UK Suddi
The news is by your side.

ಇಂದಿನಿಂದ ಮುನವಳ್ಳಿ ವೀರಭಧ್ರೇಶ್ವರ ದೇವಾಲಯ ಜಾತ್ರಾ ಮಹೋತ್ಸವ.

ಮುನವಳ್ಳಿ(ಬೆಳಗಾವಿ):ಇಂದಿನಿಂದ ಇತಿಹಾಸಪ್ರಸಿದ್ದ ಮುನವಳ್ಳಿಯ ಶ್ರೀ ವೀರಭದ್ರೇಶ್ವರ ದೇವಾಲಯದ ಪುರಾಣ ಪ್ರವಚನದೊಂದಿಗೆ ಮೇ 11 ರ ವರೆಗೆ ಸಾಮೂಹಿಕ ಗುಗ್ಗಳೋತ್ಸವ,ಸಾಮೂಹಿಕ ವಿವಾಹ ಸಮಾರಂಭ,ಅಯ್ಯಾಚಾರ,ಲಿಂಗದೀಕ್ಷೆ,ಹಾಗೂ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು,ಬಾಳೆಹೊನ್ನೂರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ.ನೂತನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಸುತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಜರುಗುತ್ತಿವೆ.

ದಿನಾಂಕ 30-4-2019 ರಿಂದ 10-5-2019 ರ ವರೆಗೆ ಪ್ರತಿದಿನ ಸಂಜೆ 6-30 ರಿಂದ 8 ಗಂಟೆಯವರೆಗೆ “ಶ್ರೀ ವೀರಭದ್ರೇಶ್ವರ ಪುರಾಣ” ಪ್ರವಚನವು ಸವದತ್ತಿ ಮೂಲಿಮಠದ ಶ್ರೀ ಮ.ಘ.ಚ.ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಜರುಗುವುದು.ಪ್ರತಿನಿತ್ಯ ಮಹಾಪ್ರಸಾದ ಇರುತ್ತದೆ.1-5-2019 ರಿಂದ ದಿನಾಂಕ 8-5-2019 ರ ವರೆಗೆ ಪ್ರತಿದಿನ ಪ್ರವಚನದ ನಂತರ ದೇವಸ್ಥಾನ ಜೀರ್ಣೋದ್ಧಾರದ ಸೇವಾ ದಾನಿಗಳಿಗೆ ಗೌರವ ಸನ್ಮಾನ ಜರುಗುವುದು.

ರವಿವಾರ ದಿನಾಂಕ 5-5-2019 ರಂದು ಮುಂಜಾನೆ 8 ಗಂಟೆಗೆ ಶ್ರೀ ವೀರಭದ್ರೇಶ್ವರ ನೂತನ ಮೂರ್ತಿಯನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರತಿ ಹಾಗೂ ಪೂರ್ಣಕುಂಭ ಹೊತ್ತ ಸುಮಂಗಲೆಯರು ಪರುವಂತರ ಒಡಪುಗಳು ಗಜರಾಜ ಮತ್ತು ಸಕಲ ವಾದ್ಯವೃಂದದೊಂದಿಗೆ ವೈಭವದ ಮೆರವಣಿಗೆ ಮೂಲಕ ಸಂಚರಿಸುತ್ತ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತರಲಾಗುವುದು.

ಬುಧವಾರ ದಿನಾಂಕ 8-5-2019 ರಂದು ಮುಂಜಾನೆ 9 ಗಂಟೆಗೆ ಶ್ರೀ ಷ.ಬ್ರ.ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಗುರುಗಡದೇಶ್ವರ ಸಂಸ್ಥಾನ ಹಿರೇಮಠ ಕಟಕೋಳ ಎಂ.ಚಂದರಗಿ ಇವರ ಅಮೃತ ಹಸ್ತದಿಂದ ವೀರಮಾಹೇಶ್ವರ ವಟುಗಳಿಗೆ ಅಯ್ಯಾಚಾರ ಹಾಗೂ ಭಕ್ತರಿಗೆ ಲಿಂಗದೀಕ್ಷೆ ಕಾರ್ಯಕ್ರಮ ಜರುಗುವುದು.ಸಂಜೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ರುದ್ರಹೋಮ ಜರುಗುವುದು.
