UK Suddi
The news is by your side.

ದೇಶದ ಬದಲಾವಣೆಗೆ ತಪ್ಪದೇ ಮಾಡಿ ಮತದಾನ.

ಮತದಾನ ಎಂಬುದು ಅಖಂಡ ಪ್ರಜಾ ಸಮೂಹದ ಬದಲಾವಣೆಯ ಧ್ವನಿ, ಸಂವಿಧಾನ ನಮಗೆ ಕೊಟ್ಟಿರುವ ದೊಡ್ಡ ಹಕ್ಕು, ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ತನ್ನನ್ನು ಆಳುವ ಸಮಾಜದಲ್ಲಿ ಬದಲಾವಣೆಯನ್ನ ತರುವ ಜನರ ನಾಡಿ ಮಿಡಿತಗಳನ್ನ ಅರಿತು ಸಮಾಜಕ್ಕೆ ಒಳಿತನ್ನ ಮಾಡುವ ಎಲ್ಲಾ ಯೋಜನೆಗಳನ್ನ ಜಾರಿಗೆ ತರುವ ತನ್ನ ಇಷ್ಟವಾದ ಜನಪ್ರತಿನಿದಿಯನ್ನ ಚುನಾಯಿಸಿ ಸಂವಿಧಾನಿಕವಾಗಿ ಅಧಿಕಾರಕ್ಕೆ ತರುವುದೇ ಮತದಾನ.

ಪ್ರಜಾತಂತ್ರ ದೇಶದ ಇದೊಂದು ಪ್ರಮುಖ ಹಕ್ಕು, ದೇಶ ಬೆಳವಣಿಗೆ ಕಾಣಬೇಕಾದರೆ ಒಳ್ಳೆ ಒಳ್ಳೆ ನಾಯಕರು ಅಧಿಕಾರದ ಚುಕ್ಕಾಣಿ ಹಿಡಿದು ಜನಪರ ಆಡಳಿತ ಕೊಡುವ ರೀತಿಯಾಗಬೇಕು,
ಆದ್ದರಿಂದ 18 ವರ್ಷ ಆದ ಎಲ್ಲರೂ ತಮ್ಮ ತಮ್ಮ ಹೆಸರುಗಳನ್ನ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಂಡು ಕಡ್ಡಾಯ ಮತದಾನ ಮಾಡುವಂತಾಗಬೇಕು, ಯಾರು ಗೆದ್ದರು ಅಷ್ಟೆ ನಮಗೇನು ಲಾಭವೆಂಬ ಮನೋದೋರಣೆಯನ್ನ ಕೆಡವಿಯಾಕಿ ದೇಶದ ಹಿತಕ್ಕಾಗಿ ತಪ್ಪದೇ ಮತದಾನ ಮಾಡುವಂತಾಗಬೇಕು,ಅದರಲ್ಲೂ ಮುಖ್ಯವಾಗಿ ಯುವಕರು ಒಟ್ಟಾಗಿ ಜನರಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಬೇಕು ಮತದಾನದ ಪ್ರಾಮುಖ್ಯತೆ ಮತ್ತು ಪವಿತ್ರ್ಯತೆಯನ್ನ ಜನರಿಗೆ ತಿಳಿ ಹೇಳಬೇಕು, ಇಲ್ಲಿ ನಮ್ಮ ಸ್ವಾರ್ಥಕ್ಕಿಂತ ದೇಶದ ಭವಿಷ್ಯದ ದೃಷ್ಟಿಯಿಂದ ಅಭಿವೃದ್ದಿಶೀಲ ವಿಚಾರವುಳ್ಳವರು ಜನಪರ ಕೇಲಸ ಮಾಡಲು ಸ್ವ ಇಚ್ಚಾಶಕ್ತಿಯಿಂದ ದುಡಿಯುತ್ತಿರುವ ನಾಗರಿಕರೇ ಚುನಾಯಿತರಾಗುವಹಾಗೆ ಮಾಡುವ ಶಕ್ತಿ ನಮ್ಮಲ್ಲಿರುವದರಿಂದ ಅತ್ಯಂತ ಜಾಗೃತಿಯಿಂದ ಮತದಾನ ಮಾಡಬೇಕು, ದೇಶದ ಬೆಳವಣಿಗೆಯೆ ನಮ್ಮ ಬೆಳವಣಿಗೆ ಎನ್ನುವ ರೀತಿ ಅರಿವು ಮೂಡಿಸಬೇಕು.

