UK Suddi
The news is by your side.

ಅಯ್ಯೋ ಶಿವನೇ..ತಂಪು ಪಾನೀಯ ಪಾಕಿಟ್ ಮೇಲೆ ನಾಳಿನ ಉತ್ಪಾದನೆ ತಾರೀಕು.

ಬಿರು ಬೇಸಿಗೆಯ ಸೆಖೆಗೆ ಕಂಗೆಟ್ಟಿರುವ ಸಾರ್ವಜನಿಕರು ತಂಪು ಪಾನೀಯಗಳ ಮೊರೆ ಹೋಗುತ್ತಿರುವುದು ಸಾಮಾನ್ಯ.

ಇದನ್ನೇ ಬಂಡವಾಳವನ್ನಾಗಿಸಿಕೊಂಡ ವಿವಿಧ ಆಹಾರ ತಯಾರಿಕಾ ಹಾಗೂ ತಂಪು ಪಾನೀಯಗಳ ತಯಾರಿಕಾ ಘಟಕಗಳು,ವ್ಯಾಪಾರದ ಭರಾಟೆಯಲ್ಲಿ,ತಂಪು ಪಾನೀಯಗಳ ಉತ್ಪಾದನೆ ದಿನಾಂಕ ಮುಂಚಿತಾವಾಗಿ ಬರೆದು,ಜನ ಸಾಮಾನ್ಯರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿವೆ. ದಯವಿಟ್ಟು ತಯಾರಿಕಾ ಸಾಮಗ್ರಿಗಳ ಖರೀದಿ ಸಂದರ್ಭದಲ್ಲಿ ಉತ್ಪಾದನೆ ಹಾಗೂ ವಸ್ತುವಿನ ಮುಕ್ತಾಯ ದಿನ ಗಮನಿಸಿ ಖರೀದಿ ಮಾಡಿ.ಜನ ಸಾಮಾನ್ಯರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಉತ್ಪಾದನೆ ಕಂಪನಿಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಬೇಕು.

ಸಾಧ್ಯವಾದರೇ ನಿಸರ್ಗದತ್ತ ಪದಾರ್ಥಗಳನ್ನು ಬಳಸಿ, ಅನಿವಾರ್ಯವಿದ್ದಲ್ಲಿ,ಆಹಾರದ ಗುಣಮಟ್ಟ,ತಯಾರಕ ಕಂಪನಿಯ ಕಾಳಜಿ ಬಗ್ಗೆ ತಿಳಿದು ಖರೀದಿಸಿ,ಆರೋಗ್ಯದ ಬಗ್ಗೆ ನಿಗಾ ವಹಿಸಿ.

Comments