ಗುರುವಾರ ದಿನಾಂಕ 9-5-2019 ರಂದು ಬೆಳಿಗ್ಗೆ ಪೂರ್ಣಾಹುತಿ,ಮಹಾರುದ್ರಾಭಿಷೇಕ,ನಂತರ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪ್ರಾಣಪ್ರತಿಷ್ಠಾಪನೆಯು ಹರ-ಗುರು-ಚರ ಮೂರ್ತಿಗಳ ಸಾನಿಧ್ಯದಲ್ಲಿ ಜರುಗುವುದು.ನಂತರ ವೀರಪುರವಂತರ ಉಪಸ್ಥಿತಿಯಲ್ಲಿ ಸಾಮೂಹಿಕ ಗುಗ್ಗಳೋತ್ಸವ ಜರುಗುವುದು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತಲಿರುವ ಪೂಜ್ಯರು.ಶ್ರೀ ಮೂರುಸಾವಿರಮಠ ಹುಬ್ಬಳ್ಳಿ.ಮುನವಳ್ಳಿ ಸಿಂದೋಗಿ ಹಾನಗಲ್‍ದ ಶ್ರೀಮದ್ ಮ.ನಿ.ಜಗದ್ಗುರು ಗುರುಸಿದ್ದ ರಾಜಯೋಗೀಂದ್ರಮಹಾಸ್ವಾಮಿಗಳು ತುಮಕೂರು ಜಿಲ್ಲೆಯ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರಮಠದ ಶ್ರೀ.ಮ.ನಿ.ಪ್ರ.ಶಿವಾನುಭವ ಚರವರ್ಯ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು.ಕಟಕೋಳ ಎಂ.ಚಂದರಗಿಯಶ್ರೀ ಗುರುಗಡದೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು.ಮಿರಜ-ಮುನವಳ್ಳಿಯ ಶ್ರೀ ರುದ್ರಪಶುಪತಿಮಠದ ಶ್ರೀ ಷ.ಬ್ರ.ಗುರುನಿರ್ವಾಣ ರುದ್ರಪಶುಪತಿ ಮಹಾಸ್ವಾಮಿಗಳು ಉರ್ಫ ವಿಜಯ ಮಹಾಸ್ವಾಮಿಗಳು. ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ ಶ್ರೀ ಗಚ್ಚಿನ ಸಂಸ್ಥಾನ ಹಿರೇಮಠದ ಶ್ರೀ.ಮ.ಘ.ಚ.ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು. ಮುನವಳ್ಳಿ ಭಂಡಾರಹಳ್ಳಿಯ ಶ್ರೀ ಸೋಮಶೇಖರಮಠದ ಶ್ರೀ ಮ.ನಿ.ಪ್ರ.ಮುರುಘೇಂದ್ರ ಮಹಾಸ್ವಾಮಿಗಳು ಸವದತ್ತಿ ಮೂಲಿಮಠದ ಶ್ರೀ ಮ.ಘ.ಚ.ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿರುವರು.

ಗುಗ್ಗಳೋತ್ಸವದಲ್ಲಿ ಪುರವಂತರು ಶಸ್ತ್ರ ಹಾಕಿಸಿಕೊಳ್ಳುವ,ಅವರ ಹೇಳುವ ವೀರಾವೇಷದ ಒಡಬುಗಳು ಜಾನಪದ ಸಾಹಿತ್ಯದ ಸಾಮಗ್ರಿಗಳಾಗಿವೆ. ವೀರಭದ್ರದೇವರ ಕುರಿತ ಒಡಬಿಗೆ ಒಂದು ಉದಾಹರಣೆ;
ಅಹಾ ವೀರಾ; ಆಹ ಹಾ ರುದ್ರ ;
ನಮ್ಮ ಶ್ರೀ ವೀರಭದ್ರದೇವರು ಹೇಗಿರ್ದರೆಂದರೆ :
ಅಯ್ಯಾ ಪ್ರಳಯದುರಿ ಮೂರ್ತಿಗೊಂಡಂತೆ : ಕಿಡಿಯನುಗುಳುವ ಕಣ್ಣು:ಲಲಾಟದಲ್ಲಿ ಪುಂಡ್ರ;
ಕೈಯಲ್ಲಿ ಮಸೆದೆಲಗು:ರಣಚೂರಿ ಕಠಾರಿ;
ವೀರಬಾಣ ಹೊಗೆಬಾಡಾ;