ಹಲವು ಆಮಿಷಗಳನ್ನ ತೋರಿ ಮತದಾರರನ್ನ ಸೇಳೆದು ಚುನಾವಣೆಯಲ್ಲಿ ಗೆದ್ದು ಬರುವ ಪ್ರಕ್ರೀಯೆಗಳು ಅಭ್ಯರ್ಥಿಗಳಿಂದ ನಡೆಯುತ್ತಿರುತ್ತವೆ ಆದ್ದರಿಂದ ಯಾವುದೇ ಕಾರಣಕ್ಕೂ ನಮ್ಮನ್ನ ನಾವು ಮಾರಿಕೊಂಡು ಮತದಾನದ ಘನತೆ ಗೌರವಗಳಿಗೆ ಚ್ಯುತಿ ಬರದಹಾಗೆ ನೋಡಿಕೊಳ್ಳಬೇಕು , ಚುನಾವಣೆ ಸಂದರ್ಭದಲ್ಲಂತು ಅಭ್ಯರ್ಥಿಗಳು ಕೋಡುವ ಆಶ್ವಾಸನೆಗಳಿಗೆನೂ ಬರವಿರುವದಿಲ್ಲ , ಚುನಾವಣಾ ಪ್ರಚಾಋಕ್ಕಾಗಿ ನಾನಾ ಪಕ್ಷಗಳಿಂದ ಏನೇ ಕಾರ್ಯಕ್ರಮ ನಡೆದರೂ ಮತದಾರರ ನಿಲುವು ಮಾತ್ರ ನಿರ್ಧಿಷ್ಟವಾಗಿರಬೇಕು,ಜಾತಿ ಧರ್ಮ ಮೀರಿದ ನಿಜವಾದ ಜನನಾಯಕನನ್ನೆ ಆಯ್ಕೆ ಮಾಡಿ ನಿಮ್ಮ ಹಕ್ಕು ಚಲಾಯಿಸಿ.

ಮತದಾನ ಪ್ರಕ್ರಿಯೆಯಿಂದ ಅರಿವಿದ್ದರು ದೂರವಿರುವ ವಿಧ್ಯಾವಂತರನ್ನ ಮತಗಟ್ಟೆಗಳಿಗೆ ಕರೆತಂದು ಮತದಾನ ಮಾಡುವ ಹಾಗೆ ಪ್ರೇರೆಪಿಸಬೇಕು ,ಹಾಗೂ ಮತಧಾನದ ಅರಿವಿಲ್ಲದೇ ದೂರವಿರುವ ಅವಿಧ್ಯಾವಂತರನ್ನೂ ಮತಗಟ್ಟೆಗಳಿಗೆ ಕರೆತರಬೇಕಾಗಿರುವ ನಮ್ಮೆಲ್ಲರ ದೊಡ್ಡ ಜವಭ್ದಾರಿಯಾಗಿದೆ,ವಿಧ್ಯಾವಂತರೇ ಅತಿ ಹೆಚ್ಚಿನ ಪ್ರಂಆಣದಲ್ಲಿ ಮತದಾನದಿಂದ ದೂರ ಉಳಿಯುತ್ತಿರುವುದು ನಮ್ಮ ಸಮಾಜದ ಒಂದು ನಾಚಿಕೆಗೇಡಿನ ಸಂಗತಿ ನಿರ್ಲಕ್ಷ ದೋರಣೆಯನ್ನ ಕೈ ಬಿಟ್ಟು ಮತದಾನ ಮಾಡಬೇಕಾಗಿದೆ.

