UK Suddi
The news is by your side.

ಪೋಲಿಯೊ ಕಾಯಿಲೆ ಬಂದರೆ ಜೀವನ ಪರ್ಯಂತ ಕಾಡುತ್ತೆ,ಮರೆಯದೆ 5ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಲಿಯೊ ಲಸಿಕೆ ಹಾಕಿಸಿ.

ಹುನಗುಂದ(ಬಾಗಲಕೋಟ):ಚಿಕ್ಕ ಮಕ್ಕಳಿಗೆ ಪೋಲಿಯೋ ಕಾಯಿಲೆ ಒಂದು ಮಹಾರೋಗ ಕಾಡುತ್ತದೆ ಪೋಲಿಯೋ ಕಾಯಿಲೆ ಬಂದರೆ ಕೈ ಕಾಲುಗಳ ಶಕ್ತಿ ಹೋಗಿ ಮನುಷ್ಯನ ಇಡೀ ಜೀವನ ಪರ್ಯಂತ ಅವರನ್ನು ಕಾಡುತ್ತದೆ ಪ್ರತಿ ವರ್ಷ ಎರಡು ಹನಿಯನ್ನು ಚಿಕ್ಕ ಮಗುನಿಂದ ಹಿಡಿದು 5 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾವಾಗಿ ಪೋಲಿಯೋವನ್ನು ಹಾಕಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಹುನಗುಂದ ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ ಪೋಲಿಯೋ ಕಾರ್ಯಕ್ರಮವನ್ನುದ ಕುರಿತು ಮಾತನಾಡಿದರು .ಹುನಗುಂದ ತಾಲೂಕಿನಲ್ಲಿ ಒಟ್ಟು 3,67,381 ಜನಸಂಖ್ಯೆಯಲ್ಲಿ 39.119 ಮಕ್ಕಳಿದ್ದು 70547 ಮನೆಗಳಿಗೆ 388 ಸೂಕ್ಷ್ಮ ಕೇಂದ್ರಗಳನ್ನು 239 ಬೂತಗಳು 251 ಟೀಮ್ ಗಳ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಒಂದು ದಿನ ಪಟ್ಟಣ ಹಾಗೂ ಗ್ರಾಮಗಳಲ್ಲಿ ಮೂರು ದಿನಗಳ ಮನೆ ಮನೆಗೆ ಹೋಗಿ ಅಸಿಕೆಯನ್ನು ಹಾಕುತಿದ್ದೇವೆ ಮತ್ತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿದ್ದಾರೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಕುಸುಮಾ ಮಾಗಿ ಹೇಳಿದರು.ಆಸ್ಪತ್ರೆ ಸಿಬ್ಬಂದಿ ನಾಗರಾಜ ಸಿಂದಗೇರಿ,ಮಂಜುನಾಥ ಹೊಸಮನಿ, ಪ್ರವೀಣ ಕುಮಾರ ಚೂರಿ ಇದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅರುಣ ದುದ್ಗಿ, ವೀರಭದ್ರಪ್ಪ ಇಲಕಲ್ಲ, ಸಂಗಮೇಶ ಚೂರಿ,ಶಿವು ಭಾವಿಕಟ್ಟಿ,ಮಲ್ಲಿಕಾರ್ಜುನ ಚೂರಿ,ಸಾಂತಪ್ಪ ಹೊಸಮನಿ, ಮಹೇಶ ಬೆಳ್ಳಿಹಾಳ,ಮಲ್ಲಪ್ಪ ಕುಂಬಾರ,ಎಸ್.ಎನ್.ಹುನಕುಂಟಿ ವಕೀಲರು ಇನ್ನೂ ಅನೇಕರು ಇದ್ದರು.

Comments