ವಜ್ರಬಾಣ ರತ್ನಗತ್ತಿ;ಉರುಲಿನ ಹಗ್ಗ; ಇಂತೀ ಆಯುಧ ಸನ್ನದ್ದನಾಗಿ; ಹೋ ಎಂದು ಕೂಗಿ ಆರ್ಭಟಿಸಿ; ದಕ್ಷನ ಯಜ್ಞಭೂಮಿಯನ್ನು ಹೊಕ್ಕು; ; ಅಲ್ಲಿ ಕೂಡಿದ ಕೋಟಿಗಟ್ಟಲೆ ದೇವತೆಗಳನ್ನು ಕಂಡು; ಕಮ್ಮನೇ ಕೆಮ್ಮಲು;ಕೆಂಡದುಂಡಿಗಳು ಉರಿದೆದ್ದವಯ್ಯ:
ಎಂಬ ಈ ವಡಬು ದಕ್ಷನ ಯಜ್ಞವನ್ನು ವೀರಭದ್ರ ನಾಶಪಡಿಸುವ ಕಥೆಯನ್ನು ಒಳಗೊಂಡಿದ್ದು ಇಂಥ ಅನೇಕ ಒಡಬುಗಳನ್ನು ಪುರವಂತರು ಗುಗ್ಗಳಸಂದರ್ಭದಲ್ಲಿ ಹೇಳುವುದನ್ನು ಕಂಡರೆ ಮೈರೋಮಾಂಚನಗೊಳ್ಳುವುದು,
ಶುಕ್ರವಾರ ದಿನಾಂಕ 10-5-2019 ರಂದು ಮುಂಜಾನೆ 10-30 ಕ್ಕೆ ಹರ ಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹಗಳು ಜರುಗುವವು.ಸಂಜೆ ಪ್ರವಚನ ಮಂಗಲ ಜರುಗಿ ಕಾರ್ಯಕ್ರಮ ಮಂಗಲಗೊಳ್ಳುವುದು.
ಶನಿವಾರ 11-5-2019 ರಂದು ಮುಂಜಾನೆ 9 ಗಂಟೆಗೆ ಶ್ರೀ ಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು. ಬಾಳೆಹೊನ್ನೂರ. ಜಗದ್ಗುರು ಮಹಾಸನ್ನಿಧಿಯವರ ಅಡ್ಡಪಲ್ಲಕ್ಕಿ ಮಹೋತ್ಸವವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊರಟು ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ತಲುಪುವುದು.ಎಂದು ಶ್ರೀ ವೀರಭದ್ರೇಶ್ವರ ಜೀರ್ಣೋದ್ಧಾರ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿರುವರು.

ವೀರಭದ್ರ ದೇಗುಲದ ಹಿನ್ನಲೆ

ದಕ್ಷಬ್ರಹ್ಮನ ಯಜ್ಞ ಕಾಲದಲ್ಲಿ ಪರಶಿವನ ಆಜ್ಞೆಯಂತೆ ಉದಿಸಿದ ವೀರಭದ್ರನು ಸವದತ್ತಿಯ ರೇಣುಕಾದೇವಿಯ ಸಹೋದರ ಸ್ವರೂಪ.ವೀರಭದ್ರ ಎಂಬ ದೈವ ಸ್ವರೂಪದ ಬಗ್ಗೆ ಅನೇಕ ಕಥೆಗಳಿವೆ ದ್ರಾವಿಡ ಪುರುಷ ಎಂತಲೂ,ಶಿವನ ವೀರಸೇನಾನಿ ಎಂದೂ ಕರೆಯುವ ವೀರಭದ್ರ.ರುದ್ರ ಹಾಗೂ ಕಾಳಿಕಾದೇವಿಯ ಪುತ್ರ.ಈತನ ಮಡದಿ ಭದ್ರಕಾಳಿ.ಅಂದಹಾಗೆ ಭಾರತದಾದ್ಯಂತ ವೀರಭದ್ರದೇವರ ದೇವಾಲಯಗಳಿದ್ದು ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಸಿದ್ದವಾದವುಗಳಲ್ಲಿ ರಂಭಾಪುರಿ ಪೀಠದ ವೀರ ಸಂಸ್ಥಾನ ಪೀಠದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ.ಪಂಚವಟಿ ವೀರಭದ್ರೇಶ್ವರ.ಗೊಡಚಿ ವೀರಭದ್ರ ದೇವಾಲಯ,ಕಾರಟಗಿ ವೀರಭದ್ರ ದೇವಾಲಯ,ತಡಕೋಡ ವೀರಭದ್ರ ದೇವಾಲಯ.ರಾಯ್ ಚೋಟಿ ವೀರಭದ್ರ ದೇವಾಲಯ,ಶಿಂಗಟಾಲೂರಿನ ವೀರಭದ್ರ.ಬೆಳಗಾವಿಯ ವೀರಭದ್ರ.ಯಡೂರ ವೀರಭದ್ರ ದೇವಾಲಯಗಳು ಪ್ರಸಿದ್ದಿಹೊಂದಿವೆ.
