UK Suddi
The news is by your side.

ಡಾ. ರಾಜಕುಮಾರ ವ್ಯಕ್ತಿತ್ವ ಮಾದರಿ:ಡಿಸಿ ದೀಪಾ ಚೋಳನ್

ಧಾರವಾಡ: ಕನ್ನಡ ಚಿತ್ರರಂಗದ ಮೇರುನಟ, ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜಕುಮಾರ ಅವರದು ಎಲ್ಲರಿಗೂ ಮಾದರಿಯಾಗಿರುವ ವ್ಯಕ್ತಿತ್ವ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಅವರು ಬುಧವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಚರಿಸಿದ ಡಾ. ರಾಜಕುಮಾರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಮಾತನಾಡಿದರು.

ಕನ್ನಡ ಚಿತ್ರರಂಗದಲ್ಲಿ ಮೌಲ್ಯಾಧಾರಿತ ಜೀವನವನ್ನು ಪ್ರತಿನಿಧಿಸಿ ಜನಸಾಮಾನ್ಯರಿಗೆ ಅಚ್ಚುಮೆಚ್ಚಿನ ನಟರಾಗಿದ್ದ ಡಾ. ರಾಜಕುಮಾರ ಸರಳ ಜೀವನ, ಉದಾತ್ತ ಚಿಂತನ ಮೈಗೂಡಿಸಿಕೊಂಡಿದ್ದರು. ಅವರು ಚಿತ್ರಗಳಲ್ಲಿನ ಪಾತ್ರಗಳಿಗೆ ಜೀವ ತುಂಬುವ ಮೂಲಕ ನೈತಿಕ ಬದುಕಿಗೆ ಪ್ರತಿಯೊಬ್ಬರಲ್ಲಿ ಪ್ರೆರಣೆ ತುಂಬುತ್ತಿದ್ದರು. ಅಂತಹ ಜನಮೆಚ್ಚಿದ ನಟ ಅಪರೂಪ ಅವರು ಬದುಕು ಎಲ್ಲರಿಗೂ ಮಾದರಿಯಾಗಿದೆ. ಚುನಾವಣೆ ನೀತಿಸಂಹಿತೆ ಇರುವುದರಿಂದ ಸರಳ ರೀತಿಯಲ್ಲಿ ಜಯಂತಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ವಾರ್ತಾ ಸಹಾಯಕ ಸುರೇಶ ಹಿರೇಮಠ, ಪ್ರ.ದ.ಸ. ಸಿ.ಬಿ.ಭೋವಿ ಮತ್ತು ಸಿಬ್ಬಂದಿ ವರ್ಗ ಹಾಗೂ ವಿವಿಧ ಇಲಾಖೆ ನೌಕರ ವರ್ಗದವರು ಪಾಲ್ಗೊಂಡಿದ್ದರು.

-Dharawad VB

Comments