UK Suddi
The news is by your side.

ಕಾಂಟೊನ್ಮೆಂಟ್ ತರಕಾರಿ ಮಾರುಕಟ್ಟೆಯನ್ನು ನೂತನ ಎಪಿಎಂಸಿಗೆ ಸ್ಥಳಾಂತರಿಸಿ.

ಬೆಳಗಾವಿ: ನಗರದ ಕಾಂಟೊನ್ಮೆಂಟ್ ಪ್ರದೇಶದಲ್ಲಿರುವ ಖಾಸಗಿ ತರಕಾರಿ ಮಾರುಕಟ್ಟೆಯನ್ನು, ಎಪಿಎಂಸಿಯ ನೂತನ ಹೈಟೆಕ್ ಸಗಟು ಮಾರುಕಟ್ಟೆಗೆ ಸ್ಥಳಾಂತರಿಸಲು ಒತ್ತಾಯ ಕೇಳಿಬಂದಿದೆ. ಸ್ಪರ್ಧಾತ್ಮಕ ದರಗಳು ಸಿಗದೇ ರೈತರು ಕಂಗಾಲಾಗಿದ್ದಾರೆ.

ತರಕಾರಿ ಬೆಳೆಗಾರರಿಗೆ ಸೂಕ್ತ ಹರಾಜು ವ್ಯವಸ್ಥೆ ಇಲ್ಲ, ಗುಣಾತ್ಮಕ ಮಾಪಕಗಳಿಲ್ಲದೇ ಮೋಸವಾಗುತ್ತಿದೆ. ಕೋಟ್ಯಾಂತರ ಖರ್ಚು ಮಾಡಿ ನಿರ್ಮಿಸಲಾದ ಹೊಸ ಎಪಿಎಂಸಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಬೆಳಗಾವಿಯ ಜಿಲ್ಲಾ ಸಗಟು ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಶಿವನಗೌಡ ಪಾಟೀಲ, ಬಸವನಗೌಡ ಪಾಟೀಲ, ಜಿಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ, ಗಜಾನನ ಶಹಾಪುರ, ರಾಜೇಂದ್ರ ಕಂಗ್ರಾಳಕರ, ಮೌನಪ್ಪ ಪಾಟೀಲ, ನಿತಿನ್ ಮುತಗೇಕರ, ಜಾವೇದ ಸಣದಿ, ಶಂಕರಗೌಡ ಪಾಟೀಲ, ಅಲ್ತಾಫ್ ಬಾಗವಾನ, ಬಿ. ಆರ್.ಅಲ್ಲಯ್ಯನವರಮಠ ಇತರರು ಉಪಸ್ಥಿತರಿದ್ದರು.

Comments