ಮುನವಳ್ಳಿಯಲ್ಲಿಯೂ ಕೂಡ ಇತಿಹಾಸ ಪ್ರಸಿದ್ದ ವೀರಭದ್ರ ದೇವಾಲಯವಿದೆ.ಮುನವಳ್ಳಿ ಗ್ರಾಮದ ಮುಖ್ಯ ಅಗಸಿ ಬಾಗಿಲಿನಿಂದ ಊರ ಒಳಗಡೆ ಪೇಟೆ ರಸ್ತೆಯಲ್ಲಿ ವೀರಭಧ್ರೇಶ್ವರ ದೇವಾಲಯವಿದೆ. ಇದು ಐತಿಹಾಸಿಕವಾಗಿದ್ದು ಮುಂಚೆ ಇದು”ಕಲ್ಮೇಶ್ವರ” ದೇವಾಲಯವಾಗಿದ್ದು ಶಿಥಿಲಾವಸ್ಥೆಯಲ್ಲಿತ್ತು. ರಾಮದುರ್ಗ ತಾಲೂಕಿನ ಪ್ರಸಿದ್ಧ ಗೊಡಚಿ ವೀರಭಧ್ರೇಶ್ವರ ದೇವಾಲಯದವರು “ವೀರಭಧ್ರೇಶ್ವರ ದೇವರ” ಮೂರ್ತಿ ಪ್ರತಿಷ್ಠಾಪಿಸಲೆಂದು ಮಲಪ್ರಭಾ ದಡದ ಮಾರ್ಗವಾಗಿ ಮೂರ್ತಿಯೊಂದಿಗೆ ಭಕ್ತ ಸಮೂಹ ಗೊಡಚಿಗೆ ಹೊರಟಾಗ ಕತ್ತಲಾದ್ದರಿಂದ ಇಲ್ಲಿನ ಕಲ್ಮೇಶ್ವರ ದೇವಾಲಯದಲ್ಲಿ ಉಳಿದುಕೊಳ್ಳಬೇಕಾಗಿ ಬಂದಿತು.
ತಮ್ಮೊಡನೆ ತಂದಿದ್ದ ವೀರಭದ್ರ ಮೂರ್ತಿಯನ್ನು ಒಂದೆಡೆ ಇರಿಸಿ ಆ ರಾತ್ರಿ ಮುನವಳ್ಳಿಯಲ್ಲಿಯೇ ಕಳೆದು ಮರುದಿನ ಹೊರಡಲನುವಾದಾಗ ರಾತ್ರಿ ಇರಿಸಿದ್ದ ಸ್ಥಳದಿಂದ ಮೂರ್ತಿ ಕದಲಿಲ್ಲವಂತೆ. ಎಲ್ಲರಿಗೂ ಆಶ್ಚರ್ಯ. ಆಗ ಅವರಲ್ಲಿದ್ದ ಹಿರಿಯರೊಬ್ಬರು. ತಾವು ಯಾವ ಸ್ಥಳದಿಂದ ಈ ಮೂರ್ತಿ ಹೊತ್ತೊಯ್ಯುತ್ತಿದ್ದೆವೋ ನಂತರ ತಲುಪಬೇಕಾದ ಸ್ಥಳಕ್ಕೆ ಹಗಲು-ರಾತ್ರಿ ಎನ್ನದೆ ಪಯಣ ಬೆಳೆಸಬೇಕಾಗಿತ್ತು. ಹಾಗೆ ಮಾಡದೆ ಇಲ್ಲಿ ಉಳಿದುಕೊಂಡಿದ್ದರಿಂದ ಆ ಮೂರ್ತಿ ಇಟ್ಟ ಸ್ಥಳದಿಂದ ಕದಲುತ್ತಿಲ್ಲ ಇದನ್ನು ಇಲ್ಲಿಯೇ ಪ್ರತಿಷ್ಠಾಪಿಸಿ.ಮತ್ತೊಂದು ಮೂರ್ತಿ ಮಾಡಲು ಶಿಲ್ಪಿಗೆ ಹೇಳೋಣ ಅದನ್ನು ಗೊಡಚಿಯಲ್ಲಿ ಪ್ರತಿಷ್ಠಾಪಿಸಿದರಾಯಿತು ಎಂದು ತಿಳಿಸಲು ನಿರ್ಮಿಸಿದ ದೇಗುಲವೇ “ವಸತಿ ವೀರಭಧ್ರ” ಎಂದಾಗಿ “ವೀರಭಧ್ರ ದೇವಾಲಯ” ಮುನವಳ್ಳಿಯಲ್ಲಿ ನಿರ್ಮಾಣಗೊಂಡಿತು ಎಂದು ದೇವಾಲಯದ ಇತಿಹಾಸ ತಿಳಿಸುತ್ತದೆ.
