ಮಾರ್ಗದರ್ಶಿಗಳಾಗಿದ್ದು, ರೆಟ್ರೂ ಕೂಲ್ ಟ್ವಿಸ್ಟ್ ಹೊಂದಿದ ಹಿಂದಿನ ಕ್ಲಾಸಿಕ್ ಆಕರ್ಷಣೆಯನ್ನು ಮರಳಿ ತಂದಿದೆ. ಆಧುನಿಕ ತಂತ್ರಜ್ಞಾನವು ಜಾವಾ ಗುಣಲಕ್ಷಣದ ಅಧಿಕೃತತೆಯಾಗಿದ್ದು, ಇದು ಕ್ಷಮತೆ, ಸಾಮಥ್ರ್ಯ ಮತ್ತು ಗುಣಮಟ್ಟದ ಸಮತೋಲನವನ್ನು ಹೊಂದಿರುತ್ತದೆ. ಹೊಚ್ಚ ಹೊಸ 293 ಸಿಸಿ, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್, ಡಿಓಎಚ್‍ಸಿ ಎಂಜಿನ್‍ನನ್ನು ಡಬರ್ ಕ್ರೇಡಲ್ ಚಾಸಿಗಳಲ್ಲಿ ಅಳವಡಿಸಲಾಗಿದ್ದು, ಇದು ಸರ್ವಶ್ರೇಷ್ಠ ನಿಭಾವಣೆ ಮತ್ತು ಉತ್ಕøಷ್ಟ ಸ್ಥಿರತೆಯನ್ನು ಒದಗಿಸುವ ಮೂಲಕ ಹೊಸ ಜಾವಾವನ್ನು ನೈಜವಾಗಿ ಆಧುನಿಕ ಕ್ಲಾಸಿಕ್ ಆಗಿ ರೂಪಿಸಿದೆ.

ಜಾವಾ ಮತ್ತು ಜಾವಾ ಫಾರ್ಟಿ ಟೂಗಳಿಗೆ ಕ್ರಮವಾಗಿ 1,67,000 ರೂಪಾಯಿ ಮತ್ತು 158000 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ (ಎಕ್ಸ್ ಶೋರೂಂ ಮೈಸೂರು). ಡ್ಯೂಯೆಲ್ ಚಾನಲ್ ಎಬಿಎಸ್ ಅವತರಣಿಕೆಗಳಿಗೆ ಕ್ರಮವಾಗಿ 1,75,942 ರೂಪಾಯಿ ಮತ್ತು 1,66,942 ರೂಪಾಯಿ ದರ ನಿಗದಿಯಾಗಿದೆ. ಎಲ್ಲ ಶೋರೂಂಗಳಲ್ಲಿ ಬುಕ್ಕಿಂಗ್ ಆರಂಭವಾಗಿದೆ.

Comments