UK Suddi
The news is by your side.

ಪೊಲೀಯೊ ಮುಕ್ತ ದೇಶವಾಗಲು ಸಂಘ ಸಂಸ್ಥೆಗಳ ಕೊಡುಗೆ ಅಪಾರ: ಶಾಸಕ ಆನಂದ ನ್ಯಾಮಗೌಡ

ಜಮಖಂಡಿ: ಸರಕಾರಗಳ ಜತೆ ಸಂಘ ಸಂಸ್ಥೆಗಳು ಕೈಜೋಡಿಸಿದ್ದರಿಂದ ಪೊಲೀಯೊ ಮುಕ್ತ ದೇಶವನ್ನಾಗಿಸಲು ಸಹಕಾರಿಯಾಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ನಗರದ ತಾಲೂಕಾ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯತ, ಜಿಲ್ಲಾಡಳಿತ, ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಗರಸಭೆ, ರೋಟರಿ, ಲೈನ್ಸ್ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ 1978ರಲ್ಲಿ ಪೊಲೀಯೊ ಮುಕ್ತ ದೇಶವನ್ನಾಗಿಸಲು ಲಸಿಕೆ ಪ್ರಾರಂಭಿಸಿದ ನಮ್ಮ ದೇಶ ಮುಂದೆ 1980ರಲ್ಲಿ ಇಡೀ ಜಗತ್ತಿನಾದ್ಯಂತ ಪ್ರಾರಂಭವಾಯಿತು. ಒಟ್ಟು ಜಗತ್ತಿನಲ್ಲಿ 3.5ಲಕ್ಷ ಪೋಲಿಯೋ ಭಾದಿತರಲ್ಲಿ 1.5ಲಕ್ಷ ಪೋಲಿಯೋ ಪೀಡಿತದಿಂದ ಬಳಲುತ್ತಿದ್ದರು. ಈಗ 2011ರಿಂದ ನಮ್ಮ ದೇಶ ಪೋಲಿಯೋ ಮುಕ್ತ ವಾಗಿದ್ದು 2014ರಲ್ಲಿ ವಿಶ್ವ ಆರೋಗ್ಯ ಇಲಾಖೆ ಪೋಲಿಯೋ ಮುಕ್ತ ದೇಶವೆಂದು ಬಿರುದು ನೀಡಿದೆ. ಇದರ ಕೀರ್ತಿ ಸಕಾರದ ಜೊತೆಗೂಡಿ ಶ್ರಮಿಸಿದ ಎಲ್ಲ ಸಂಘ ಸಂಸ್ಥೆಗಳಿಗೆ ಸಲ್ಲುತ್ತದೆ ಎಂದರು.

Comments