UK Suddi
The news is by your side.

ಚತುರೆ ಬಾ ಸಮ್ಮತಿಸು….

ನೀನಿಲ್ಲದೆ ನನಗೆಲ್ಲ ಬರಿ ಭನಭನ
ಒಡಲ ತುಂಬ ಅನುರಾಗ ಪ್ರತಿಕ್ಷಣ
ಹೇಳೆ ಪ್ರಿಯಲತೆ ಬಂಧಿಸಲೆ ದೇವತೆ
ಬಾರೆನ್ನ ಚೆಲುವೆ ಸರಗಿಯ ಶೋಭಿತೆ
ನೋಟದಿ ಸೆಳೆದೆ ನಗುತ ನಿಂದೆ
ಮಾಯಗಾತಿ ಅದೆಲ್ಲಿಂದ ಬಂದೆ
ಮನದಲಿ ನೂರಾರು ಆಸೆಗಳ ತಂದೆ
ಹೂವ್ವಿನ ಗಂಧದಲಿ ಎನ್ನ ಮೀಯಿಸಿದೆ
ಕೆಂಪಿನ ಕೆನ್ನೆಯ ಮರೆಯಲಿ ಹೆಂಗೆ
ಹರಳಿನ ಕೊರಳನು ಚುಂಬಿಸಿ ನಿಂಗೆ
ಹೆರಳನು ಬೆರಳಲಿ ಆಡಿಸಲೇನ ಹಂಗೆ
ಗುಳಿಕೆನ್ನೆಯ ಒಡತಿ ಬಾರೆ ನಿಂಗಿ ಬಳಿಗೆ
ಕಾಯಿಸದಿರು ಒಲವ ಸೂಸಿದ ನಾರಿ
ಸಮ್ಮತಿಸು ನೀ ಬಾಳ ಹಬ್ಬದ ಬಂಗಾರಿ
ಹೃದಯ ಹಿಗ್ಗ ತಡೆಯಲಾರೆ ಸಿಂಗಾರಿ
ತಂದಿರುವೆ ಕರೆದೊಯ್ಯಲು ಅಂಬಾರಿ
ಹೇಗೇಗೋ ಇದ್ದೆ ನಾ ಮರುಳನಂತೆ
ನೀ ಬಂದೆ ಮದಿರೆಯ ಮೋಹದಂತೆ
ಸುರಗಿಯ ಸುತ್ತಿ ನಿಂತೆ ಜಾರದಂತೆ
ಅನುಮಾನ ಬೇಡ ಅನುಮತಿಸು ಕಾಂತೆ
-ಜಯಶ್ರೀ ಭ.ಭಂಡಾರಿ.
ಬಾದಾಮಿ.

Comments