ಚುನಾವಣೆಗೆಂದು ಚುನಾವಣಾ ಆಯೋಗ ರಜೆಯನ್ನ ಘೋಷಣೆ ಮಾಡಿರುತ್ತದೆ ಆದ್ದರಿಂದ ಸಾಲು ಸಾಲು ರಜೆ ಬಂತೆಂದು ಮೋಜು ಮಸ್ತಿಗಾಗಿ ದಿನಗಳನ್ನ ದಯಮಾಡಿ ಮೀಸಲಿಡಬೇಡಿ ರಜೆ ದಿನ ಖಡ್ಡಾಯವಾಗಿ ಮತದಾನ ಮಾಡಿ ನಿಮ್ಮ ಹಕ್ಕಿಗೆ ನೀವೆ ಗೌರವ ಕೋಡಿ ನಮ್ಮ ಒಂದು ಮತ ದೇಶದ ಇತಿಹಾಸವನ್ನೆ ಬದಲಾಯಿಸುವಂತದ್ದಾಗಿರುತ್ತದೆ ಅದು ದೇಶಸ ಸಮಗ್ರತೆ ದೃಷ್ಟಿಯಿಂದ , ಬೆಳವಣಿಗೆ ದೃಷ್ಟಿಯಿಂದ ಕೃಷಿ,ಆಹಾರ,ವಿಜ್ಞಾನ,ತಂತ್ರಜ್ಞಾನ,ಶಿಕ್ಷಣ,ರಕ್ಷಣೆ,ಹಿಗೆ ಎಲ್ಲದಕ್ಕೂ ಪರಿಣಾಮ ಬೀರುವದರಿಂದ ಒಂದೊಮ್ಮೆ ಯೋಚಿಸಿ ಯಾರನ್ನ ಆಯ್ಕೆ ಮಾಡಿದರೇ ದೇಶಕ್ಕೆ ಉಳಿಗಾಲವಿದೆ ಯಾರು ಅರ್ಹ ವ್ಯಕ್ತಿ ಎಂಬುದು ತಿಳಿದು ಮತದಾನ ಮಾಡಿ ಯಾರ ಆಮಿಷಕ್ಕೂ ಒಳಗಾಗಬೇಡಿ
ಯಾವಾಗ 100 ಪ್ರತಿಶತ ಮತದಾನ ವಾಗುತ್ತೋ ಆವಾಗ ಮಾತ್ರ ಉತ್ತಮ ಅಭ್ಯರ್ಥಿಗಳು ಅಧಿಕಾರಕ್ಕೆ ಬರುತ್ತಾರೆ ಆದ್ದರಿಂದ ಬದಲಾವಣೆಯ ಸೂತ್ರದಾರರು ನಾವೇ ಆಗಿರುವದರಿಂದ ನಮ್ಮ ಆಯ್ಕೆ ನಮ್ಮ ಕೈಲ್ಲಿದೆ ಚುನಾವಣೆ ಆದ ನಂತರ ಎಂತ ಅಭ್ಯರ್ಥಿ ಗೆದ್ದು ಬಿಟ್ಟನಲ್ಲಾ ಎಂದು ಗೋಗರಿಯುವದಕ್ಕಿಂತ ಮತದಾನದ ದಿನದಂದು ಬಿಡುವು ಮಾಡಿಕೊಂಡು ಮತ ಹಾಕಿ ಮತ್ತು ಎಲ್ಲರಿಗೂ ಮತಹಾಕುವ ಹಾಗೆ ಮಾಡಿ.
ಚುನಾವಣೆ ಸಂದರ್ಭದಲ್ಲಿ ಮತದಾನದ ಪ್ರಕ್ರಿಯೆಯನ್ನ ಹಾಳುಗೇಡುವಲೆಂದು ಕೇಲ ಸಮಾಜಘಾತುಕ ಶಕ್ತಿಗಳು ಇಲ್ಲಸಲ್ಲದ ಗಾಳಿಮಾತುಗಳನ್ನ ತೇಲಿ ಬಿಟ್ಟು ಸಮಾಜದ ಸ್ವಾಸ್ಥ್ಯ ಕೇಡಿಸಲೇತ್ನಿಸುತ್ತಾ ಮತದಾನದ ಪ್ರಮಾಣ ಕಡಿಮೆ ಮಾಡಲೇತ್ನಿಸುತ್ತಾರೆ,ಸಮಾಜದಲ್ಲಿ ಅಶಾಂತಿ ಮೂಡಿಸಲೇತ್ನಿಸುತ್ತಾರೆ.ಜನರಲ್ಲಿ ಭಯದ ವಾತಾವರಣ ಹುಟ್ಟುಹಾಕಲೇತ್ನಿಸುತ್ತಾರೆ,ಅಂಥಹ ಗಾಳಿ ಮಾತಿಗೆ ಕಿವಿಗೊಡದೆ ದೈರ್ಯವಾಗಿ ಮತದಾನ ಮಾಡಿ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕಟ್ಟೆಚ್ಚರ ಮತ್ತು ಅದಕ್ಕೆ ಸರಿಯಾದ ಕ್ರಮಗಳನ್ನ ಕೈಗೊಂಡಿರುತ್ತದೆ,
ಜಾತಿ ಜಾತಿ ಗಳ ನಡುವೆ ವೈಷಮ್ಯಕ್ಕೆ ಅವಕಾಶ ಮಾಡಕೋಡಬೇಡಿ ಶಾಂತಿಯಿಂದ ಮತದಾನ ಮಾಡಿ ಹಾಗೂ ಎಲ್ಲರಿಗೂ ತಿಳಿಹೇಳಿ ಮತದಾನ ಮಾಡುವ ಹಾಗೆ ಮಾಡೋಣ ಭಾರತದ ಘನತೆಯನ್ನ ಎತ್ತಿ ಹಿಡಿಯೋಣ,
ಅಭಿವೃದ್ದಿ ಮಾಡುವ ಜನ ಪ್ರತಿನಿದಿಯನ್ನೆ ಆಯ್ಕೆ ಮಾಡೋಣ
ಬನ್ನಿ ಜನರಲ್ಲಿ ಜಾಗೃತಿ ಮೂಡಿಸೋಣ ಹಾಗು ನಾವು ಮತದಾನ ಮಾಡೋಣ

-ಅಮಿತಕುಮಾರ ಬಿರಾದಾರ ವಿಜಯಪೂರ

Comments