UK Suddi
The news is by your side.

ನನ್ನ ನಿರ್ಧಾರವನ್ನು ಮಾ.18ಕ್ಕೆ ತಿಳಿಸುತ್ತೇನೆ ಎಂದ್ರು ಸುಮಲತಾ ಅಂಬರೀಶ್.

ಮಂಡ್ಯ:ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅಂಬರೀಷ್ ಅವರು “ನನ್ನ ನಿರ್ಧಾರ ಏನು ಎನ್ನುವುದನ್ನು ಮಾರ್ಚ್ 18 ರಂದು ಅಧಿಕೃತವಾಗಿ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.

ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಮಾತನಾಡಿದ ಅವರು ರಾಜಕೀಯದಲ್ಲಿ ಕೊನೆಗಳಿಗೆವರೆಗೂ ಏನು ಬೇಕಾದರೂ ಆಗಬಹುದು.ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ನನ್ನ ನಿರ್ಧಾರ ಏನು ಎನ್ನುವುದನ್ನು ಇದೇ 18 ರಂದು ಅಧಿಕೃತವಾಗಿ ಫೋಷಣೆ ಮಾಡುತ್ತೇನೆ ಎಂದು ಎಂದು ಸುಮಲತಾ ತಿಳಿಸಿದರು.ಸಚಿವ ಡಿ.ಕೆ.ಶಿವಕುಮಾರ್ ಮಂಡ್ಯ ಕಾಂಗ್ರೆಸ್ಸಿಗರ ಜೊತೆ ಮಾತುಕತೆ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಂದ ಸ್ಪರ್ದಿಸಬೇಡಿ ಎಂಬ ಒತ್ತಡ ಬಂದಿಲ್ಲ.ಬೇರೆ ಕ್ಷೇತ್ರದಿಂದ ಸ್ಪರ್ಧಿಸಿ ಅಂತ ಸಲಹೆ ಕೊಟ್ಟಿದ್ದಾರೆ ಎಂದು ಹೇಳಿದರು.

Comments