ಕಲ್ಮೇಶ್ವರ ದೇಗುಲದ ಭಗ್ನಾವಶೇಷಗಳು ಕೂಡ ಇಂದಿಗೂ ಉಳಿದಿವೆ.ದೇವಾಲಯದ ಬಲಭಾಗ ಈಶ್ವರಲಿಂಗ, ಎಡಭಾಗದಲ್ಲಿ ಬ್ರಹ್ಮದೇವರು(ಭರಮಪ್ಪ) ಶಿಲ್ಪಗಳಿದ್ದು ಇಲ್ಲಿನ “ವೀರಭದ್ರ” ಮೂರ್ತಿಯ ದಕ್ಷಿಣಾಭಿಮುಖವಾಗಿರುವುದು ವಿಶೇಷ. ಗರ್ಭಗುಡಿಯಲ್ಲಿರುವ ವೀರಭದ್ರ ವಿಗ್ರಹವು ಚತುರ್ಭುಜವನ್ನು ಹೊಂದಿದ್ದು ಬಲ ಮುಂಗೈಯಲ್ಲಿ ಖಡ್ಗ,ಎಡ ಮುಂಗೈಯಲ್ಲಿ ವೃತ್ತಾಕಾರದ ಗುರಾಣಿ,ಬಲ ಹಿಂಗೈಯಲ್ಲಿ ತ್ರಿಶೂಲ,.ಎಡ ಹಿಂಗೈಯಲ್ಲಿ ನಾಗರ ಹಡೆ ಹಿಡಿದು ಹಸ್ತನಾಗರ ರೂಪದ ಮೂರ್ತಿ ರುಂಡಮಾಲಧಾರಿಯಾಗಿದೆ.ಈ ಮೂರ್ತಿ ಎದುರಿಗೆ ನಂದಿ ವಿಗ್ರಹವಿದೆ. ಪ್ರತಿ ವರ್ಷ ಶ್ರಾವಣ ಮಾಸದ ನೂಲ ಹುಣ್ಣಿಮೆಯ ದಿನದಂದು ವೀರಭಧ್ರೇಶ್ವರ ಜಾತ್ರೆ ಜರುಗುತ್ತದೆ.ಈಗ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದು ನೂತನವಾಗಿ ದೇವಾಲಯ ಕಂಗೊಳಿಸುತ್ತಿದೆ.ತನಿಮಿತ್ತ ಶ್ರೀ ರಂಭಾಪುರಿ ಜಗದ್ಗುರು ಮಹಾಸನ್ನಿಧಿಯವರ ಪಾವನ ಸಾನಿಧ್ಯದಲ್ಲಿ ದೇವಸ್ಥಾನದ ಕಾರ್ಯಕ್ರಮಗಳು ಪುರಾಣ.ಗುಗ್ಗಳೋತ್ಸವ.ಸರ್ವಧರ್ಮ ಸಾಮೂಹಿಕ ವಿವಾಹಗಳು ಈ ಸಂದರ್ಭದಲ್ಲಿ ಜರುಗುತ್ತಿವೆ
ಶ್ರೀ ವೀರಭದ್ರ ದೇವರ ಅಷ್ಟೋತ್ತರ ನಾಮಾವಳಿ ಓಂ ಶಂಭವೇ ನಮ:
ಓಂ ರುದ್ರಾಯ ನಮ:
ಓಂ ಭದ್ರಾಯ ನಮ:
ಓಂ ವೀರಭದ್ರಾಯ ನಮ:
ಓಂ ಹಿರಣ್ಯಬಾಹವೇ ನಮ:
ಓಂ ಸಹಮಾನಾಂiÀi ನಮ:
ಓಂ ನಿವ್ಯಾಧೀನ ಅವಯಾಧೀನೀನಾಂ ನಮ:
