UK Suddi
The news is by your side.

ಸರಣಿ ಸಮಬಲ ಸಾಧಿಸಿದ ಆಸೀಸ್…

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ 4 ನೇ ಏಕದಿನ ಪಂದ್ಯದಲ್ಲೂ ಟೀಮ್ಇಂಡಿಯಾ ಸೋಲುಂಡಿದೆ. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಆಸೀಸ್ ಗೆಲುವಿಗೆ ಕಠಿಣ ಗುರಿ ನೀಡಿತು. ಆರಂಭಿಕ ಆಟಗಾರ ಶಿಖರ್ ಧವನ್ರ ಶತಕ (143) ಹಾಗೂ ರೋಹಿತ್ ಶರ್ಮಾರ ಅಬ್ಬರದ ಅರ್ಧಶತಕ (95) ನೆರವಿನಿಂದ ಟೀಮ್ಇಂಡಿಯಾ 50 ಓವರ್ಗಳಲ್ಲಿ 358 ರನ್ ಗಳಿಸಿತು.

ಬಳಿಕ ಭಾರತ ನೀಡಿದ 359 ರನ್ ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭದಲ್ಲಿ ಆಘಾತ ಎದುರಿಸಿತು. ಆದರೆ ಉಸ್ಮಾನ್ ಖವಾಜಾ (91) ಹಾಗೂ ಪೀಟರ್ ಹ್ಯಾಂಡ್ಸ್ಕಂಬ್ (117) ಅವರನ್ನು ಕಟ್ಟಿ ಹಾಕುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ವಿಫಲರಾದರು. ಅದರಲ್ಲೂ ಡೆತ್ ಓವರ್ಗಳಲ್ಲಿ ಮಿಂಚಿದ ಅಸ್ಟನ್ ಟರ್ನರ್ ಪ್ರವಾಸಿ ಬಳಗದ ಗೆಲುವಿಗೆ ಕಾರಣರಾದ್ರು. ಕೇವಲ 47.5 ಓವರ್ಗಳಲ್ಲಿ ಬೆನ್ನತ್ತಿದ ಕಾಂಗರೂ ಬಳಗ 4 ವಿಕೆಟ್ಗಳ ಗೆಲುವಿನ ಕೇಕೆ ಹಾಕಿತು. ಜೊತೆಗೆ 5 ಪಂದ್ಯಗಳ ಸರಣಿಯಲ್ಲಿ 2-2 ಅಂತರದಲ್ಲಿ ಸಮಬಲ ಸಾಧಿಸಿತು.

Comments