UK Suddi
The news is by your side.

ರಾಷ್ಟ್ರೀಯ ತಲಾ ಆದಾಯ… NATIONAL PER CAPITA INCOME…

ಲೇಖಕರು: ವಿವೇಕಾನಂದ.ಹೆಚ್.ಕೆ.

ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾಗ ಗಮನಿಸಿದ ಕುತೂಹಲಕರ ಅಂಶವನ್ನು, ನಮ್ಮ ದೇಶದ ಜನರ ಆರ್ಥಿಕ ಪರಿಸ್ಥಿತಿ ತಿಳಿಯಲು ಸಹಾಯ ಆಗಬಹುದು ಎಂದು ಇಲ್ಲಿ ಬರೆಯುತ್ತಿದ್ದೇನೆ.

ಸರಳವಾಗಿ ಹೇಳುವುದಾದರೆ,
ಒಂದು ದೇಶದ ಒಟ್ಟು ಆದಾಯವನ್ನು ಆ ದೇಶದ ‌ಒಟ್ಟು ಜನಸಂಖ್ಯೆಯಿಂದ ಭಾಗಾಕಾರ ಮಾಡಿದಾಗ ಬರುವ ಮೊತ್ತವೇ ತಲಾ ಆದಾಯ. ಅಂದರೆ ಪ್ರತಿ ವ್ಯಕ್ತಿಯ ಸರಾಸರಿ ಆದಾಯ.

ಅಮೆರಿಕನ್ ಡಾಲರ್ ಗಳ ಲೆಕ್ಕದಲ್ಲಿ ವಿಶ್ವದ ಅತ್ಯಂತ ಹೆಚ್ಚು ತಲಾ ಆದಾಯ ಇರುವ ದೇಶಗಳು…..

ಲಿಚ್ವೆನ್ಸ್ ಸ್ಟೈನ್ ( Liechtenstein ) — 139100.

ಕತಾರ್ — 124500.

ಮೊನಾಕೊ — 111600.

ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಇವು ಚಿಕ್ಕ ದೇಶಗಳು.

ವಿಸ್ತೀರ್ಣ ಮತ್ತು ಜನಸಂಖ್ಯೆಯ ದೊಡ್ಡ ದೇಶಗಳಾದ….

ಅಮೆರಿಕ — 60200.
ರಷ್ಯಾ — 24893.
ಚೈನಾ — 16760.
ಭಾರತ — 7060.
ಪಾಕಿಸ್ತಾನ – 5830.
ಬಾಂಗ್ಲಾದೇಶ – 4040.
ನೇಪಾಳ – 2710.

ಇನ್ನು ಆಫ್ರಿಕಾದ ಬುರುಂಡಿ, ಮೊಜಾಂಬಿಕ್ ಮುಂತಾದ ದೇಶಗಳ ತಲಾ ಆದಾಯ 1000 ಕ್ಕಿಂತ ಕಡಿಮೆ ಇದೆ.

ಇದರ ಆಧಾರದ ಮೇಲೆ ನಾವುಗಳು ಬಡವರೋ ಶ್ರೀಮಂತರೋ ನೀವೇ ನಿರ್ಧರಿಸಿ. ಅಲ್ಲದೆ ಭಾರತದಲ್ಲಿ ಬಹುಶಃ ಲೆಕ್ಕಕ್ಕೆ ಸಿಗದ 3/4 ಕೋಟಿಗೂ ಹೆಚ್ಚು ಜನ ಇದ್ದಾರೆ ಮತ್ತು ಅಂಬಾನಿ ಅದಾನಿ ಟಾಟಾ ಬಿರ್ಲಾ ಅಜೀಂ ಪ್ರೇಮ್ಜಿ ಮುಂತಾದ ಬಹುದೊಡ್ಡ ಶ್ರೀಮಂತರು ಮತ್ತು ಊಟಕ್ಕೂ ಪರದಾಡುವ ಅನೇಕ ಬಡವರ ನಡುವಿನ ಅಂತರ ತುಂಬಾ ಇದೆ.

ಸುಮ್ಮನೆ ಭ್ರಮಾಲೋಕದಲ್ಲಿ ಯಾರೋ ಅಂಕಣಕಾರರು, ಭಾಷಣಕಾರರು, ಪ್ರವಚನಕಾರರುಗಳು ಹೇಳುವುದು ಭಾರತ ವಿಶ್ವದ ಬಲಿಷ್ಠ ದೇಶ ಎಂದು.

ವೈಯಕ್ತಿಕವಾಗಿ ಹೇಳಬೇಕೆಂದರೆ ಈ ಅಂಕಿಅಂಶಗಳಿಗಿಂತ ಹೆಚ್ಚಿನ ಬಡತನ ಭಾರತದಲ್ಲಿ ಇದೆ.

ಈ ಅಂಶಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡರೆ ನಾವು ಸಾಗಬೇಕಾದ ಹಾದಿ, ನಮ್ಮ ಆದ್ಯತಾ ವಲಯಗಳು, ಅದಕ್ಕಾಗಿ ನಾವು ಪಡಬೇಕಾಗಿರುವ ಶ್ರಮ, ನಮ್ಮ ಜವಾಬ್ದಾರಿ ಎಲ್ಲವೂ ಸ್ಪಷ್ಟವಾಗುತ್ತದೆ.

ಚುನಾವಣೆ ಗೆಲ್ಲುವುದೇ ಒಂದು ದೊಡ್ಡ ಸಾಧನೆ ಎಂದು ನಮ್ಮ ರಾಜಕೀಯ ಪಕ್ಷಗಳು ಭಾವಿಸುವುದಾದರೆ ನಮ್ಮ ನಿಜವಾದ ಅಭಿವೃದ್ಧಿ ಕನಸೇ ಆಗಬಹುದು.

ಸಣ್ಣ ಪ್ರಮಾಣದಲ್ಲೇ ಆದರೂ ನಾವು ಬದಲಾವಣೆಯತ್ತ ಸಾಗೋಣ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

Comments