ಓಂ ಅಸ್ವೇಭ್ಯೋ ಅಶ್ವಪತಿಭ್ಯಶ್ಛ ನಮ:
ಓಂ ವೀರಸೇನಾನಿನೇ ನಮ: [10]
ಓಂ ಪಶುಪತಯೇ ನಮ:
ಓಂ ನೀಲಗ್ರೀವಾಯ ನಮ:
ಓಂ ಕಪರ್ದೀನೇ ನಮ:
ಓಂ ಶತಧನ್ವಿನೇ ನಮ:
ಓಂ ಗಿರೀಶಾಯ ನಮ:
ಓಂ ಜೇಷ್ಠಾಯ ನಮ:
ಓಂ ಪೂರ್ಜಾಯ ನಮ:
ಓಂ ಶೂರಾಯ ನಮ:
ಓಂ ಧೀರಾಯ ನಮ: [20]
ಓಂ ಜಗಧೀಶ್ವರಾಯ ನಮ:
ಓಂ ಜಯಶೀಲಾಯ ನಮ:
ಓಂ ಜಗದ್ರಕ್ಷಾಯ ನಮ:
ಓಂ ಪತಿತಪಾವನಾಯ ನಮ:
ಓಂ ಪರಬ್ರಹ್ಮರೂಪಾಯ ನಮ:
ಓಂ ವಿರಾಟ್ ರೂಪಾಯ ನಮ:
ಓಂ ವಿಶ್ವಜ್ಯೋತಿಷೇ ನಮ:
ಓಂ ದುಂದುಭ್ಯಾಯ ನಮ:
ಓಂ ದೂತಾಯ ನಮ:
ಓಂ ಪ್ರಹಿತಾಯ ನಮ: [30]
ಓಂ ನಿಷಂಗಿನೇ ನಮ:
ಓಂ ಸ್ಸುದ್ಯಾಯ ನಮ:
ಓಂ ಸರಸ್ಯಾಯ ನಮ:
ಓಂ ಮೇಘಾಯ ನಮ:
ಓಂ ವಿದ್ಯುದಾಯ ನಮ:
ಓಂ ವಾಸ್ತವ್ಯಾಯ ನಮ:
ಓಂ ವಾಸ್ತುಪಾಯಾಯ ನಮ:
ಓಂ ಗುರುವೇ ನಮ:
ಓಂ ಜಗದ್ಗುರವೇ ನಮ: [40]
ಓಂ ಸದ್ಗುರವೇ ನಮ:
ಓಂ ಉಗ್ರಾಯ ನಮ:
ಓಂ ಭೀಮಾಯ ನಮ:
ಓಂ ವೃಕ್ಷೇಭ್ಯೋ ನಮ:
ಓಂ ಹರಿಕೇಶೇಭ್ಯೋ ನಮ:
ಓಂ ತಾರಕಾಯ ನಮ:
ಓಂ ಶಂಕರಾಯ ನಮ:
ಓಂ ಶಿವಾಯ ನಮ:
ಓಂ ಕೂಲ್ಯಾಯ ನಮ: [50]
ಓಂ ವಾರ್ಯಾ ನಮ:
ಓಂ ಪ್ರತರಣಾಯ ನಮ:
ಓಂ ಉತ್ತರಣಾಯ ನಮ:
ಓಂ ಹಿರಣ್ಯಾಯ ನಮ:
ಓಂ ಪ್ರಪದ್ಯಾಯ ನಮ:
ಓಂ ಕಿಂಞ್ಛಸಾಯ ನಮ:
ಓಂ ಪುಲಸ್ತಯೇ ನಮ:
ಓಂ ಗೋಷ್ವೈಯ ನಮ:
ಓಂ ಗೃಹ್ಯಾಯ ನಮ:
ಓಂ ಕಾಟ್ಯಾಯ ನಮ: [60]
ಓಂ ಹೃದಯಾಯ ನಮ:
ಓಂ ಹರಿತ್ಯಾಯ ನಮ:
ಓಂ ಲೋಪ್ಯಾಯ ನಮ:
