UK Suddi
The news is by your side.

ಬಸವ ಪಥದಲ್ಲಿ ಸಾಗಿದ ಪೂಜ್ಯ ಡಾ:ಮಾತಾಜಿಯವರ ಜೀವನದ ಮೈಲಿಗಲ್ಲುಗಳು.

1) ಜನನ 13-03-1946 ತಂದೆ: ಡಾ.ಬಸಪ್ಪ. ತಾಯಿ ಬಿ.ಗಂಗಮ್ಮ.
2) ಸ್ಥಳ:ಚಿತ್ರದುರ್ಗ ಜಿಲ್ಲೆಯ ಸಾಸಲಟ್ಟಿ ಗ್ರಾಮ.
3) ವಿದ್ಯಾಭ್ಯಾಸ: ಬಿ ಎಸ್ ಸಿ ಪದವೀಧರರು -1965.
4) ಗುರು ದರ್ಶನ:ತರಳುಬಾಳು ಹುಣ್ಣಿಮೆಯ ಸಮಾರಂಭದಲ್ಲಿ ಫೆಬ್ರವರಿ 1965.
5) ಮನೆಯಿಂದ ನಿರ್ಗಮನ:19-8-1965 ದಾವಣಗೆರೆಯ ವಿಶ್ವಕಲ್ಯಾಣ ಮಂಟಪಕ್ಕೆ ಆಗಮನ.
6) ಇಷ್ಟಲಿಂಗ ದೀಕ್ಷೆ: ಗುರು ಲಿಂಗಾನಂದ ಅಪ್ಪಾಜಿಯವರಿಂದ 21-8-1965.
7) ಜಂಗಮ ದೀಕ್ಷೆ:05-04-1966 ಲಿಂಗಾನಂದ ಅಪ್ಪಾಜಿಯವರಿಂದ.
8) 28-12-1967 ರಂದು ಬಸವಕಲ್ಯಾಣದಲ್ಲಿ ನಡೆದ ಶ್ರೀ ಬಸವೇಶ್ವರ ಅಷ್ಟಶತಮಾನೋತ್ಸವ ಕಾರ್ಯಕ್ರಮದಲ್ಲಿ ಸ್ತ್ರೀ ಜಗದ್ಗುರು ಪೀಠ ಸ್ಥಾಪನೆಯ ಘೋಷಣೆ.
9) 1969 ರಲ್ಲಿ ಎಂ.ಎ ತತ್ವಜ್ಞಾನ ವಿಭಾಗದಲ್ಲಿ ಮೊದಲಿಗರಾಗಿ ತೇರ್ಗಡೆ.
10) ಕಲ್ಯಾಣ ಕಿರಣ ಮಾಸಪತ್ರಿಕೆ ಉದ್ಘಾಟನೆ 14-01-1970.
11) ಧಾರವಾಡದಲ್ಲಿ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪಿಠ ಸ್ಥಾಪನೆ 21-04-1970 ಮತ್ತು ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರುವಾಗಿ ಪೀಠಾರೋಹಣ.
12) ನಿರಂತರವಾದ ಅವಿಶ್ರಾಂತ ಧರ್ಮ ಪ್ರಚಾರ.
13) ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ ಸ್ಥಾಪನೆ ಮತ್ತು ಉದ್ಘಾಟನೆ 04-05-1975.
14) ವಿದೇಶ ಪ್ರವಾಸ. 1976 ರಲ್ಲಿ ಇಂಗ್ಲೆಂಡಿಗೆ 1981 ರಲ್ಲಿ ಅಮೆರಿಕಾ, ಕೆನಡಾ.
15) ಬಸವ ಗಂಗೋತ್ರಿ ಸ್ಥಾಪನೆ 08-10-1978.
16) ಸಾಹಿತ್ಯ ಸಿದ್ದಿ ತರಂಗಿಣಿ, ಬಸವತತ್ವ ದರ್ಶನ, ಹೆಪ್ಪಿಟ್ಟ ಹಾಲು,ಕೆಳದಿ ಚೆನ್ನಾಮ್ಮಾಜಿ,ಬಸವ ವಚನ ದಿಪ್ತಿ, ವಚನ ವ್ಯಾಖ್ಯಾನ ಸಹಿತ ಬಸವ ವಚನಮೃತ ಇತ್ಯಾದಿ.
17) ತಮ್ಮ ಗುರುವಿನೊಡಗೂಡಿ ಯುವಜನರಲ್ಲಿ ಧರ್ಮನಿಷ್ಠೆ ಮತ್ತು ಸಮಾಜ ಪ್ರೇಮದೊಂದಿಗೆ ರಾಷ್ಟ್ರಭಕ್ತಿ ಉದ್ದೀಪಿಸಲು ರಾಷ್ಟ್ರೀಯ ಬಸವ ದಳಗಳಿಗೆ ಚಾಲನೆ 1980.
18) 1987 ರಲ್ಲಿ ಗುರು ಸಂಕಲ್ಪದಂತೆ ಕೂಡಲಸಂಗಮದಲ್ಲಿ ಬಸವ ಧರ್ಮ ಪೀಠ ಟ್ರಸ್ಟ್ ಸ್ಥಾಪನೆ.
19) ಬಸವ ಧರ್ಮದ ಮಹಾ ಜಗದ್ಗುರುವಾಗಿ ಗುರು ಲಿಂಗಾನಂದರಿಂದ ಪೀಠಾರೋಹಣ ಮಾಡಿಸಿದ್ದು 13-01-1992.
20) 1988 ಜನವರಿಯಲ್ಲಿ ಪ್ರಥಮ ಐತಿಹಾಸಿಕ ಶರಣ ಮೇಳ ಉದ್ಘಾಟನೆ.
21) ಲಿಂಗಾಯತ ಸಮಾಜದಲ್ಲಿ ಸಾಂಪ್ರದಾಯಿಕವಾಗಿ ಬೇರೂರಿದ್ದ ಅರ್ಥಹೀನ ಧಾರ್ಮಿಕ ಮತ್ತು ಸಮಾಜಿಕ ಆಚರಣೆಗಳಾದ ಮದುವೆ, ನಾಮಕರಣ, ಹುಟ್ಟು ಹಬ್ಬ ಶರಣರ ಜಯಂತಿ, ಗುರುಲಿಂಗಜಂಗಮ ಪೂಜಾವಿಧಾನ ಶವಸಂಸ್ಕಾರ ಮುಂತಾದ ಕ್ರಿಯೆಗಳಿಗೆ ಸುಧಾರಿತ ಹಾಗೂ ಸುಸಂಸ್ಕೃತ ಚೌಕಟ್ಟನ್ನು ಒದಗಿಸಿ ಕೊಟ್ಟ ನಾಡಿನ ಮೊದಲ ಮಹಿಳಾ ಪೀಠಾಧಿಪತಿ ಡಾ. ಶ್ರೀ ಮಾತೆ ಮಹಾದೇವಿ ತಾಯಿಯವರು.

-ರವಿಕುಮಾರ ಕಗ್ಗಣ್ಣವರ.

Comments