UK Suddi
The news is by your side.

ಗದಗದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಸಭೆ.

ಗದಗ:ನಗರದ ವಾರ್ಡ್ ನಂ. 20-21 ರ ಗಂಜಿ ಬಸವೇಶ್ವರ ಸರ್ಕಲ್ ಹತ್ತಿರ ಎಂ.ಎಸ್.ಶಾಬಾದಿಮಠ ಪ್ರೇಸ್‍ನಲ್ಲಿ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಗಳಾಗಲಿ ಎಂದು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಅತಿಥಿಗಳಾಗಿ ಆಗಮಿಸಿದ್ದ ಬಿಜೆಪಿ ಶಹರ ಅಧ್ಯಕ್ಷ ಜಗನ್ನಾಥಸಾ ಭಾಂಡಗೆಯವರು ಬೂತ್ ಮಟ್ಟದ ಕಾರ್ಯಕರ್ತರಿಗೆ ಅಬಿನಂದನೆ ಸಲ್ಲಿಸಿದರು. ಅಧ್ಯಕ್ಷತೆಯನ್ನು ಬಸವರಾಜ ಶಾಬಾದಿಮಠ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಹಾವೇರಿ ಲೋಕಸಭಾ ಸಂಚಾಲಕರಾದ ಎಂ.ಎಸ್.ಕರೀಗೌಡ್ರ, ರಾಷ್ಟ್ರೀಯ ಪರಿಷತ್ ಸದಸ್ಯರಾದ ಕಾಂತೀಲಾಲ ಬನ್ಸಾಲಿ, ಪ್ರಮುಖರಾದ ಎಂ.ಎಂ.ಹಿರೇಮಠ ಸಂದರ್ಬೊಚಿತವಾಗಿ ಮಾತನಾಡಿದರು. ಬಸವರಾಜ ಬಾಬಣ್ಣ ಶಾಬಾದಿಮಠ, ಶಕ್ತಿ ಕೇಂದ್ರ ಪ್ರಮುಖರಾದ ಶಂಕರ ಕರಿಬಿಷ್ಠಿ, ರಮೇಶ ಕುರ್ತಕೋಟಿ, ಮಾಜಿ ನಗರಸಭಾ ಸದಸ್ಯರಾದ ಕಮಲಾಕ್ಷೀ ಗೊಂದಿ, ಕಿರಣ ಕಲಾಲ, ವಿಜಯ ಹಿರೇಮಠ, ವಿರೇಶ ಗಡಗಿಶೆಟ್ಟರ, ಸಿದ್ದಲಿಂಗನಗೌಡ ಉಮಚಗಿ, ಪ್ರಭು ಕಲ್ಬಂಡಿ, ಸಿದ್ದು ಗಾಣಿಗೇರ, ರುದ್ರಪ್ಪ ಬನ್ನಿಮರದ, ರಮೇಶ ಕೊರ್ಲಹಳ್ಳಿ, ಬಸವರಾಜ ಬಳ್ಳಾರಿ, ಬಸಯ್ಯ ಹಿರೇಮಠ, ಅಶೋಕ ಉಳ್ಳಾಗಡ್ಡಿ, ಅರವಿಂದ ಹಬೀಬ, ಸಂತೋಷ ಪಾಟೀಲ, ಸಿದ್ದು ಪಾಟೀಲ, ಮಂಜು ಕಬನೂರ, ಮಲ್ಲಪ್ಪ ಆಡಿನ, ಮಂಜು ಲಕ್ಕುಂಡಿ, ಮಹೇಶ ಮಾಳೆಕೊಪ್ಪ, ಪ್ರಶಾಂತ ಮುದೆಗಣ್ಣವರ, ರಾಚಪ್ಪ ಲಕ್ಕುಂಡಿ, ಮಂಜು ಆಲೂರ, ಮುತ್ತು ಬೆಟಗೇರಿ, ಪ್ರಭು ವರವಿ, ಹನುಮಂತಪ್ಪ ಕದಡಿ, ಸುರೇಶ ಅಂಜೆಖಾನ, ಅಂಬಾಜಿ ಬೈರವಾಡೆ, ಮುತ್ತು ಪಲ್ಲೆದ, ಪ್ರಭು ಉಮಚಗಿ, ದೀಪು ಪತ್ತಾರ, ವಿನಾಯಕ ಗೊಡಿ, ರಾಚಣ್ಣ ಕಲ್ಮಟ, ಕಿರಣ ಬೈಲಪ್ಪನವರ, ಅಮರ ಖೋಡೆ, ಗೋಪಾಲಸಾ ಖೋಡೆ, ಗೈಬುಸಾಬ ಕಲೆಬಾಯಿ, ಬಾಪು ಮರೀಗೌಡ್ರ, ಷಡಕ್ಷರಯ್ಯ ಹಿರೇಮಠ, ಬಸವರಾಜ ಪೂಜಾರ, ಸತೀಶ ಗಿಡ್ಡಹನುಮಣ್ಣವರ ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು. ತೋಟಯ್ಯ ವಿಭೂತಿಮಠ ನಿರೂಪಿಸಿ ವಂದಿಸಿದರು.

ವರದಿ: ಪ್ರಭು ಗಂಜಿಹಾಳ
ಮೊ: 9448775346

Comments