UK Suddi
The news is by your side.

ಐಪಿಎಲ್ ಬೆಟ್ಟಿಂಗ್: ಕಿರುಕುಳ ತಾಳಲಾರದೆ ಹಾಸನದ ವಿದ್ಯಾರ್ಥಿ ಆತ್ಮಹತ್ಯೆ.

ಹಾಸನ: ಐಪಿಎಲ್ ಬೆಟ್ಟಿಂಗ್ ವಿದ್ಯಾರ್ಥಿಯೋಬ್ಬ ಬಲಿಯಾಗಿದ್ದಾನೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬದುಕರಹಳ್ಳಿ ಗ್ರಾಮದ ಲತೇಶ್ ಕುಮಾರ್ ಮೃತ ವಿದ್ಯಾರ್ಥಿ.

ರಾಜೀವ್ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸ ಮಾಡ್ತಿದ್ದ ಲತೇಶ್ ಐಪಿಎಲ್ ಬೆಟ್ಟಿಂಗ್ ಕಟ್ಟಿ ಸೋತಿದ್ದ. ಹಣಕ್ಕಾಗಿ ಬುಕ್ಕಿಗಳು ಬೆನ್ನಹಿಂದೆ ಬಿದ್ದಿದ್ದರು. ಮನೆ ಬಳಿಯೂ ಬಂದು ಹಣಕ್ಕಾಗಿ ಪೀಡಿಸುತ್ತಿದ್ದರು ಎನ್ನಲಾಗಿದ್ದು.

ಅವರ ಕಿರುಕುಳ ತಾಳಲಾರದೆ ಲತೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ.

Comments