UK Suddi
The news is by your side.

ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಶಿವಕಾಂತ ಸಿದ್ನಾಳ?

ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಮಾಜಿ ಸಂಸದ ಎಸ್. ಬಿ .‌ ಸಿದ್ನಾಳ ಪುತ್ರ ಶಿವಕಾಂತ ಸಿದ್ನಾಳ ಪಾಲಾಗಿದ್ದು ಶೀಘ್ರ ಮೊದಲ ಪಟ್ಟಿಯಲ್ಲಿ ಹೆಸರು ಬರಲಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಲೋಕಸಭಾ ಚುನಾವಣೆ ಅಭ್ಯರ್ಥಿ ಓಟದಲ್ಲಿ ಅಶೋಕ ಪಟ್ಟಣ , ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳ್ಕರ ಮತ್ತಿತರರನ್ನು ಮೀರಿ ಶಿವಕಾಂತ ಸಿದ್ನಾಳ ಟಿಕೆಟ್ ಗಿಟ್ಟಿಸಿದ್ದಾರೆಂದು ತಿಳಿದು ಬಂದಿದ್ದು. ಅಶೋಕ ಪಟ್ಟಣ ಅವರು ಇವರಿಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

ಹೈಕಮಾಂಡ ಕೂಡ ಇದಕ್ಕೆ ಅನುಮೋದನೆ ನೀಡಿದ್ದು ಜಿಲ್ಲೆಯ ನಾಯಕರನ್ನು ಒಗ್ಗೋಡಿಸಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವಲ್ಲಿ ಮಾಜಿ ಶಾಸಕ ಫಿರೋಜ್ ಸೇಠ ಹಾಗೂ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷ ರಾಜು ಸೇಠ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. ಅಂತಿಮ ತೀರ್ಮಾನ‌ ಹೈಕಮಾಂಡ ನಿಂದ ಹೊರಬೀಳಬೇಕಾಗಿದೆ.

Comments