ಓಂ ಲಪ್ಯಾಯ ನಮ:
ಓಂ ಉರ್ವ್ಯಾಯ ನಮ:
ಓಂ ಸೂಮ್ರ್ಯಾಯ ನಮ:
ಓಂ ಪಣ್ರ್ಯಾಯ ನಮ:
ಓಂ ಅಖ್ಖಿದತೇಭ್ಯೋ ನಮ:
ಓಂ ಪ್ರಖ್ಖಿದತೇಭ್ಯೋ ನಮ:
ಓಂ ಕಿರಿಕೇಭ್ಯೋ ನಮ: [70]
ಓಂ ದೇವನಾಗಂ ಹೃದಯೇ ನಮ:
ಓಂ ಹೃದಯೇಸ್ಥಾಯ ನಮ:
ಓಂ ವಿಕ್ಷೀಣಕೆಭ್ಯೋ ನಮ:
ಓಂ ಅನಿರ್ಹತೇಭ್ಯೋ ನಮ:
ಓಂ ಸದ್ಯೋಜಾತಾಯ ನಮ:
ಓಂ ಭವೋದ್ಭವಾಯ ನಮ:
ಓಂ ವಾಮದೇವಾಯ ನಮ:
ಓಂ ಕಾಲಾಯ ನಮ:
ಓಂ ಕಲವಿಕರ್ಣಾಯ ನಮ:
ಓಂ ಬಲವಿಕರ್ಣಾಯ ನಮ: [80]
ಓಂ ಬಲಪ್ರಮಥನಾಯ ನಮ:
ಓಂ ಸರ್ವಭೂತದಮನಾಯ ನಮ:
ಓಂ ಮನೋನ್ಮನಾಯ ನಮ:
ಓಂ ಅಘೋರೇಭ್ಯೋ ನಮ:
ಓಂ ಘೋರೇಭ್ಯೋ ನಮ:
ಓಂ ಘೋರಘೋರತರೇಭ್ಯೋ ನಮ:
ಓಂ ತತ್ಪುರುಷಾಯ ನಮ:
ಓಂ ದೇವಾಯ ನಮ:
ಓಂ ಮಹಾದೇವಾಯ ನಮ:
ಓಂ ಮೃತ್ಯುಂಜಯಾಯ ನಮ: [90]
ಓಂ ತ್ರಂಬಕಾಯ ನಮ:
ಓಂ ಪುಷ್ಠಿವರ್ಧನಾಯ ನಮ:
ಓಂ ವಿರುಪಾಕ್ಷಾಯ ನಮ:
ಓಂ ವಿಶ್ವರೂಪಾಯ ನಮ:
ಓಂ ದಿವ್ಯಾಯ ನಮ:
ಓಂ ಸತ್ಯಾಯ ನಮ:
ಓಂ ಸಗುಣಾಯ ನಮ:
ಓಂ ನಿರ್ಗುಣಾಯ ನಮ:
ಓಂ ನಿರಾಕಾರಾಯ ನಮ:
ಓಂ ನಿರಂಜನಾಯ ನಮ: [100]
ಓಂ ನಿಜಮೂರ್ತಯೇ ನಮ:
ಓಂ ಭಕ್ತಪ್ರಿಯಾಯ ನಮ:
ಓಂ ಭಕ್ತಪ್ರಿಯಾಯ ನಮ:
ಓಂ ಭವರೋಗ ವೈದ್ಯಾಯ ನಮ:
ಓಂ ಭೂಪತಯೇ ನಮ:
ಓಂ ಸರ್ವಾಂತರ್ಯಾಮಿಯೇ ನಮ:
ಓಂ ಅಗ್ನಿಹೋತ್ರಾತ್ಮನೇ ನಮ:
ಓಂ ಸರೇಭ್ಯ:ಸರ್ವಸರ್ವೇಭ್ಯೋ ನಮ:
ಓಂ ಅಘೋರಾಯ ನಮ: [108]

-ವೈ.ಬಿ.ಕಡಕೋಳ
9449518400,

Comments