UK Suddi
The news is by your side.

ಮಾಜಿ ಶಾಸಕ ಡಾ.ಎನ್.ಬಿ.ನಂಜಪ್ಪ ವಿಧಿವಶ.

ಹಾಸನ: ಮಾಜಿ ಶಾಸಕ ಡಾ.ಎನ್.ಬಿ.ನಂಜಪ್ಪ (89)ವಿಧಿವಶಯಾಗಿದ್ದಾರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ 8.35ಕ್ಕೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು

ಡಾ: ಎನ್.ಬಿ. ನಂಜಪ್ಪ ಅವರು ಮೂಲತಃ ಚನ್ನರಾಯಪಟ್ಟಣ ತಾಲೂಕು ನೇರಲಕೆರೆಯವರು ಮಾಜಿ ಪ್ರಧಾನಿ‌ ಇಂದಿರಾಗಾಂಧಿ ಅವರ ಕಟ್ಟಾ ಅನುಯಾಯಿಯಾಗಿದ್ದರು. 1985 ರಲ್ಲಿ ಶ್ರವಣಬೆಳಗೊಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು ನಂತರ 1989 ರಿಂದ 1994 ರ ವರೆಗೆ ಅದೇ ಕ್ಷೇತ್ರದಿಂದ ಶಾಸಕರಾಗಿದ್ದರು.

ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಹಾಸನದ ಖ್ಯಾತ ವೈದ್ಯೆ ಡಾ.ಭಾರತಿ ರಾಜಶೇಖರ್ ತಂದೆ. ಹಾಸನದ ವಾತ್ಸಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮೃತರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಾದ ನೇರಲಕೆರೆಯಲ್ಲಿ ನಡೆಯಲಿದೆ.

Comments