UK Suddi
The news is by your side.

ಬೆಳಗಾವಿಯ ಹಿಂಡಲಗಾ ಜೈಲಿನಿಂದ ಖೈದಿ ಪರಾರಿ.

ಬೆಳಗಾವಿ: ಮರಣದಂಡನೆಗೆ ಗುರಿಯಾಗಿದ್ದ ಇಲ್ಲಿನ ಹಿಂಡಲಗಾ ಜೈಲು ಖೈದಿ ಪರಾರಿಯಾದ ಘಟನೆ ನಡೆದಿದೆ.

ಮುರಗೇಶ ಅಡಿವೆಪ್ಪ ಅಲಿಯಾಸ್ ಮುರುಗ ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯಾನಗರದ ಈತ ಚಾಮರಾಜನಗರ ಜಿಲ್ಲೆಯ ಹರಲೆ ಗ್ರಾಮದಲ್ಲಿ ಐದು ಕೊಲೆ ಹಾಗೂ ಬಾಲಕಿಯ ಕೊಲೆ ಆರೋಪಿಯಾಗಿದ್ದ.

ಹಿಂಡಲಗಾ ಜೈಲಿನ ಗೋಡೆ ಏರಿ ಹೊರಜಿಗಿಯುವಲ್ಲಿ ಎಪ್ರಿಲ್ 22ರ ತಡರಾತ್ರಿ ಯಶಸ್ವಿಯಾಗಿದ್ದಾನೆಂದು ವರದಿಯಾಗಿದೆ. ಕೊಲೆ ಪ್ರಕರಣದಲ್ಲಿ ಅಂದು ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಶಿಕ್ಷೆ ಪ್ರಕಟಗೊಳಿಸಿ ಹಿಂಡಲಗಾ ಜೈಲಿಗೆ ಕಳಿಸಿತ್ತು.

Comments