UK Suddi
The news is by your side.

ಎರಡು ದಿನಗಳ ರಾಜ್ಯಮಟ್ಟದ ಮಾಧ್ಯಮ ಉತ್ಸವ – ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ ರನ್ನರ್ ಆಪ್ ಮುಡಿಗೇರಿಸಿಕೊಂಡ ಸ.ಸ.ಅ ಕಾಲೇಜ್

ಬಳ್ಳಾರಿ: ಸಿದ್ಧಾರ್ಥ ಮಾಧ್ಯಮ ಅಧ್ಯಯನಕೇಂದ್ರದಲ್ಲಿ ನಡೆದ ಮಾಧ್ಯಮ ಸಂಭ್ರಮದಲ್ಲಿ ಬಳ್ಳಾರಿಯ ಸರಳಾದೇವಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ, ರನ್ನರ್‍ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಬಂದಿದ್ದು ತುಂಬಾ ಸಂತೋಷದಾಯಕ ವಿಷಯವಾಗಿದೆ ಎಂದು ಪ್ರಾಂಶುಪಾಲ ಪ್ರೊ.ಅಬ್ದುಲ್ ಮುತಾಲಿಬ್ ತಿಳಿಸಿದರು.

ತುಮಕೂರಿನ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಆಯೋಜಿಸಿದ್ಧ ಎರಡು ದಿನಗಳ ರಾಜ್ಯಮಟ್ಟದ ‘ಮಾಧ್ಯಮ ಉತ್ಸವ -2019’ ಕಾರ್ಯಕ್ರಮದಲ್ಲಿ ಬಳ್ಳಾರಿ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ ವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜ್(ಸ್ವಾಯತ್ತ)ನ ಪತ್ರಿಕೋದ್ಯಮ ವಿದ್ಯಾರ್ಥಿಗಳು ರನ್ನರ್ ಆಪ್ ಪಡೆದುಕೊಂಡ ಹಿನ್ನೆಲೆಯಲ್ಲಿ ಹರ್ಷ ವ್ಯಕ್ತ ಪಡಿಸಿದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕಾಗುತ್ತದ್ದೆ, ಸಮಾಜದಲ್ಲಿರುವ ಜಲ್ವಂತ ಸಮಸ್ಯೆಗಳನ್ನು ಸರ್ಕಾರ ಗಮನಕ್ಕೆ ತಂದು ಪರಿಹಾರದ ಮಾರ್ಗಸೂಚಿಸುವ ಕೆಲಸ ಮಾಡಬೇಕಾಗಿದೆ. ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಬೆಳೆಯುತ್ತಿರುವುದು ನಾವೆಲ್ಲರೂ ಸಂಭ್ರಮಿಸಬೇಕಾದ ವಿಷಯವಾಗಿದೆಎಂದು ತಿಳಿಸಿದರು. ಅಭಿನಂದನೆಗಳನ್ನು ಸಲ್ಲಿಸಿದರು. ಜೊತೆಗೆ ಪತ್ರಿಕೋದ್ಯಮ ಉಪನ್ಯಾಸಕ ಸುಂಕಣ್ಣ.ಟಿ ಹಾಗೂ ಸಮಾಜಶಾಸ್ತ್ರದ ಉಪನ್ಯಾಸಕರಾದ ಶರಣಪ್ಪ ಅವರ ಮಾರ್ಗದರ್ಶನವನ್ನು ಶ್ಲಾಘಿಸಿದರು.
ಕಾಲೇಜಿನ ವಿದ್ಯಾರ್ಥಿಗಳಿಗೆಲ್ಲಾ ನೀವೂ ಇದೇ ರೀತಿಯಲ್ಲಿ ಸಾಧನೆಯ ಹಾದಿಯಲ್ಲಿ ಪಯಣ ಬೆಳಸಬೇಕೆಂದು ಸಲಹೆ ನೀಡಿದರು. ಸಂಭ್ರಮದಲ್ಲಿ ನೀಡಿದ ಟ್ರೋಫಿಯನ್ನು ತೋರಿಸಲಾಯಿತು.ಸಂಭ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಇಸ್ಮಾಯಿಲ್ ಮಕಂದರ್ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತದ್ದುಎಂದು ಅಭಿನಂದಿಸಿದರು ಹಾಗೂ ಸದಾ ಹೀಗೆ ಮುಂದುವರಿಯಿರಿ ಎಂದು ಶುಭ ಹಾರೈಸಿದರು.
ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಕಾಂತ್ (ವ್ಯಂಗ್ಯಚಿತ್ರ) ಪ್ರಥಮ ಬಹುಮಾನ, ಮಂಜುನಾಥ.ಸಿ(ಪಿ.ಟು.ಸಿ) ಪ್ರಥಮ ಬಹುಮಾನ, ಪ್ರಭಾಕರ್.ಪಿ (ವರದಿಗಾರಿಕೆ) ಪ್ರಥಮ ಬಹುಮಾನ, ಪ್ರಭಾಕರ್.ಪಿ ಮತ್ತು ಸುರೇಶ (ಪುಟವಿನ್ಯಾಸ) ಪ್ರಥಮ ಬಹುಮಾನ ಪಡೆದಿದ್ದಾರೆ.
ಕಾಲೇಜಿನ ಗ್ರಂಥಪಾಲಕ ಗೋಪಾಲರೆಡ್ಡಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಸುಂಕಣ್ಣ.ಟಿ, ರಾಜ್ಯಶಾಸ್ತ್ರದ ವಿಭಾಗ ಉಪನ್ಯಾಸಕ ನಾಗರಾಜ, ಸಮಾಜಶಾಸ್ತ್ರದ ಉಪನ್ಯಾಸಕ ಶರಣಪ್ಪ, ಕಾಲೇಜಿನಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಇದ್ದರು.

-ಪ್ರಭಾಕರ ಪಿ

Comments