UK Suddi
The news is by your side.

ಮಹಾದಾಯಿ ನದಿ ತಡೆಗೋಡೆ ಒಡೆಯಲು ಹೋರಾಟಗಾರರ ನಿರ್ಧಾರ..!

ಹುಬ್ಬಳ್ಳಿ: ಮಹಾದಾಯಿ ನದಿಯ ಕಳಸಾ ಕಾಲುವೆಗೆ ನಿರ್ಮಿಸಿದ ತಡೆಗೋಡೆಯನ್ನು ಸರ್ಕಾರ ತೆರವುಗೊಳಿಸಬೇಕು. ಇಲ್ಲದಿದ್ದರೆ ಖುದ್ದಾಗಿ ತಡೆಗೋಡೆ ಒಡೆದು ಹಾಕುತ್ತೇವೆ ಎಂದು ಕಳಸಾ-ಬಂಡೂರಿ ರೈತ ಹೋರಾಟ‌ ಸಮಿತಿ ಅಧ್ಯಕ್ಷ ಸಿದ್ದಣ್ಣ ಕೆ.ಜಿ. ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದ್ದು ಪ್ರತಿಕ್ರಿಯೆ ಬರದಿದ್ದರೆ, ಬೆಳಗಾವಿಯಲ್ಲಿ ಮಾರ್ಚ್ 15ರಂದು ಹೋರಾಟಗಾರರು ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದರು.

ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನ್ಯಾಯಮಂಡಳಿ ತೀರ್ಪು ನೀಡಿದ ನಂತರ ರಾಜ್ಯ ಸರ್ಕಾರ ಹೋರಾಟಗಾರರನ್ನು ಕರೆದು ಮುಂದಿನ ನಡೆಯ ಬಗ್ಗೆ ಚರ್ಚಿಸಬೇಕಾಗಿತ್ತು. ಆದರೆ ಯಾರೊಂದಿಗೂ ಮಾತನಾಡದೆ ಸಲಹೆ ಪಡೆಯದೇ ಮೇಲ್ಮನವಿ ಸಲ್ಲಿಸಿದೆ ಎಂದು ಅವರು ತಿಳಿಸಿದರು.

ಗೋಷ್ಟಿಯಲ್ಲಿ ಕರಿಯಪ್ಪ ಹೊನ್ನಾಪುರ, ಬಾಬಾಜಾನ್ ಮುಧೋಳ, ಎ.ಎಸ್. ಪೀರಜಾದೆ, ಇಲಿಯಾಸ್ ಪಾಟೀಲ, ರಮೇಶ್ ಬೋಸ್ಲೆ ಇದ್ದರು.

Comments