UK Suddi
The news is by your side.

“ಹಳ್ಳಿಹುಡುಗಿ ಮೊಸರ ಗಡಗಿ” ನಾಟಕ ಪ್ರದರ್ಶನ.

ಗದಗ : ಗದಗ ಜಿಲ್ಲೆಯ ರೋಣ ತಾಲೂಕಿನ ಸರ್ಜಾಪುರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ನಾಟ್ಯಸಂಘ ಸರ್ಜಾಪುರ ಇವರ ವತಿಯಿಂದ “ಹಳ್ಳಿಹುಡುಗಿ ಮೊಸರ ಗಡಗಿ” ಅರ್ಥಾರ್ಥ “ನಾರಿ ಮುರಿದರೆ ಮಾರಿ” ಎಂಬ ಸಾಮಾಜಿಕ ನಾಟಕ ಪ್ರದರ್ಶನ ಜರುಗಿತು.
ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಮಾಜಿ ಅಧ್ಯಕ್ಷರು ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಬಸವಂತಪ್ಪ ಎಚ್. ತಳವಾರ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆ ನೇರವೇರಿಸಿದರು. ನಂತರ ಮಾತನಾಡಿದ ಅವರು ನಾಟಕ ಮನರಂಜನೆಯೊಂದಿಗೆ ಸಂದೇಶ ನೀಡುವಂತಿರಲಿ, ಹಬ್ಬ ಹರಿದಿನ ಜಾತ್ರೆಗಳ ಸಂದರ್ಭದಲ್ಲಿ ಪೂರ್ವಜರ ಕಾಲದಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ, ಪೌರಾಣಿಕ, ಐತಿಹಾಸಿಕ, ನಾಟಕಗಳನ್ನು ಆಡುತ್ತ ಬಂದಿದ್ದು ನಾಟಕಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಹಾನ ಸಾಧನೆಗಳು, ನಾಟಕಗಳು ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿದ್ದರೆ ಕಲಾಭಿಮಾನಿಗಳು ಹೃದಯಪೂರ್ವಕವಾಗಿ ಸ್ವೀಕರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಬಾಬಾಸಾಬ ಬೆಟಗೇರಿ, ವಡ್ಡರ ದುರಗಪ್ಪ, ನಾಯಕ ಶರಣಪ್ಪ, ನಾಯಕ ಕಮಲಪ್ಪ, ಶಂಕರ ರಾಠೋಡ, ಮಲ್ಲು ಕಂಟಿ, ಮರಡಿ ತೋಟದ, ಶ್ರೀಮತಿ ಸುಚಿತಾ ಮರಡಿತೋಟದ, ಶಿವನಪ್ಪ ರಾಠೋಡ ಮುಂತಾದವರು ಉಪಸ್ಥಿತರಿದ್ದರು. ನಂತರ ನಾಟಕ ಪ್ರದರ್ಶನ ಜರುಗಿತು.
-ವರದಿ: ಪ್ರಭು ಗಂಜಿಹಾಳ
ಮೊ: 9448775346

Comments