UK Suddi
The news is by your side.

ಕಳಸಾ ಯೋಜನೆ ಜಾರಿಗೆ ರೈತರಿಂದ ಹಣ ಸಂಗ್ರಹ: ನಿರ್ಧಾರ

ಕಣಕುಂಬಿ/ಬೆಳಗಾವಿ: ರೈತಸೇನಾ ಕರ್ನಾಟಕ ನೇತೃತ್ವದಲ್ಲಿ ಇಂದು ಕಳಸಾ ಮತ್ತು ಹಳತಾರ ಆಣೆಕಟ್ಟು ನಿರ್ಮಿಸುವ ಸಲುವಾಗಿ ಉಡಿ ತುಂಬುವ ಕಾರ್ಯಕ್ರಮ ಮತ್ತು ರೈತರಿಂದ ಗುದ್ದಲಿ ಪೂಜೆ ಕಾರ್ಯಕ್ರಮ ಕಣಕುಂಬಿಯ ಬಳಿ ನಡೆಯಿತು.

ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಈ ಯೋಜನೆಯ ಜಾರಿಗಾಗಿ ರೈತರೇ ಹಣ ಸಂಗ್ರಹಿಸಿ ಕೊಡುವುದು ಹಾಗೂ ಬರಲಿರುವ ದಿನಗಳಲ್ಲಿ ಇನ್ನೂ ವಿಭಿನ್ನ ರೀತಿಯ ಹೋರಾಟ ಮಾಡುವ ನಿರ್ಣಯ ಈ ಸಂದರ್ಭ ಕೈಗೊಳ್ಳಲಾಯಿತು.

Comments